Belagavi News In Kannada | News Belgaum

ತಾಯಿ ಸ್ಥಾನದಲ್ಲಿ ನಿಂತು ನಿಮ್ಮೆಲ್ಲ ಬೇಡಿಕೆ ಈಡೇರಿಸುತ್ತೇನೆ: ಲಕ್ಷ್ಮೀ ಹೆಬ್ಬಾಳಕರ

“ವಿಶ್ವ ವಿಕಲಚೇತನರ ದಿನಾಚರಣೆ”-2023

ಬೆಳಗಾವಿ, ನ.29: ಕ್ರೀಡಾಕೂಟವನ್ನು ಇಲಾಖೆಯ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ ಅವರು ದ್ವಜಾರೋಹನ ಮತ್ತು ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ಕಾರದಿಂದ ವಿಕಲಚೇತನರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

“ವಿಶ್ವ ವಿಕಲಚೇತನರ ದಿನಾಚರಣೆ”-2023 ಪ್ರಯುಕ್ತ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟವನ್ನು ನವ್ಹೆಂಬರ್ 29, 2023 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಕ್ರೀಡಾಂಗಣ ನೆಹರು ನಗರ, ಬೆಳಗಾವಿ ಇಲ್ಲಿ ಹಮ್ಮಿಕೊಳ್ಳಲಾಯಿತು.

ವಿಕಲಚೇತನರಿಗೆ ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಮತ್ತು ವಿಶೇಷ ಶಾಲೆಗಳ ಶಿಕ್ಷಕರಿಗೆ ತಾಯಿ ಸ್ಥಾನದಲ್ಲಿ ನಿಂತು ನಿಮ್ಮೆಲ್ಲ ಬೇಡಿಕೆ ಈಡೇರಿಸುತ್ತೇನೆ ಎಂದು ಹೇಳಿದರು. ಇಲಾಖೆಯ ಅಧಿಕಾರಿಗಳಿಗೆ ವಿಕಲಚೇತನರಿಗೆ ಸಂಬಂಧಪಟ್ಟಂತ ಯಾವುದೇ ಕಡತಗಳನ್ನು ವಿಳಂಬಕ್ಕೆ ಅವಕಾಶ ನೀಡದೇ ತುರ್ತಾಗಿ ವಿಲೆ ಮಾಡಲಾಗುವುದು ಎಂದರು. ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಾದಲ್ಲಿ ನನ್ನ ಗಮನಕ್ಕೆ ತಂದು ತುರ್ತಾಗಿ ವಿಲೇ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಶ್ರೀನಿವಾಸ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರಾದ ನಾಗಾರಜ್ ಆರ್ ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ನಾಮದೇವ ಬಿಲ್ಕರ್ ಅವರು ಸ್ವಾಗತಿಸಿದರು.

ಜಿಲ್ಲೆಯ ವಿಶೇಷ ಶಾಲೆಗಳಾದ ಕಿವುಡ ಮಕ್ಕಳ ಸರ್ಕಾರಿ ಶಾಲೆ, ಮಾಹೇಶ್ವರಿ ಅಂಧ ಮಕ್ಕಳ ಶಾಲೆ, ಆರಾಧನಾ ಬುದ್ಧಿಮಾಂಧ್ಯ ಮಕ್ಕಳ ಶಾಲೆ, ಶ್ರೀ ರೇಣುಕಾ ಕೃಪ ಬುದ್ಧಿಮಾಂದ್ಯ ಮಕ್ಕಳ ಶಾಲೆ ಸವದತ್ತಿ, ಶ್ರೀ ವಿ. ಪಿ. ಜೇವೂರ ಸ್ಮಾರಕ ಕಿವುಡ ಮಕ್ಕಳ ಶಾಲೆ ಮುನವಳ್ಳಿ, ಶ್ರೀ ದೂದನಾನಾ ಬುದ್ಧಿಮಾಂಧ್ಯ ಮಕ್ಕಳ ಶಾಲೆ ಹಿಡಕಲ್‍ಡ್ಯಾಂ, ಕಾರ್ಮೆಲ್ ಬುದ್ಧಿಮಾಂದ್ಯ ಮಕ್ಕಳ ಶಾಲೆ ಬೈಲಹೊಂಗಲ, ಬಡ್ರ್ಸ ಕಿವುಡ ಮಕ್ಕಳ ಶಾಲೆ

ತುಕ್ಕಾನಟ್ಟಿ, ಶ್ರೀ ನಿತಿನಕುಮಾರ ಕದಂ ಕಿವುಡ ಮಕ್ಕಳ ಶಾಲೆ ನಿಪ್ಪಾಣಿ, ಆಶಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಯಕ್ಸಂಬಾ, ಶ್ರೀ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಮದಭಾವಿ ಅಥಣಿ, ಪಿಜಿಕಲಿ ಹ್ಯಾಂಡಿಕ್ಯಾಪ್ಡ್ ಅಸೋಸಿಯೇಶನ್ ಬೆಳಗಾವಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ, ಬೆಳಗಾವಿ ಜಿಲ್ಲಾಕಿವುಡ ಸಂಘ, ಸಮನ್ವಯ ಬ್ಲೈಂಡ್ ಫೌಂಡೇಶನ್ ಬೆಳಗಾವಿ, ವಿಕಲಚೇತನ ಸರ್ಕಾರಿ ನೌಕರರ ಸಂಘ ಬೆಳಗಾವಿ ಇಲ್ಲಿನ ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ ಸುಮಾರು 900 ವಿಕಲಚೇತನ ಕ್ರೀಡಾಪಟುಗಳು ಜಿಲ್ಲೆಯ ವಿಕಲಚೇತನ ಪುನರ್ವಸತಿ ಕಾರ್ಯಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.