Belagavi News In Kannada | News Belgaum

ಶಿವಮೊಗ್ಗಕ್ಕೆ ತೆರಳಿದ್ದಂತ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯ ಕಲ್ಲಪ್ಪ, ಊಟಕ್ಕಾಗಿ ಪಿಎಸ್‌ಐ ( PSI) ಪಿಸ್ತೂಲ್ ನಾಪತ್ತೆ

ಬೆಂಗಳೂರು: ಊಟಕ್ಕೆ ರೆಸ್ಟೋರೆಂಟ್ ಗೆ ತೆರಳಿ, ಊಟ ಮಾಡಿ ಕೈತೊಳೆದು ಬರುವಷ್ಟರಲ್ಲಿ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆಯ ಪಿಎಸ್‌ಐ ಕಲಪ್ಪ ಅವರ ಪಿಸ್ತೂಲ್ ನಾಪತ್ತೆಯಾಗಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ..

 

ಶಿವಮೊಗ್ಗಕ್ಕೆ ತೆರಳಿದ್ದಂತ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣೆಯ ಪಿಎಸ್‌ಐ ಕಲ್ಲಪ್ಪ, ಊಟಕ್ಕಾಗಿ ಚಿತ್ರದುರ್ಗ ಬಳಿಯ ಜಾನಕೊಂಡದ ಬಳಿಯಲ್ಲಿದ್ದಂತ ರೆಸ್ಟೋರೆಂಟ್ ಒಂದಕ್ಕೆ ತೆರಳಿದ್ದರು. ಊಟ ಮಾಡಿ, ಕೈ ತೊಳೆದು ಬರೋದಕ್ಕೆ ತೆರಳಿ, ವಾಪಾಸ್ ಆಗೋ ವೇಳೆಯಲ್ಲಿ ಅವರ ಬಳಿಯಿದ್ದಂತ ಪಿಸ್ತೂಲ್ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ..

 

ಈ ವಿಷಯ ತಿಳಿದು ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಈವರೆಗೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.