ಕ್ರಿಕೆಟ್ ಭಾರತ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ

ಮುಂಬೈ: ನಿನ್ನೆಯಷ್ಟೇ ಭಾರತ ಕ್ರಿಕೆಟ್ ತಂಡ ಸೆಮಿ ಫೈನಲ್ ಗೆದ್ದು, ಫೈನಲ್ ತಲುಪಿದೆ. ಇಡೀ ದೇಶಕ್ಕೆ ದೇಶವೇ ಟೀಮ್ ಬಗ್ಗೆ ಕೊಂಡಾಡುತ್ತಿದೆ. ಆದರೆ, ನಟಿ ತೆಲುಗಿನ ನಟಿ ರೇಖಾ ಬೊಜ್ ಮತ್ತೊಂದು ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ..
ಭಾರತ ಕ್ರಿಕೆಟ್ ತಂಡವು ಫೈನಲ್ ನಲ್ಲಿ ಗೆದ್ದರೆ ತಾವು ವಿಶಾಖಪಟ್ಟಣಂ ಬೀಚ್ ನಲ್ಲಿ ಬೆತ್ತಲೆಯಾಗಿ ನಡೆಯುತ್ತೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ…
12 ವರ್ಷಗಳ ಹಿಂದೆ ಬಾಲಿವುಡ್ ನಟಿ ಪೂನಂ ಪಾಂಡೆ ಅವರು ಇಂಥದ್ದೊಂದು ಸ್ಟೇಟ್ ಮೆಂಟ್ ಕೊಟ್ಟು ಪ್ರಸಿದ್ಧಿಯಾಗಿದ್ದರು. ಭಾರತ ತಂಡ ವಿಶ್ವಕಪ್ ಗೆದ್ದರೆ ಮುಂಬೈ ಬೀದಿಗಳಲ್ಲಿ ಬೆತ್ತಲೆಯಾಗಿ ಓಡಾಡುತ್ತೇನೆ ಎಂದು ಹೇಳಿ ಬಿಟ್ಟಿ ಪ್ರಚಾರ ಪಡೆದಿದ್ದರು. ಇದೀಗ ಇಂಥದ್ದೇ ಹಾದಿಯನ್ನು ತುಳಿದಿದ್ದಾರೆ ನಟಿ ರೇಖಾ..
ರೇಖಾ ಆಗಿರುವ ಪೋಸ್ಟ್ ಗ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಗೆಲ್ಲುತ್ತದೆ. ಅಂದು ನಾವು ಬೀಚ್ ನಲ್ಲಿ ಕಾಯುತ್ತೇವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ದಿನಾಂಕ ಮತ್ತು ಸಮಯವನ್ನು ತಿಳಿಸಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಮಾತಿಗೆ ತಪ್ಪಬಾರದು ಎಂದು ವಿನಂತಿಸಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ಸದಾ ವಿವಾದಾತ್ಮಕ ಪೋಸ್ಟ್ ಮಾಡುವ ಮೂಲಕ ಸುದ್ದಿಯಾಗುವ ರೇಖಾ, ರಂಗೀಲಾ, ಸ್ವಾತಿ ಚಿನುಕು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಹೇಳಿಕೊಳ್ಳುವಂತಹ ಯಶಸ್ಸು ಅವರಿಗೆ ಸಿಕ್ಕಿಲ್ಲ. ಹೀಗಾಗಿ ಪದೇ ಪದೇ ವಿವಾದಾತ್ಮಕ ಪೋಸ್ಟ್ ಗಳನ್ನು ಇವರು ಹಂಚಿಕೊಳ್ಳುತ್ತಲೇ ಇರುತ್ತಾರೆ..