Belagavi News In Kannada | News Belgaum

ಹೆಂಡತಿ ಮೇಲೆ ಸಂಶಯ; ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ ಅರೆಸ್ಟ್‌…

ಬೆಂಗಳೂರು: ಅನುಮಾನ ಪಿಶಾಚಿ ಗಂಡನೊಬ್ಬ ಹೆಂಡತಿ ಮೇಲೆ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚಿದ ಘಟನೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ನಡೆದಿದೆ. ಶ್ರೀನಿವಾಸ್ ಎಂಬಾತ ಪತ್ನಿ ಪುಷ್ಪಮ್ಮ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕಳೆದ ನವೆಂಬರ್‌ 16ರಂದು ನಡೆದಿದ್ದ ಘಟನೆಯು ತಡವಾಗಿ ಬೆಳಕಿಗೆ ಬಂದಿದೆ..

 

ಶ್ರೀನಿವಾಸ್‌ ಹಾಗೂ ಪುಷ್ಪಮ್ಮ ಕಳೆದ 18 ವರ್ಷದ ಹಿಂದೆ ಮದುವೆಯಾಗಿದ್ದರು. ಪ್ಲಂಬರ್ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್‌ಗೆ ಪತ್ನಿ ಪುಷ್ಪಳ ಶೀಲ ಶಂಕಿಸಿ ಆಗಾಗ ಗಲಾಟೆ ಮಾಡುತ್ತಿದ್ದ. ಈ ಬಗ್ಗೆ ಹಿರಿಯರು ಅನೇಕ ಬಾರಿ ರಾಜಿ ಪಂಚಾಯಿತಿ ಮಾಡಿದ್ದರು..

 

ಬಂಧಿತ ಆರೋಪಿ ಆದರೆ ಪತ್ನಿ ಮೇಲಿನ ಅನುಮಾನ ಮಾತ್ರ ಕಡಿಮೆ ಆಗಿರಲಿಲ್ಲ. ನಿತ್ಯವು ಜಗಳ ತೆಗೆದು ಕಿರುಕುಳ ನೀಡುತ್ತಿದ್ದ. ಈ ನಡುವೆ ಕಳೆದ 16ರಂದು ಇದೇ ವಿಷಯಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಸಿಟ್ಟಿಗೆದ್ದ ಶ್ರೀನಿವಾಸ್‌ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ..

 

ಆಕೆ ಕಿರುಚಾಡುತ್ತಿದ್ದಂತೆ ಗಾಬರಿಯಾದ ಶ್ರೀನಿವಾಸ್‌ ನೀರು ಸುರಿದಿದ್ದಾನೆ. ಬಳಿಕ ಪುಷ್ಪಮ್ಮಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಪುಷ್ಪಳಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಪಿ ಶ್ರೀನಿವಾಸ್‌ನನ್ನು ಬನಶಂಕರಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.///