Belagavi News In Kannada | News Belgaum

ವಿವಿಧ ಜಿಲ್ಲೆಗಳಿಂದ ಚಳಿಗಾಲ ಅಧಿವೇಶನ ಬಂಧುಬಸ್ತಗೆ ಆಗಮಿಸಿದ ಪೊಲೀಸರಿಗೆ ಚಳಿ ಚಳಿ ಚಳಿ

ಬೆಳಗಾವಿ: ಕುಂದಾನಗರಿಯಲ್ಲಿ ಡಿ.4ರಿಂದ 15ರ ವರೆಗೆ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ಬಂದೋಬಸ್ತ್​ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿಗೆ ಅಧಿವೇಶನ ನಡೆಯುವ ಮುನ್ನವೇ ಚಳಿಗೆ ನಡುಗಿ ಹೋಗಿದ್ದಾರೆ..

 

ಹೌದು…ಬೆಳಗಾವಿ ಚಳಿಗಾಲದ ಅಧಿವೇಶನದ ಬಂದೋಬಸ್ತ್​ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪೊಲೀಸ್ ಸಿಬ್ಬಂದಿ ಉಳಿದುಕೊಳ್ಳಲು ಬೃಹದಾಕಾರದ ಜರ್ಮನ್ ಟೆಂಟ್​​ಗಳಿಂದ ಟೌನ್​ಶಿಪ್​ಗಳನ್ನು ನಿರ್ಮಿಸಲಾಗಿದೆ. ಆದರೆ ಪೊಲೀಸ್‌ ಸಿಬ್ಬಂದಿಗೆ ಹೊದಿಕೆ ಇಲ್ಲದರಿಂದ ಚಳಿಗಾಲ ಅಧಿವೇಶನ ನಡೆಯುವ ಮುನ್ನವೇ ಚಳಿಗೆ ಪತರಗುಟ್ಟಿ ಹೋಗುವ ಪರಿಸ್ಥಿತಿ ಪೊಲೀಸರಿಗೆ ಎದುರಾಗಿದೆ..

ಜರ್ಮನ್​ ಟೆಂಟ್​ಗಳ ವಿವಿರ:  ಸುವರ್ಣ ವಿಧಾನಸೌಧ ಸಮೀಪದ ಅಲಾರವಾಡ ಗ್ರಾಮದ ಹೊರವಲಯದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಟೌನ್​ಶಿಪ್ ನಿರ್ಮಾಣ ಮಾಡಲಾಗಿದೆ..

ಇಲ್ಲಿ ನಾಲ್ಕು ದೊಡ್ಡ ದೊಡ್ಡ ಜರ್ಮನ್ ಟೆಂಟ್ ಹಾಕಿ ಒಂದು ಚಿಕ್ಕ ಟೆಂಟ್ ಹಾಕಿ ಟೌನ್​ಶಿಪ್ ನಿರ್ಮಿಸಲಾಗಿದೆ. ಒಂದು ಜರ್ಮನ್ ಟೆಂಟ್ 100 ಅಡಿ ಅಗಲ, 200 ಅಡಿ ಉದ್ದ ಗಾತ್ರ ಹೊಂದಿದ್ದು, ಇದೇ ಮಾದರಿಯ ಒಟ್ಟು ನಾಲ್ಕು ಜರ್ಮನ್ ಟೆಂಟ್ ನಿರ್ಮಾಣ ಮಾಡಲಾಗಿದೆ. ಅಧಿಕಾರಿಗಳಿಗೆ ಒಂದು ಸಣ್ಣ ಟೆಂಟ್ ಕೂಡ ನಿರ್ಮಿಸಲಾಗಿದೆ..

ಇನ್ನು ಒಂದೊಂದು ಟೌನ್​ಶಿಪ್​ನಲ್ಲಿ ಐನೂರು ಜನ ಸಿಬ್ಬಂದಿಗೆ ಮಲಗಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 2000 ಜನ ಪೊಲೀಸ್ ಸಿಬ್ಬಂದಿ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಾಟ್, ಗಾದೆ, ತಲೆ ದಿಂಬು, ಬೆಡ್​ಶೀಟ್ ನೀಡಲಾಗಿದೆ.

ಟೆಂಟ್​ಗಳಲ್ಲಿಲ್ಲ ಹೊದಿಕೆ: ಉಳಿದುಕೊಳ್ಳಲು ಪೊಲೀಸ್‌ ಸಿಬ್ಬಂದಿಗೆ ಈ ಜರ್ಮನ್ ಟೆಂಟ್ ನಿರ್ಮಿಸಲಾಗಿದೆ..

ಆದರೆ  ಸುವರ್ಣಸೌಧ ಕೂಗಳತೆ ತುಂಬಾ ಬಹಳ ಚಳಿ ಇದ್ದ ಕಾರಣ ಪೊಲೀಸರು ಚಳಿಗೆ ನಡುಗಿಹೋಗಿದ್ದಾರೆ. ಮುಖ್ಯವಾಗಿ ಇಲ್ಲಿರುವ ಪೊಲೀಸ್‌ ಸಿಬ್ಬಂದಿಗೆ  ಹೊದಿಕೆ ಕೊಟ್ಟಿಲ್ಲದ್ದರಿಂದ ಚಳಿಯಲ್ಲಿಯೇ ಮಲಗುವ ಸ್ಥೀತಿ ಎದುರಾಗಿದೆ. ಅದರಲ್ಲೂ ವಯಸ್ಸಾದ ಪೊಲೀಸರ ಸ್ಥಿತಿಯಂತೂ ಹೇಳತೀರದ್ದಾಗಿದೆ.

ಚಳಿಗೆ  ತತ್ತರಿಸಿದ ಪೊಲೀಸರು: ಇದು ಸಂಪೂರ್ಣ ವಾಟರ್ ಪ್ರೂಫ್ ಟೆಂಟ್ ಆಗಿದ್ದು, ಮಳೆ ಬಂದರೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ..

ಆದರೆ ಇಲ್ಲಿ ನೋಡಿದರೆ ಚಳಿಗೆ ಈ ಟೆಂಟ್​ನಲ್ಲಿ ಚಳಿಗೆ ಪೊಲೀಸರು ತತ್ತರಿಸಿ ಹೋಗಿದ್ದಾರೆ. ತಕ್ಷಣವೇ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಇಲ್ಲಿನ ವ್ಯವಸ್ಥೆ ಪರಿಶೀಲಿಸಿ ಅಧಿವೇಶನದ ಬಂದೋಬಸ್ತ್​ಗೆ ಬಂದಿರುವ ಪೊಲೀಸರ ಆರೋಗ್ಯದ ಹಿತ ಕಾಪಾಡಬೇಕು ಎಂದು ಪೊಲೀಸ್ ಸಿಬ್ಬಂದಿ ವಿನಂತಿಸಿದ್ದಾರೆ.