Belagavi News In Kannada | News Belgaum

ಚುನಾವಣೆಗೆ ಅಭ್ಯರ್ಥಿ ಆಯ್ಕೆಗಾಗಿಲೋಕಸಭಾ ಸಭೆ, ಚರ್ಚೆ ಆಗಿಲ್ಲ: ಶಾಸಕ ಲಕ್ಷ್ಮಣ್​ ಸವದಿ

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ ಇದೆ. ಅದಕ್ಕೆ ಪೂರಕವಾಗಿ ಎಲ್ಲಾ ರೀತಿಯ ಸಿದ್ಧತೆಗಳು ನಡೆಸಿದೆ ಎಂದು ಶಾಸಕ ಲಕ್ಷ್ಮಣ್​ ಸವದಿ ಹೇಳಿದ್ದಾರೆ…

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಮತ್ತು ಕುರುಬ ಸಮುದಾಯಗಳ ಮತ ಸೆಳೆಯುವ ಯತ್ನ ನಡೆಯುತ್ತಿದೆಯಾ?  ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಎಲ್ಲ ಸಮುದಾಯವನ್ನು ನಾವು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ..

ಇನ್ನು ಪುತ್ರ ಚಿದಾನಂದ ಸವದಿ ಹೆಸರು ಲೋಕಸಭೆಗೆ ಕೇಳಿ ಬರುತ್ತಿರುವ ಬಗ್ಗೆ ನಮ್ಮಲ್ಲಿ ಅಭ್ಯರ್ಥಿ ಆಯ್ಕೆಗೆ ಸಭೆ ಮತ್ತು ಚರ್ಚೆ ಆಗಿಲ್ಲ..

ಎಲ್ಲವೂ ಕೂಡ ಊಹಾಪೋಹಗಳಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಚುನಾವಣೆ ಬರಲಿ ಯಾರು ಎಷ್ಟೆಷ್ಟು ಗೆಲ್ತಾರೆ ಅಂತ ನೋಡೋಣ ಎಂದಿದ್ದಾರೆ..

 

“ಮಹದಾಯಿ ಜಾರಿಗೆ ಆಗ್ರಹಿಸಿ ಬಸವರಾಜ ಬೊಮ್ಮಾಯಿ ಪ್ರತಿಭಟಿಸಿದ್ದರು. ಅವರು ಜೆಡಿಎಸ್​ನಲ್ಲಿದ್ದಾಗಲೂ ಪ್ರತಿಭಟನೆ ಮಾಡಿದ್ದರು. ಅವರೇ ಸಿಎಂ ಆಗಿದ್ದರು. ಅವರದ್ದೇ ಕನಸಿನ ಕೂಸು ಆಗಿತ್ತು. ಗೋವಾ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ಅವರು ಅದಕ್ಕೆ ಆಸಕ್ತಿ ತೋರಿಸಲಿಲ್ಲ. ಸಿಸಿ ಪಾಟೀಲ್ ಸಹ ಜೆಡಿಎಸ್​ನಲ್ಲಿದ್ದಾಗ ಪ್ರತಿಭಟನೆ ಮಾಡಿದ್ದರು..

 

ಆ ಹಳೆಯ ಫೋಟೋಗಳು ಸಹ ಇವೆ. ಅವರ ಕಾಲದಲ್ಲಿ ಮಹದಾಯಿ ಆಗಬೇಕಿತ್ತು. ಉದಾಸೀನ ಮಾಡಿದರೋ, ಮತ್ತೇನು ಕಾರಣವೋ ಗೊತ್ತಿಲ್ಲ. ಈಗ ಬೆಳಗಾವಿ ಅಧಿವೇಶನದಲ್ಲಾದರೂ ಸಹ ಧ್ವನಿ ಎತ್ತುತ್ತಾರಾ? ಎಂದು ಕಾದು ನೋಡಬೇಕು” ಎಂದರು..

 

“ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಅಥಣಿಯಿಂದ ಬೆಳಗಾವಿಗೆ ಬರಬೇಕು ಅಂದರೆ 200 ಕಿ.ಮೀ ಬೇಕು. ಜಿಲ್ಲೆ ಗೋಕಾಕ್ ಆಗಬೇಕು ಎಂದರೆ ಬೈಲಹೊಂಗಲದವರು ನಮ್ಮದು ಆಗಲಿ ಅಂತಿದ್ದಾರೆ. ಬೈಲಹೊಂಗಲ ಎಂದರೆ ಗೋಕಾಕ್​ನವರು ನಮ್ಮದೇ ಜಿಲ್ಲೆಯಾಗಲಿ ಎನ್ನುತ್ತಿದ್ದಾರೆ. ಇನ್ನು ಅಥಣಿ ಭಾಗದ ಜನರ ಬೇಡಿಕೆ ಕೂಡ ಇದೆ ಎಂದು ತಿಳಿಸಿದ್ದಾರೆ..

 

ರಾಯಬಾಗ, ಅಥಣಿ, ಕಾಗವಾಡ ಕುಡಚಿ ನಾಲ್ಕು ಕ್ಷೇತ್ರ ಮತ್ತು ರಬಕವಿ ಬನಹಟ್ಟಿ, ತೇರದಾಳ ಸೇರಿಸಿ 6 ಕ್ಷೇತ್ರಗಳನ್ನು ಒಳಗೊಂಡು ಅಥಣಿ ಜಿಲ್ಲೆಯನ್ನಾಗಿ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗಾಗಿ ಈ ಅಧಿವೇಶನದಲ್ಲಿ ಆರು ಕ್ಷೇತ್ರದ ಶಾಸಕರು ತಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ ಒಂದು ನಿರ್ಧಾರ ಮಾಡಬಹುದು” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು..