Belagavi News In Kannada | News Belgaum

‘ದಿಲ್ಲಿ ಚಲೋ’ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ಹುಬ್ಬಳ್ಳಿ : ಮಾರ್ರ್ಸ್ ಸ್ಟುಡಿಯೋ ಪೆÇ್ರಡಕ್ಷನ್ ಹುಬ್ಬಳ್ಳಿ ಅವರ ‘ದಿಲ್ಲಿ ಚಲೋ’ ಎಂಬ ಕನ್ನಡ ಚಲನಚಿತ್ರದ ಎರಡನೇ ಹಂತದ ಚಿತ್ರೀಕರಣ ಇದೀಗ ಮುಕ್ತಾಯಗೊಂಡಿದೆ .

ಹುಬ್ಬಳ್ಳಿ-ಧಾರವಾಡ, ಕೆಲಗೇರಿ, ಹೆಬ್ಬಳ್ಳಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಇಪ್ಪÀತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುವದರೊಂದಿಗೆ ಚಿತ್ರದ ಎರಡನೆ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಊರೂರು ತಿರುಗಿ ಬಲೂನ ಮಾರುವ (ಟೆನ್ನಿಸ್‍ಕೃಷ್ಣ) ವ್ಯಕ್ತಿಯೊಬ್ಬನ ಮಗಳು ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತಳಾಗಿ ಹಳ್ಳಿಯಿಂದ-ದಿಲ್ಲಿವರೆಗೂ ಸಾಗಿ ಯಶಸ್ಸಿನ ಗುರಿ ಹೇಗೆ ತಲುಪುತ್ತಾಳೆ ಮತ್ತು ಮುಂದೆ ಪೊಲೀಸ್
ಇಲಾಖೆಯಲ್ಲಿ ಸೇರಿ ಜವಾಬ್ದಾರಿಯುತ ಹುದ್ದೆ ಅಲಂಕರಿಸುವ ವಿಷಯದ ಕಥಾ ವಸ್ತು ಚಿತ್ರದಲ್ಲಿದೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಯಾವೂದೂ ಅಸಾಧ್ಯವಲ್ಲ .

ಸ್ತ್ರೀಶಕ್ತಿಯ ಕುರಿತು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಡಿಸೆಂಬರ್ ತಿಂಗಳಲ್ಲಿ ಅಂತಿಮ ಹಂತದ ಚಿತ್ರೀಕರಣ ಮುಗಿಸಿ ಫೇಬ್ರುವರಿಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುಲಾಗುತ್ತದೆ ಎಂದು ನಿರ್ದೇಶಕ ಶ್ರೀಪಾದ ಹೇಳಿದರು.
ಪಾತ್ರವರ್ಗದಲ್ಲಿ ಹಾಸ್ಯನಟ ಟೆನ್ನಿಸ್‍ಕೃಷ್ಣ , ಗಣೇಶ್‍ರಾವ್ ಕೇಸರಕರ, ಅಪೂರ್ವ ಭರಣಿ, ಶ್ರೀಪಾದ ಕುಲಕರ್ಣಿ, ಮಹಾಂತೇಶ

ಹಳ್ಳೂರ, ಡಾ.ಶಿವಕುಮಾರ್ ಸ್ವಾಮೀಜಿ , ಸಿದ್ದುಕೃಷ್ಣ ಢೇಕಣಿ, ವಿನಾಯಕ ರುಡ್ನೂರ್. ರಾಜೀವ್‍ಸಿಂಗ್ , ರಾಜು ಗಡ್ಡಿ, ಲಕ್ಷ್ಮೀ ಹುಬ್ಬಳ್ಳಿ, ಸುಕನ್ಯಾ, ನೀತಾ ಜಾಧವ್, ಅಮೃತಾ ನಾಯ್ಕ, ನಾರಾಯಣ್ ದೇಸಾಯಿ, ಅನ್ನಪೂರ್ಣಾ ಉಂಡಿ, ಪ್ರಭು ಹಂಚಿನಾಳ , ವೀರನಗೌಡ ಸಿದ್ದಾಪುರ, ಕಿರಣ್ ಸಿದ್ದಾಪುರ, ಮಹಾದೇವ ಸತ್ತಿಗೇರಿ, ಮಂಜುನಾಥ ಹಗೇದಾರ, ಆಸಿಫ್ , ರೋಶನ್ ಸಿಂಗ್. ಚಂದ್ರು ದಾಸರ. ಮಾಝ್ ಸುಲ್ತಾನ್, ಮುತ್ತಪ್ಪ ಪಾಲ್ತಿ, ಆನಂದ್ ಜೋಶಿ ಮೊದಲಾದವರು ಅಭಿನಯಿಸಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಓಂ ಪ್ರಕಾಶ್ ಛಾಯಾಗ್ರಹಣ, ಸಿದ್ದು ಯ, ಶ್ರೀಪಾದ ಕುಲಕರ್ಣಿ ಸಾಹಿತ್ಯ, ಪ್ರೇಮ್ ಭರತ್ ಸಂಗೀತ , ಅಶೋಕ್ ದೇವ್, ಸ್ಟ್ರೈಲ್ ಚಂದ್ರು ಸಾಹಸ . ಪ್ರಕಾಶ್ ಕಮ್ಮಾರ ಪ್ರಸಾಧÀನ, ರೋಹಿತ್ ಪುಣೆ ನೃತ್ಯ , ಶ್ರೀಪಾದ್ ಕೆ, ಅಶೋಕ್‍ದೇವ್ ಕಥೆ-ಸಂಭಾಷಣೆ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾಸಂಪರ್ಕ, ಅಶೋಕ್‍ದೇವ್ ಸಹನಿರ್ದೇಶನ, ಶಾಮ್‍ಸುಂದರ್ ನಿರ್ವಹಣೆ , ಶ್ರೀಪಾದ ಕುಲಕರ್ಣಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ , ಶ್ರೀಮತಿ ಸಂಧ್ಯಾ ಜೋಶಿ, ಶ್ರೀಪಾದ ಕುಲಕರ್ಣಿ ನಿರ್ಮಾಪಕರಾಗಿದ್ದಾರೆ.////