Belagavi News In Kannada | News Belgaum

ಫ್ಲೇರ್ ರೈಟಿಂಗ್ ಇಂಡಸ್ಟ್ರೀಸ್ ಲಿಮಿಟೆಡ್ 2023 ನವೆಂಬರ್ 22ರ ಬುಧವಾರ ಆರಂಭಿಕ ಷೇರು ಬಿಡುಗಡೆ ಮಾಡಲಿದೆ.

Hubballi : ಫ್ಲೇರ್ ರೈಟಿಂಗ್ ಇಂಡಸ್ಟ್ರೀಸ್ ಲಿಮಿಟೆಡ್ 2023 ನವೆಂಬರ್ 22ರ ಬುಧವಾರ ಆರಂಭಿಕ ಷೇರು ಬಿಡುಗಡೆ ಮಾಡಲಿದೆ.

ಪ್ರತಿ 5 ರೂಪಾಯಿ ಮುಖಬೆಲೆಯ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪನಿಯು ಸುಮಾರು 593 ಕೋಟಿ ರೂಪಾಯಿ ಸಂಗ್ರಹಿಸಲು ಯೋಜಿಸಿದೆ. ಆರಂಭಿಕ ಷೇರು ಬಿಡುಗಡೆಯ ಕೊಡುಗೆಯಲ್ಲಿ ಸುಮಾರು 292 ಕೋಟಿ ರೂಪಾಯಿ ಮೌಲ್ಯದ ಹೊಸ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡುವುದು ಹಾಗೂ ಸುಮಾರು 301 ಕೋಟಿ ರೂಪಾಯಿ ಮೊತ್ತದ ಈಕ್ವಿಟಿ ಷೇರುಗಳ ಮಾರಾಟ ಕೊಡುಗೆ ಒಳಗೊಂಡಿದೆಐಪಿಒ ಸಂಬಂಧ 73 ಕೋಟಿ ರೂಪಾಯಿ ಮೌಲ್ಯದ 24,01,315 ಈಕ್ವಿಟಿ ಷೇರುಗಳನ್ನು ಮಾರಾಟ  ಮಾಡಲು ಯೋಜಿಸಿದೆ. ಪ್ರತಿ ಈಕ್ವಿಟಿ ಷೇರಿನ ಮಾರಾಟ ದರ 304 ರೂಪಾಯಿ ನಿಗದಿಪಡಿಸಲಾಗಿದೆ. ಹೊಸ ಷೇರುಗಳ ಮಾರಾಟ ಗಾತ್ರ 292 ಕೋಟಿ ರೂಪಾಯಿ ತನಕ ಇರಲಿದೆ.

ಆರಂಭಿಕ ಷೇರು ಬಿಡುಗಡೆ  ಪ್ರಕ್ರಿಯೆ 2023 ನವೆಂಬರ್ 22ರಂದು ಆರಂಭವಾಗಿ, ನವೆಂಬರ್ 24ರಂದು ಮುಕ್ತಾಯ ಆಗಲಿದೆ.

ಕನಿಷ್ಠ 49 ಈಕ್ವಿಟಿ ಷೇರುಗಳು ಮತ್ತು ತಂದ ನಂತರ 49 ಈಕ್ವಿಟಿ ಷೇರುಗಳ ಗುಣಕದಲ್ಲಿ ಸಾರ್ವಜನಿಕರು ಈಕ್ವಿಟಿ ಹರಾಜು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಕಂಪನಿಯು ಮಾನ್ಯತೆ ಹೊಂದಿರುವ ಮುಂಬೈ ಷೇರು ವಿನಿಮಯ ಮಾರುಕಟ್ಟೆ ನಿಯಮಿತ ಮತ್ತು ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ ನಿಯಮಿತ ನಿಯೋಜಿತ ಷೇರು ವಿನಿಮಯ ಮಾರುಕಟ್ಟೆಯಾಗಿ ಆಯ್ಕೆ ಮಾಡಿಕೊಂಡಿದೆ.

ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (ಹಿಂದೆ ಎಡೆಲ್‌ವೀಸ್ ಸೆಕ್ಯುರಿಟೀಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಮತ್ತು ಎಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್ ಕಂಪನಿಗಳು ಈ ಐಪಿಒ ಕೊಡುಗೆಯ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್|ಗಳಾಗಿ ಕಾರ್ಯ ನಿರ್ವಹಿಸಲಿವೆ.