ರಕ್ಷಿಯಲ್ಲಿ ಸಮುದಾಯ ಭವನ ಕಾಮಗಾರಿಗೆ ರಮೇಶ ಕತ್ತಿ ಚಾಲನೆ..

ಹುಕ್ಕೇರಿ : ತಾಲೂಕಿನ ರಕ್ಷಿ ಗ್ರಾಮದಲ್ಲಿ ರಕ್ಷಮ್ಮದೇವಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು..
ಬಳಿಕ ಮಾತನಾಡಿದ ರಮೇಶ ಕತ್ತಿ, ಶಾಸಕರ ಅನುದಾನದಲ್ಲಿ ಸುಮಾರು 17 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ನೂತನ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಈ ಭವನ ನೆರವಾಗಬೇಕು ಎಂದರು..
ಕ್ಯಾರಗುಡ್ ಅಭಿನವ ಮಂಜುನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡಾ ಪಾಟೀಲ, ನಿರ್ದೇಶಕ ರವಿ ಹಿಡಕಲ್, ಹಿರಾಶುಗರ ನಿರ್ದೇಶಕರಾದ ಬಸವರಾಜ ಮರಡಿ, ಮುಖಂಡರಾದ ಬಸವರಾಜ ಮಟಗಾರ, ಬಾಬು ಹುಕ್ಕೇರಿ, ಶಿವಾಜಿ ಕುರಬೇಟ, ಮಲ್ಲು ತೇರಣಿ, ಮಹೇಶ ಬಡಗಾಂವಿ,
ಸಿದ್ದಪ್ಪ ಮಗದುಮ್ಮ, ಶಿವಾನಂದ ಮಾಳಂಗಿ, ಬಸು ಘಟಿಗನ್ನವರ, ಸುರೇಶ ತೇರಣಿ, ವಿಠ್ಠಲ ಪಾಟೀಲ, ಬಾಳಪ್ಪ ಭೀಮಣ್ಣವರ, ಸತ್ಯಪ್ಪಾ ಕುರಭೇಟ, ಬೀರಪ್ಪ ಚಂದರಗಿ, ಬಾಳಪ್ಪ ಘಸ್ತಿ, ಮಹೇಶ ಮಗದುಮ್ಮ, ಕುಶಪ್ಪಾ ಹಣಬರ ಮತ್ತಿತರರು ಉಪಸ್ಥಿತರಿದ್ದರು..