Belagavi News In Kannada | News Belgaum

ಗ್ರಾಮವನ್ನೇ ಮಾರಿದ ಗ್ರಾಪಂ ಪಿಡಿಒ ಅಮಾನತು

ಚಿಕ್ಕಬಳ್ಳಾಪುರ: ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ PDO ಎಂ.ಸಿ. ವೆಂಕಟೇಶ ಅವರನ್ನು ಅಮಾನತು ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ..

 

ಅಮಾನತುಗೊಂಡ ಅಧಿಕಾರಿ ಎಂ.ಸಿ. ವೆಂಕಟೇಶ ಅವಲಗುರ್ಕಿ ಗ್ರಾಮ ಪಂಚಾಯತಿ ಪಿ.ಡಿ.ಓ. ಆಗಿದ್ದರು. ಪ್ರಸ್ತುತ ವೆಂಕಟೇಶ, ಹಾರೋಬಂಡೆ ಗ್ರಾಮ ಪಂಚಾಯತಿ ಪಿಡಿಓ ಆಗಿ ವರ್ಗಾವಣೆ ಆಗಿದ್ದರು. ಅವಲಗುರ್ಕಿ PDO ಆಗಿದ್ದಾಗ ಬಾರ್ಲಹಳ್ಳಿ ಗ್ರಾಮವನ್ನೆ ಇವರು ಮಾರಾಟ ಮಾಡಿದ್ದರು..

 

ಗ್ರಾಮ ಪಂಚಾಯತಿ ಜನಪ್ರತಿನಿದಿಗಳ ಜೊತೆ ಶಾಮೀಲು ಆಗಿ ಅಕ್ರಮ ಕೆಲಸ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು CEO ಪ್ರಕಾಶ ಜೆ. ನಿಟ್ಟಾಲಿ ತಿಳಿಸಿದ್ದಾರೆ.///