ಡಿಪೆÇ್ಲೀಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್, ತರಬೇತಿಗೆ ಅರ್ಜಿ ಆಹ್ವಾನ

ಬೆಳಗಾವಿ, ನ.10 : ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಬೆಳಗಾವಿ 6 ತಿಂಗಳ/180 ದಿನಗಳ ಅವಧಿಯ ದೂರ ಶಿಕ್ಷಣ (ಡಿ.ಸಿ.ಎಂ) ಡಿಪೆÇ್ಲೀಮಾ ಇನ್ ಕೋ- ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿಗಳ ಆಹ್ವಾನಿಸಲಾಗಿದೆ.
ತರಬೇತಿಗೆ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ಸಹಕಾರ ಸಂಘ-ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಇದು ದೂರ ಶಿಕ್ಷಣ ತರಬೇತಿ ಆಗಿದ್ದು ಸಹಕಾರ ಸಂಘಗಳ ಸಿಬ್ಬಂದಿಗಳು ಪದೋನ್ನತಿ ಹೊಂದಲು ಕಡ್ಡಾಯವಾಗಿದು, ಸಹಕಾರ ಸಂಘ ಸಂಸ್ಥೆಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗಳು ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ.
ನ.8 2023 ರಿಂದ ನ.30 2023 ರೊಳಗಾಗಿ ಅರ್ಜಿ ಗಳನ್ನು ಖುದ್ದಾಗಿ/ ಆನ್‍ಲೈನ್ ಮೂಲಕ ಪಡೆದು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಕೆ.ಐ.ಸಿ.ಎಂ.ರಾಮತೀರ್ಥನಗರ ಬೆಳಗಾವಿ ಅವರನ್ನು ಸಂಪರ್ಕಿಸಬಹುದು, ಆನ್‍ಲೈನ್ ಲಿಂಕ್ ತಿತಿತಿ.ಞseಜಿಜಛಿm.ಛಿo.iಟಿ ಬೆಟ್ಟಿ ನೀಡಬಹುದು, ಹಾಗೂ ದೂರವಾಣಿ ಸಂಖ್ಯೆ: 0831-2950026, ಮೊ: 9449007661, 8884259545, 8050533207, ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿಯ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಪ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.