Belagavi News In Kannada | News Belgaum

ಪ್ರಕಟಣೆ ತಿಳಿಸಿದ್ದಾರೆ

ನೇರ ಸಂದರ್ಶನ

 

ಬೆಳಗಾವಿ, ನ.23 : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನವೆಂಬರ್ 28, 2023 ರಂದು ಬೆಳಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಪ್ಲಾಟ್ ನಂಬರ್ 9 ಸಿಎಸ್ #1837, ಬಸವ ಕಾಲೋನಿ ವೈಭವ ನಗರ ಬೆಳಗಾವಿ ಇಲ್ಲಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ ಮತ್ತು ಪದವಿ ವಿದ್ಯಾರ್ಹತೆ ಹೊಂದಿರುವ ಆಸಕ್ತ ಪುರುಷ/ಮಹಿಳಾ ಅಭ್ಯರ್ಥಿಗಳು https://tinyurl.com/2f6utajp ಈ ವೆಬ್‌ ಸೈಟ್‌ ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವು ಉಚಿತವಾಗಿದ್ದು, ಇನ್ನುಳಿದ ಯಾವುದೇ ಸೌಲಭ್ಯಗಳು ಇರುವುದಿಲ್ಲ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್ ಸಂಖ್ಯೆ: 7975856566, ಇವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಎಂದು ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವಿದ್ಯುತ್ ನಿಲುಗಡೆ

ಬೆಳಗಾವಿ, ನ.23: ಬೆಳಗಾವಿಯ 110ಕೆವ್ಹಿ ಸುವರ್ಣ ಸೌಧ ಉಪ ಕೇಂದ್ರದಲ್ಲಿ 3 ನೇಯ ತ್ರೈಮಾಸಿಕ ಹಾಗೂ ಇತರೆ ಕೆಲಸಗಳನ್ನು ನಿರ್ವಹಿಸುವ ಪ್ರಯುಕ್ತ ಸದರಿ ವಿದ್ಯುತ್ ಸ್ವೀಕರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ಪ್ರದೇಶಗಳ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಶುಕ್ರವಾರ ನವೆಂಬರ್ 24, 2023 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು :
ಕೆಎಚ್‌ಬಿ ಕಾಲೋನಿ, ವೃದ್ಧಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣ ಸೌಧ ಲೈನ್ -2, ಸುವರ್ಣ ಸೌಧ ಲೈನ್ -1, ಬಸವೇಶ್ವರ ವೃತ್ತ, ಜೋಶಿಯಲ್ಲಿ ನಾರ್ವೇಕರಗಲ್ಲಿ, ಆಚಾರ್ಯಗಲ್ಲಿ, ಗದೆ ಮಾರ್ಗ, ಶಹಪೂರ, ಗಣೇಶಪೂರ ಗಲ್ಲಿ, ಪವಾರಗಲ್ಲಿ, ಬಸವನಗಲ್ಲಿ, ಸರಾಫ್ ಗಲ್ಲಿ ಬಿಚ್ಚುಗಲ್ಲಿ, ಗ್ವಿಟ್ ಗಲ್ಲಿ 1 2 3 4 5 ಕ್ರಾಸ್, ಮಾರುತಿ ನಗರ, ಹರಿಕಾಕಾ ಕಂಪೌಂಡ್, ಪರ್ಯಾಯ ಸುವರ್ಣಸೌಧ, ಸಾಯಿ ಕಾಲೋನಿ, ಯಡಿಯೂರಪ್ಪ ಮಾರ್ಗ, ಹಲಗಾ ರಸ್ತೆ
ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಪೂರ್ವಭಾವಿ ಸಭೆ

 

ಬೆಳಗಾವಿ, ನ.23 : ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಿಸುವ ನಿಟ್ಟಿನಲ್ಲಿ ವಿಕಲಚೇತನರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲು ಹಾಗೂ ಕಾರ್ಯಕ್ರಮವನ್ನು ಏರ್ಪಡಿಸುವ ಕುರಿತು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನವೆಂಬರ್ 24, 2023 ರಂದು ಮಧ್ಯಾಹ್ನ 12 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.
ಜಿಲ್ಲೆಯಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ವಿಶೇಷ ಶಾಲೆಗಳನ್ನು ನಡೆಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ವಿಕಲಚೇತನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಗಳ ಉಪನಿರ್ದೇಶಕರು ಸಭೆಗೆ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಶ್ರೀಕಾಂತ ಮುಚ್ಚಂಡಿ ಪಿಹೆಚ್.ಡಿ

 

ಬೆಳಗಾವಿ, ನ.23 : ಬೆಳಗಾವಿ, ನ.22 (ಕರ್ನಾಟಕ ವಾರ್ತೆ):ನಗರದ ಶ್ರೀಕಾಂತ ಮುಚ್ಚಂಡಿ ಅವರು ಮಂಡಿಸಿದ ಮುತ್ಸದ್ದಿ ಹಾಗೂ ಚಿಂತಕರಾಗಿ ಸತೀಶ ಜಾರಕಿಹೋಳಿರವರ ಕುರಿತು ಒಂದು ಅಧ್ಯಯನ ಮಹಾಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.

ರಾಜ್ಯಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಶ್ರೀಕಾಂತ ಅವರು, ರಾಜ್ಯಶಾಸ್ತ್ರ ಅಧ್ಯಯನ ಪ್ರಾಧ್ಯಾಪಕರು ಹಾಗೂ ಸಂಶೋಧನಾ ಮಾರ್ಗದರ್ಶಕರು ಪ್ರೊ. ವಾಯ್. ಎಸ್. ಬಲವಂತಗೋಳ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.///

 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಉಧ್ಯಮಶೀಲತಾ ತರಬೇತಿಗಾಗಿ ಆರ್ಜಿ ಆಹ್ವಾನ

 

ಬೆಳಗಾವಿ, ನ.23 : 2023-24ನೇ ಸಾಲಿನ ಬೆಳಗಾವಿ ತಾಲೂಕಾ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉಧ್ಯಮಶೀಲತಾ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಅಭ್ಯರ್ಥಿಗಳು https://www.scsptsp.karnataka.gov.in ನಲ್ಲಿ ಆನ್ಲೈನ್ ಮೂಲಕ ನ 30 2023 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಷರತ್ತುಗಳು

ಅರ್ಜಿದಾರರಿಗೆ ನಿಗಧಿಪಡಿಸಿರುವ ವಯೋಮಿತಿ 21 ರಿಂದ 50 ವರ್ಷ ಒಳಗಿರಬೇಕು, ಶೈಕ್ಷಣಿಕ ಅರ್ಹತೆ- ಪಿಯುಸಿ ಮತ್ತು ಮೇಲ್ಪಟ್ಟು ಪಟ್ಟಿರಬೇಕು, ಉದ್ದಿಮೆ ವಾಣಿಜ್ಯ ಚಟುವಟಿಕೆಗಳನ್ನು ಪ್ರಾರಂಭಿಸಲು ನೀಡುತ್ತಿರುವ ತರಬೇತಿಯಾಗಿದ್ದು, ಯಾವುದೇ
ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತರಬೇತಿಗೆ ಅರ್ಹರಿರುವುದಿಲ್ಲ,ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 10 ದಿನಗಳ ಅವಧಿಯ ತರಬೇತಿಯಲ್ಲಿ ಉಚಿತವಾಗಿ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು ಹಾಗೂ ತರಬೇತಿಗೆ ಹಾಜರಾಗಲು ಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ 10 ದಿನಗಳಿಗೆ ರೂ:1000=00ಗಳನ್ನು ನೀಡಲಾಗುವುದು. ಅಭ್ಯರ್ಥಿಗಳಿಗೆ ಉಪಹಾರ ಮತ್ತು ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ದೂರವಾಣಿ ಸಂ:0831-2470545 ಗೆ ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

 

ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ: ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ

 

ಬೆಳಗಾವಿ, ನ.23 : ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ವಿವಿಧ ಯೋಜನೆಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

ಮಹಿಳಾ ಚರ್ಮ ಕುಶಲಕರ್ಮಿಗಳಿಗೆ ಕಾಯಕ ಸ್ಫೂರ್ತಿಯೋಜನೆಯಡಿ ಕನಿಷ್ಟ 10 ತರಬೇತಿ ಪಡೆದ ಮಹಿಳೆಯರು ಸ್ವಸಹಾಯ ಸಂಘ ರಚಿಸಿಕೊಂಡು ಗುಂಪು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ತನ್ಮೂಲಕ ಆದಾಯ ಗಳಿಸಿ ಸ್ವಾವಲಂಬಿಗಳಾಗಲು ಅನುಕೂಲವಾಗುವಂತೆ ಪ್ರತಿ ಸಂಘಕ್ಕೆ ಗರಿಷ್ಟ ರೂ.2.50 ಲಕ್ಷ ಸಾಲ ಒದಗಿಸಲಾಗುವುದು. (ಪ್ರತಿ ಮಹಿಳಾ ಚರ್ಮ ಕುಶಲಕರ್ಮಿಗೆ ರೂ. 15 ಸಾವಿರ ಸಹಾಯಧನ ಮತ್ತು 10 ಸಾವಿರ ಸಾಲ ನೀಡಲಾಗುತ್ತದೆ.

ಕೌಶಲ್ಯ ಉನ್ನತೀಕರಣ ಯೋಜನೆಯಡಿ Year Diploma in Leather Technology  (ಕೋರ್ಸ್ ಫೀ. ಊಟ ಮತ್ತು ವಸತಿ ಸೇರಿ   (ಕೋರ್ಸ್ ಫೀ. ಊಟ ಮತ್ತು ವಸತಿ ಸೇರಿ 18 Month Higher Diploma Course in Footwear Manufacturing and Management Studies one Year Diploma in Footwear Design and Production Technology (NIFT) 6 ತಿಂಗಳ ಲೆದರ್ ಫ್ಯಷನ್ ಗಾರ್ಮೆಂಟ್ಸ ತಯಾರಿಕೆ (ಈಆಆI) 2 ತಿಂಗಳ ಪಾದರಕ್ಷೆ ತಯಾರಿಕೆಯಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ 1 ತಿಂಗಳ ಪಾದರಕ್ಷೆ ರಿಪೇರಿ ಮತ್ತು ತಯಾರಿಕೆ (ಅಈಖಿI) ಕುಶಲಕರ್ಮಿಗಳಿಗೆ ತರಬೇತಿ ನೀಡಲಾಗುವುದು.

ಪಾದುಕೆ ಕುಟೀರ ಯೋಜನೆಯಡಿ ಚರ್ಮ ಕುಶಲಕರ್ಮಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಅವರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು, ದುರಸ್ತಿ ಕಾರ್ಯ ಮಾಡಲು ಅನುವಾಗುವಂತೆ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಂದ, ಇಲಾಖೆಗಳ ಪರವಾನಗಿ ಪಡೆದು ಅರ್ಜಿ ಸಲ್ಲಿಸಿದವರಿಗೆ ಪಾದುಕೆ ಕುಟೀರಗಳನ್ನು ಸ್ಥಾಪಿಸಿಕೊಡಲಾಗುವುದು.

ಘಟಕ ವೆಚ್ಚ : ರೂ. 1,25,000/- (ಪಾದುಕೆ ಕುಟೀರ,ಉಪಕರಣ ಪೆಟ್ಟಿಗೆ ಸೇರಿ)

ಚರ್ಮಕಾರರ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ನೇರ ಸಾಲ ಯೋಜನೆಯಡಿ ಕಚ್ಚಾ ಮಾಲು ಖರೀದಿ, ಕುಟೀರದಲ್ಲಿ ಉತ್ಪಾದನೆ ಮತ್ತು ಮಾರಾಟ, ಶೂ,ಪಾದರಕ್ಷೆ ಮತ್ತು ಇತರೆ ಚರ್ಮ ವಸ್ತುಗಳ ದುರಸ್ತಿ
ಮಾಡುವ ಅಂಗಡಿ ತೆರೆಯುವುದು,ತಳ್ಳುವ ಗಾಡಿ, ಲಘು ವಾಹನ ಇತ್ಯಾದಿ. ಘಟಕದ ವೆಚ್ಚ ರೂ 1,00,000, (ರೂ.50,000 ಸಹಾಯಧನ ಮತ್ತು 50,000 ಸಾವಿರ 5.50,000 ಸಾಲ ನೀಡಲಾಗುವುದು.

ಮಾರುಕಟ್ಟೆ ಸಹಾಯ ಯೋಜನೆಯಡಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು ಮತ್ತು ಅವರ ಉತ್ಪನ್ನಗಳಿಗೆ ರಿಯಾಯಿತಿ ನೀಡುವುದು, ವಸ್ತು ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

ಚರ್ಮಕಾರ ವಸತಿ ಯೋಜನೆ (ಗುಂಪು/ವೈಯಕಿಕ)
ಚರ್ಮ ಕುಶಲಕರ್ಮಿಗಳು ಖಾಲಿ ನಿವೇಶನ ಗುಡಿಸಲು ಶಿಥಿಲಗೊಂಡ ಮನೆಗಳನ್ನು ಹೊಂದಿರುವ ಚರ್ಮಕಾರರಿಗೆ ವಾಸಕ್ಕೆ ಮತ್ತು ಉದ್ಯೋಗ ಮುಂದುವರೆಸಲು ಅನುಕುಲವಾಗುವಂತೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ನಿಗಮದ ಮೂಲಕ ರೂ.2.20 ಲಕ್ಷ ಧನಸಹಾಯ ನೀಡಲಾಗುವುದು.

ಸ್ವಾವಲಂಬಿ,ಸಂಚಾರಿ ಮಾರಟ ಮಳಿಗೆ ಯೋಜನೆ
ಪಾರಂಪರಿಕ ಚರ್ಮ ಕುಶಲಕರ್ಮಿಗಳು ಅವರು
ತಯಾರಿಸಿದ ಚರ್ಮೋತ್ಪನ್ನಗಳನ್ನು ಹಾಗೂ ಇತರೆ ಸಂಬಂಧಿತ ಉತ್ಪನ್ನಗಳನ್ನು ಸಂಚಾರಿ ವಾಹನದ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿ ಸ್ವಯಂ ಉದ್ಯೋಗ ಒದಗಿಸುವ ಉದ್ದೇಶ ಹೊಂದಿದೆ.

ತಾಲ್ಲೂಕು ಮಟ್ಟದವರೆಗೆ ರೂ. 2. ಲಕ್ಷ ಸಹಾಯಧನ, ಜಿಲ್ಲಾ ಕೇಂದ್ರಕ್ಕೆ ರೂ. 3. ಲಕ್ಷ ಸಹಾಯಧನ, ಮಹಾನಗರ ಪಾಲಿಕೆ ವ್ಯಾಪ್ತಿ ರೂ.4 ಲಕ್ಷ ಸಹಾಯಧನ, ಬಿ.ಬಿ.ಎಂ.ಪಿ ವ್ಯಾಪ್ತಿ ರೂ.5. ಲಕ್ಷ (ನಿಗಮವು ನೀಡುವ ಸಹಾಯಧನದ ಮೊತ್ತದಷ್ಟೇ ಬ್ಯಾಂಕಿನಿಂದ ಸಾಲ ಪಡೆಯಬೇಕಾಗಿರುತ್ತದೆ).

ಹೆಚ್ಚಿನ ಮಾಹಿತಿಗಾಗಿ ಸೇವಾ ಸಿಂಧು ಪೋರ್ಟಲ್ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿಯ ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಚಿಗುರು- 23-24: ಚಿಣ್ಣರ ಹಬ್ಬ

 

ಬೆಳಗಾವಿ, ನ.23 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿಯ ಬಿ.ಕೆ. ಮಾಡಲ್ ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ “ಚಿಗುರು 2023-24” ಮಕ್ಕಳಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಚಿನ್ನರ ಹಬ್ಬವನ್ನು ನವೆಂಬರ್ 25, 2023 ರಂದು ಬೆಳಿಗ್ಗೆ 9.30 ಗಂಟೆಗೆ ಬಿ.ಕೆ. ಮಾಡೆಲ್ ಪ್ರೌಢಶಾಲೆಯ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಲ ಜಾರಕಿಹೊಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಾಸಕರಾದ ಆಸೀಫ್ ಸೆಠ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸರ್ಕಾರಿ ಮುಖ್ಯ ಸಚೇತಕರಾದ ಅಶೋಕ್ ಮ. ಪಟ್ಟಣ, ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-2 ನವದೆಹಲಿ ಪ್ರಕಾಶ್ ಬಾ ಹುಕ್ಕೇರಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರಾದೇಶಿಕ ಆಯುಕ್ತರಾದ ಸಂಜಯ್ ಬಿ. ಶಟ್ಟೆಣ್ಣವರ, ಪೊಲೀಸ್ ಮಹಾನಿರೀಕ್ಷಕರಾದ ವಿಕಾಶ್ ಕುಮಾರ್ ವಿಕಾಶ್, ಜಿಲ್ಲಾಧಿಕಾರಿಗಳಾದ ನಿತೇಶ್ ಕೆ ಪಾಟೀಲ, ಪೊಲೀಸ್ ಆಯುಕ್ತರಾದ ಎಸ್.ಎನ್. ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಭೀಮಾ ಶಂಕರ್ ಎಸ್. ಗುಳೇದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ್ ದುಡುಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ(ಪ್ರಭಾರ) ಎಸ್.ಡಿ.ಹಂಜಿ, ಮೋಹನ್ ಹಂಚಾಟೆ, ಸಾಹಿತಿಗಳಾದ ಹೇಮಾ ಸುನ್ನೋಳಿ, ಸುಧಾ ಪಾಟೀಲ, ಬಿ. ಕೆ. ಮಾಡೆಲ್ ಪ್ರೌಢ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.///

 

ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ

 

ಬೆಳಗಾವಿ, ನ.23: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳು,ಪದವಿ/ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧೀಜಿಯವರ 154 ನೇ ಜಯಂತಿ ಅಂಗವಾಗಿ
ಆಯೋಜಿಸಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳ ಪ್ರಬಂಧಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಗಣಿಸಲಾಗಿತ್ತು. ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಥಮ ಸ್ಥಾನ-31,000, ದ್ವಿತೀಯ-21000 ಹಾಗೂ ತೃತೀಯ-11000 ರೂ.ಗಳ ನಗದು ಪುರಸ್ಕಾರ ನೀಡಲಾಗುತ್ತಿದೆ.

ವಿಜೇತರ ವಿವರ ಪ್ರೌಢಶಾಲೆ ವಿಭಾಗ:

ಪ್ರಥಮ-ಅನಿರುದ್ಧ ಮನೋಜ್ ,ಸಂತ ಅನ್ನಮ್ಮ ಪ್ರೌಢಶಾಲೆ,ವಿರಾಜಪೇಟೆ,ಕೊಡಗು ಜಿಲ್ಲೆ,

ದ್ವಿತೀಯ-ಹರ್ಷಿತ ಎನ್,ಸರ್ಕಾರಿ ಪ್ರೌಢಶಾಲೆ ,ತುಂಗಣಿ,ಕನಕಪುರ ತಾ.ರಾಮನಗರ ಜಿಲ್ಲೆ

ತೃತೀಯ : ತೋಹಿದ್ ಅಹ್ಮದ್ ಲಾಡಜಿ,ಗೈಡ್ ಆಂಗ್ಲ ಮಾಧ್ಯಮ ಶಾಲೆ,ತಿಳವಳ್ಳಿ,ಹಾನಗಲ್ ತಾಲ್ಲೂಕು, ಹಾವೇರಿ ಜಿಲ್ಲೆ.

ಪದವಿಪೂರ್ವ ವಿಭಾಗ

ಪ್ರಥಮ-ಹೃತ್ಪೂರ್ವಕ್ ಕೆ.ಎಸ್. ಸಂತ ಮೈಕೇಲ್ ಕಾಲೇಜು, ಮಡಿಕೇರಿ ಕೊಡಗು ಜಿಲ್ಲೆ,

ದ್ವಿತೀಯ-ಉದಯಕುಮಾರ್ ಎಂ.ಎಸ್. ಸರ್ಕಾರಿ ಪ.ಪೂ.ಕಾಲೇಜು ಮಂಡ್ಯ

ತೃತೀಯ-ಮೀನ ಎಂ,ಶ್ರೀಕೊಂಗಾಡಿಯಪ್ಪ ಪಿ.ಯು‌.ಕಾಲೇಜು ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ

ಪದವಿ/ಸ್ನಾತಕೋತ್ತರ ವಿಭಾಗ

ಪ್ರಥಮ-ದರ್ಶಿನಿ ಡಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿವಮೊಗ್ಗ

ದ್ವಿತೀಯ-ಕಾವ್ಯಾ ಚಿಪ್ಪಲಕಟ್ಟಿ,ಸರ್ಕಾರಿ ಪ್ರಥಮ ದರ್ಜೆ ಕಾಲೇಜು ,ಬಾಗಲಕೋಟ

ತೃತೀಯ-ಕುಸುಮಾಬಾಯಿ ಆರ್,ಜೆಎಸ್‌ಎಸ್ ಕಲಾ ಕಾಲೇಜು ಮೈಸೂರು

ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಮಹಾನಗರ ಪಾಲಿಕೆ: 155 ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧಾರ

ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ- ಆಕ್ಷೇಪಣೆ ಆಹ್ವಾನ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ, ನ.23: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಹ 155 ಪೌರಕಾರ್ಮಿಕರನ್ನು ಖಾಯಂಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೇರ ನೇಮಕಾತಿಯಡಿ ಖಾಲಿ ಇರುವ ಒಟ್ಟು 155 ಪೌರಕಾರ್ಮಿಕರ ಹುದ್ದೆಗಳ ನೇಮಕಾತಿಗಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕದ ಪೂರ್ವದಲ್ಲಿ ನಿರಂತರವಾಗಿ ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವೇತನ/ಹೊರಗುತ್ತಿಗೆ ಮೇರೆಗೆ ಕನಿಷ್ಠ 2 ವರ್ಷಗಳ ಸೇವೆ ಸಲ್ಲಿಸಿರುವ ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು.

ಸ್ವೀಕೃತ ಅರ್ಜಿಗಳನ್ನು ಪರಿಶೀಲನಾ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಿ ಅಂತಿಮವಾಗಿ ಸಲ್ಲಿಕೆಯಾದ ಒಟ್ಟು 468 ಅರ್ಹ ಅಭ್ಯರ್ಥಿಗಳ ಪೈಕಿ ನೇರನೇಮಕಾತಿಯಡಿ ಖಾಲಿ ಇರುವ ಹಾಗೂ ಮೀಸಲಾತಿಗನುಗುಣವಾಗಿ 155 ಅಭ್ಯರ್ಥಿಗಳನ್ನು ಖಾಯಂಗೊಳಿಸಲು ದಿನಾಂಕ: 18.11.2023 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆ ಜರುಗಿಸಿ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಾ ಪ್ರಸ್ತುತ ನೇರವೇತನದಡಿ ಕೆಲಸ ನಿರ್ವಹಿಸುತ್ತಿರುವ 155 ಸದರಿ ಪೌರಕಾರ್ಮಿಕರನ್ನು ಖಾಯಂಗೊಳಿಸಲು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿ: 18-11-2023 ರಂದು ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ, ಸಂಬಂಧಿಸಿದ ಉಪವಿಭಾಗಾಧಿಕಾರಿಗಳ, ತಹಶೀಲ್ದಾರ ಕಾರ್ಯಾಲಯದ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಹಾಗೂ ಪಾಲಿಕೆಯ / ಡಿಯುಡಿಸಿ ವೆಬ್ ಸೈಟಿನಲ್ಲಿ ಅಳವಡಿಸಲಾಗಿದೆ.

ಸದರಿ ತಾತ್ಕಾಲಿಕ ಆಯ್ಕೆಪಟ್ಟಿಗೆ ಈ ಪ್ರಕಟಣೆಯನ್ನು ಹೊರಡಿಸಿದ 15 ದಿನಗಳೊಳಗಾಗಿ ಅಂದರೆ ದಿನಾಂಕ: 04.12.2023 ರ ಸಾಯಂಕಾಲ 4.00 ಘಂಟೆಯೊಳಗಾಗಿ ಬಾಧಿತ ವ್ಯಕ್ತಿಗಳಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿರುತ್ತದೆ.

ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ ಇವರಿಗೆ ಕಚೇರಿ ವೇಳೆಯಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///