Belagavi News In Kannada | News Belgaum

ಮಡಿವಾಳ ಜನಾಂಗ ಎಸ್ಸಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ ಒತ್ತಾಯ

ಬೆಳಗಾವಿ: ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ (ಎಸ್.ಸಿ)ಗೆ ಸೇರಿಸಲು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಮಡಿವಾಳರ ಸಂಘದ ವತಿಯಿಂದ  ಸುವರ್ಣಸೌಧ ಸಮೀಪದ ಸುವರ್ಣ ಗಾರ್ಡನ್ ಬಳಿ  ಮಂಗಳವಾರ ಪ್ರತಿಭಟನೆ  ನಡೆಸಲಾಯಿತು.
ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ (ಎಸ್.ಸಿ) ಸೇರ್ಪಡೆಗೊಳಿಸಲು ಈಗಾಗಲೆ 2008ರ ಅವಧಿಯಲ್ಲಿ ಅಂದಿನ ಸರ್ಕಾರಕ್ಕೆ ಡಾ॥ ಅನ್ನಪೂರ್ಣಮ್ಮ ನವರ ವರದಿ ಪಡೆದು ಸುಮಾರು 16ವರ್ಷ ಕಳೆದರೂ ಇಲ್ಲಿಯವರೆಗೂ ಶಿಫಾರಸ್ಸು ಮಾಡಿರುವುದಿಲ್ಲ. ಆದ ಕಾರಣ ಮಡಿವಾಳ ಜನಾಂಗಕ್ಕೆ ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ವಂಚಿತರಾಗಿರುತ್ತೇವೆ. ದಯಮಾಡಿ ತಮ್ಮ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಡಾ| ಅನ್ನಪೂರ್ಣಮ್ಮ ನವರ ವರದಿಯಂತೆ ಎಸ್.ಸಿ ಗೆ ಸೇರಿಸಲು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಮಡಿವಾಳರ ಸ್ಥಿತಿ ತುಂಬಾ ಶೋಚನೀಯವಾಗಿರುವುದರಿಂದ ಮಡಿವಾಳರ ಅಭಿವೃದ್ಧಿ ನಿಗಮದಲ್ಲಿ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಅನುದಾನ ನೀಡುವಂತೆ ಹಾಗೂ ನಿಗಮದ ಅಧ್ಯಕ್ಷರ ಸ್ಥಾನವನ್ನು ಉತ್ತರ ಕರ್ನಾಟಕಕ್ಕೆ ನೀಡಿದಲ್ಲಿ ಈ ಭಾಗದ ಮಡಿವಾಳರಿಗೆ ತುಂಬಾ ಸಹಾಯವಾಗಲಿದೆ  ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಂ. ಕೆ. ಹನುಮಂತಪ್ಪ,ಸಾಯಬಣ್ಣ ಮ. ಮಡಿವಾಳರ, ದುರುಗೇಶ ಗಂ. ಮಡಿವಾಳರ,ಮುತ್ತಣ್ಣ ಅಗಸರ,ಪರಶುರಾಮ ಮಡಿವಾಳರ, ಮಂಜುಳಾ ಮಡಿವಾಳರ ಸೇರಿದಂತೆ ಇತರರು ಭಾಗವಹಿಸಿದ್ದರು.  /////