Belagavi News In Kannada | News Belgaum

ಮತದಾರರ ಪಟ್ಟಿಗಳ ಆಕ್ಷೇಪಣೆ: ದೂರವಾಣಿ ಮೂಲಕ ಸಲ್ಲಿಸಲು ಕೋರಿಕೆ

ಬೆಳಗಾವಿ, ನ.10 : ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಬೆಳಗಾವಿ ಜಿಲ್ಲೆಯ ಮತದಾರರ ಪಟ್ಟಿಗಳ ವೀಕ್ಷಕರಾಗಿ ಬೆಂಗಳೂರು ಮೆಟ್ರೋ ರೈಲ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರನ್ನು ನಿಯೋಜಿಸಲಾಗಿದೆ.
ಆದಕಾರಣ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಗಳ ಕುರಿತು ಯಾವುದೇ ತಕರಾರು/ದೂರುಗಳಿದ್ದಲ್ಲಿ ಸಾರ್ವಜನಿಕರು ತಮ್ಮ ಆಕ್ಷೇಪಣೆ/ಸಲಹೆಯನ್ನು ಅವರ ಮೊಬೈಲ್ ಸಂಖ್ಯೆ 9448378644 ಗೆ ಕರೆ ಮಾಡಿ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.