Belagavi News In Kannada | News Belgaum

ಗಾಝಾ ಕದನ ವಿರಾಮ ನಾಳೆಯಿಂದ ಜಾರಿ: ಖತರ್..

ದೋಹ : ಗಾಝಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನವೆಂಬರ್ 24(ಶುಕ್ರವಾರ)ರಿಂದ ಆರಂಭಗೊಳ್ಳಲಿದೆ ಎಂದು ಖತರ್ ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ..

 

ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. ಸಂಜೆ ಸುಮಾರು 4 ಗಂಟೆಗೆ ಒತ್ತೆಯಾಳುಗಳ ಪ್ರಥಮ ತಂಡದಲ್ಲಿ 13 ಮಂದಿಯನ್ನು ಬಿಡುಗಡೆಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಮಾಹಿತಿ ನೀಡಿದ್ದಾರೆ..

 

ಗಾಝಾ ಕದನ ವಿರಾಮ ಶುಕ್ರವಾರದಿಂದ ಜಾರಿಗೆ ಬರಲಿದೆ ಎಂದು ಹಮಾಸ್ ಕೂಡಾ ದೃಢಪಡಿಸಿದೆ