Belagavi News In Kannada | News Belgaum

ಯತ್ನಾಳ ನಡೆಯಿಂದ ಸದನದಲ್ಲಿಆರ್. ಅಶೋಕ್​ಗೆ ಮುಜುಗರ

ಬೆಳಗಾವಿ: ವಿರೋಧ ಪಕ್ಷದ ನಾಯಕ ಆರ್​​. ಅಶೋಕ್​ಗೆ ಶುಭಕೋರಿ ಮಾತನಾಡಲು ಬಸನಗೌಡ ಪಾಟೀಲ್​ ಯತ್ನಾಳ್​ ನಿರಾಕರಿಸಿದ ಘಟನೆ ನಡೆದಿದೆ.
ವಿಧಾನಸಭೆ ಕಲಾಪದಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನೆಲೆ ಅಭಿನಂದನೆ ಸಲ್ಲಿಸುವ ವೇಳೆ ಯತ್ನಾಳ್ ಮಾತನಾಡಲು ನಿರಾಕರಿಸಿದರು. ಶುಭ ಕೋರಿ ಮಾತನಾಡುತ್ತೀರಾ ಎಂದು ಯತ್ನಾಳ್​ಗೆ ಸ್ಪೀಕರ್ ಖಾದರ್‌ ಕೇಳುತ್ತಾರೆ. ಈ ವೇಳೆ ಯತ್ನಾಳ್ ನಾನು ಮಾತನಾಡಲ್ಲ ಎಂದು ಕೈಸನ್ನೆಯಿಂದ ನಿರಾಕರಣೆ ಮಾಡಿದರು. ಯತ್ನಾಳ್ ಮಾತನಾಡಲು ನಿರಾಕರಣೆ ಮಾಡಿದ್ದರಿಂದ ಆರ್. ಅಶೋಕ್​ಗೆ ಸದನದಲ್ಲಿ ಮುಜುಗರ ಉಂಟಾಯಿತು.
ಈ ಕಾರಣವಾ ಏನೋ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನೆಲೆ ಅಶೋಕ್​ ಅವರಿಗೆ ಅಭಿನಂದನೆ ಸಲ್ಲಿಸುವ ವೇಳೆ ಯತ್ನಾಳ್ ಮಾತನಾಡಲು ನಿರಾಕರಿಸಿದರು. ಇನ್ನು ಬರದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕ ಆರ್. ಅಶೋಕ್​ ಸ್ಪೀಕರ್​ನ್ನು ಒತ್ತಾಯಿಸಿದರು. ಆಗ ಯತ್ನಾಳ್ ಪ್ರಶ್ನೋತ್ತರ ಮೊದಲು ಬಳಿಕ ಬರದ ಮೇಲೆ ಚರ್ಚೆ ಮಾಡೋಣ ಎಂದು ಹೇಳುವ ಮೂಲಕ ಸ್ವಪಕ್ಷಕ್ಕೆ ಕುಟುಕಿದರು./////