Belagavi News In Kannada | News Belgaum

ಮುರುಘಾ ಶ್ರೀ ರಿಲೀಸ್​​: ಬಂಧಿಸಿ, ಸೂಕ್ತ ತನಿಖೆ ನಡೆಸಿ ಸ್ಟ್ಯಾನ್ಲಿ ಒತ್ತಾಯ..!

ಮುರುಘಾ ಶ್ರೀ ರಿಲೀಸ್​​: ಬಂಧಿಸಿ, ಸೂಕ್ತ ತನಿಖೆ ನಡೆಸಿ ಸ್ಟ್ಯಾನ್ಲಿ ಒತ್ತಾಯ..!

ಮೈಸೂರು: ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾ ಶ್ರೀಗಳಿಗೆ ಭವ್ಯ ಸ್ವಾಗತ ಕೋರಿರುವುದನ್ನ ಒಡನಾಡಿ ಸಂಸ್ಥೆಯ ನಿರ್ದೇಶಕರು ಖಂಡಿಸಿದ್ದಾರೆ. ನ್ಯೂಸ್ ಫಸ್ಟ್ ಜೊತೆ ಮಾತಾಡಿರುವ ಒಡನಾಡಿ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಅವರು, ಇದು ನಮಗೆ ಯಾವುದೇ ಅಪಜಯವಲ್ಲ. ಇದೇ ರೀತಿ ಬೇರೆ ಸಾಮಾನ್ಯರಿಗೆ ಆದರೆ ಇದೇ ಕಾನೂನು ಜಾರು ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ..

 

ಜನ ಸಾಮಾನ್ಯರಿಗೊಂದು, ಉಳ್ಳವರಿಗೆ ಮತ್ತೊಂದು ಕಾನೂನು ಆಗಬಾರದು. ಮುರುಘಾ ಶ್ರೀಗಳು ಒಲಿಂಪಿಕ್ಸ್‌ನಲ್ಲಿ ಮೆಡಲ್ ತೆಗೆದುಕೊಂಡು ಬಂದಿಲ್ಲ. ಅವರನ್ನ ಆ ರೀತಿ ಭವ್ಯ ಸ್ವಾಗತ ಕೋರುವುದು ಸರಿಯಲ್ಲ. ಎರಡನೇ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿಲ್ಲ. ಅವರನ್ನ ತಕ್ಷಣ ಎರಡನೇ ಪ್ರಕರಣದಲ್ಲಿ ಬಂಧಿಸಬೇಕು ಎಂದು ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ..

ಮತ್ತೊಬ್ಬ ಒಡನಾಡಿ ಸಂಸ್ಥೆಯ ನಿರ್ದೇಶಕ ಪರಶು ಅವರು ಮಾತನಾಡಿ, ಇದು ನಿಜಕ್ಕೂ ಕೆಟ್ಟ ಬೆಳವಣಿಗೆ. ಅಂತಹ ಸಂಭ್ರಮಾಚರಣೆ ಮಾಡುವುದು ಸರಿಯಲ್ಲ. ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಕೂಡ ಜೈಲಿನಿಂದ ಹೊರ ಬಂದವರ ಸ್ವಾಗತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಮುರುಘಾಶ್ರೀ ಬಿಡುಗಡೆ ಬಳಿಕ ಸಂಭ್ರಮಾಚರಣೆ ಸರಿಯಲ್ಲ ಎಂದಿದ್ದಾರೆ..