Belagavi News In Kannada | News Belgaum

ವಿದ್ಯಾರ್ಥಿನಿಯರಿಗೆ ತಿಳುವಳಿಕೆ ಕಾರ್ಯಕ್ರಮ

ಬೆಳಗಾವಿ  – ಪ್ರಯತ್ನ ಸಂಘಟನೆಯವರು ಇದೇ ದಿ 29 ಬುದವಾರದಂದು ಬೆಳಗಾವಿಯ ಚೆನ್ನಮ್ಮ ನಗರದಲ್ಲಿರುವ ಸರ್ಕಾರಿ ಶಾಲೆಗೆ ಹೋಗಿ ಅಲ್ಲಿಯ ವಿದ್ಯಾರ್ಥಿನಿಯರ ಜೊತೆ ಮಾತನಾಡಿ ವಯೋಸಹಜ ತೊಂದರೆಗಳ ಕುರಿತಂತೆ ತಿಳುವಳಿಕೆಯನ್ನು ನೀಡಿದರು.
ಈ ಶಾಲೆಯಲ್ಲಿ 5ರಿಂದ 8ನೆ ತರಗತಿಯ ಓದಿತ್ತಿರುವ 30 ವಿದ್ಯಾರ್ಥಿನಿಯರಿಗೆ ಅವಶ್ಯಕ ವಸ್ತುಗಳನ್ನು ವಿತರಿಸಲಾಯಿತು. ಡಾ. ಅನಿತಾ ಉಮದಿಯವರು, ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ನೈರ್ಮಲ್ಯದ ಹಾಗೂ ಸಮಸ್ಯೆಗಳ ಕುರಿತು ವಿವರಿಸಿ ಹೇಳಿದರು ಅಲ್ಲದೇ ಆ ಕುರಿತಂತೆ ಪರಿಹಾರವನ್ನು ತಿಳಿಸಿದರು.
ಅಧ್ಯಕ್ಷೆ ಶ್ರೀಮತಿ ಶಾಂತಾ ಆಚಾರ್ಯ ಪ್ರಯತ್ನ ಸಂಘಟನೆ ನಡೆದ ಬಂದ ದಾರಿ ಪರಿಚಯಿಸುತ್ತ ಮುಂದೆ ಹಮ್ಮಿಕೊಳ್ಳಲಿರುವ ಸಾಮಾಜಿಕ ಕಾರ್ಯ ಕುರಿತಂತೆ ವಿವರಿಸಿ ಹೇಳಿದರು.
ಸಂಘಟನೆ ಕಾರ್ಯಕರ್ತರು ಮಕ್ಕಳಿಗೆ ಹಣ್ಣು ಮತ್ತು ಜ್ಯೂಸ್ ಪ್ಯಾಕೆಟ್‍ಗಳನ್ನು ವಿತರಿಸಿದರು. ಸಂಘಟನೆಯ ಮಂಗಳಾ, ಬೀನ, ಶ್ವೇತಾ, ಪದ್ಮಾ, ಗೌರಿ, ಸುನೀತಾ, ಶುಭಾ, ಸಂಗೀತಾ, ಶೀಲಾ ದೇಶಪಾಂಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.