Belagavi News In Kannada | News Belgaum

2 ನೇ ದಿನವಾದ ಇಂದು ವಿಧಾನಪರಿಷತ್ತಿನಲ್ಲಿ, ಸಂತಾಪ ನಿರ್ಣಯ : ಶೂನ್ಯವೇಳೆಯ ಚರ್ಚೆ

ಇತ್ತೀಚೆಗೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರ

ಬೆಳಗಾವಿ ಸುವರ್ಣ ಸೌಧ ಡಿ.5: ವಿಧಾನ ಮಂಡಲದ ಚಳಿಗಾಲದ ಅಧಿವೇಶನದ 2 ನೇ ದಿನವಾದ ಇಂದು ವಿಧಾನಪರಿಷತ್ತಿನಲ್ಲಿ, ಇತ್ತೀಚೆಗೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ , ಕ್ಯಾಪ್ಟನ್ ಶುಬಂ ಗುಪ್ತಾ, ಹವಾಲ್ದರ್ ಅಬ್ದುಲ್ ಮಜಿಕ್, ಲಾನ್ಸ್ ನಾಯ್ಕ್ ಸಂಜಯ್ ಬಿಸ್ಟ್ ಮತ್ತು ಸಚಿನ್ ಲಾರ ಅವರುಗಳಿಗೆ ಮತ್ತು ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಗಜರಾಜ ವೀರ ಅರ್ಜುನ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಸಭಾ ನಾಯಕ ಸಚಿವ ಬೋಸರಾಜು ಹಾಗೂ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದರು. ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು.

      ಅಡಿಕೆ ಬೆಳೆಯಲ್ಲಿ ಎಲೆ ಚುಕಿ ರೋಗ ನಿಯಂತ್ರಣಕ್ಕೆ ಕ್ರಮ

ಬೆಳಗಾವಿ ಸುವರ್ಣ ಸೌಧ  : ರಾಜ್ಯದಲ್ಲಿ ಅಡಿಕೆ ಬೆಳೆಯಲ್ಲಿ ಕಂಡು ಬರುತ್ತಿರುವ ಎಲೆ ಚುಕ್ಕಿ ರೋಗ ನಿಯಂತ್ರಣ ಕುರಿತಂತೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಸಂಶೋಧನೆ ಕೈಗೊಳ್ಳಲು 43.61 ಲಕ್ಷ ರೂ ಗಳ ಅನುದಾನವನ್ನು ಒದಗಿಸಲಾಗಗಿದ್ದು, ಈ ರೋಗ ನಿಯಂತ್ರಣ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಮಂಗಳವಾರ ವಿಧನ ಪರಿಷತ್‌ನಲ್ಲಿ ಸದಸ್ಯ ಎಸ್. ರುದ್ರೇಗೌಡ ಅವರ ಚುಕ್ಕೆ ಗುರಿತಿನ ಪ್ರಶ್ನೆ 180 ಕ್ಕೆ , ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವರ ಪರವಾಗಿ ಅವರು ಉತ್ತರಿಸಿದರು.
 ಪ್ರಸಕ್ತ ಸಾಲಿನಲ್ಲಿ ಎಲೆಚುಕ್ಕಿ ರೋಗ ಭಾಧಿತ ರೈತರಿಗೆ ಪ್ರತಿ ಹೆಕ್ಟೇರ್ ಗೆ 4000 ದಂತೆ ಗರಿಷ್ಠ 1.5 ಹೆಕ್ಟೆರ್ ವರೆಗೆ ಮಿತಿಗೊಳಿಸಿ ಪ್ರತಿ ಫಲಾನುಭವಿಗೆ ಗರಿಷ್ಠ 6000 ಗಳ ಮೊತ್ತದ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಿ ಅನುಷ್ಠಾನಗೊಳಿಸಲಾಗುತ್ತಿದ್ದು, ಒಟ್ಟು 6250 ಹೆಕ್ಟೆರ್ ಪ್ರದೇಶಕ್ಕೆ ಒಟ್ಟು 250 ಲಕ್ಷ ರೂ ಅನುದಾನ ವಿನಿಯೋಗಿಸಲಿಗಿದೆ ಎಂದರು.
ರಾಜ್ಯದಲ್ಲಿ ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ಒಟ್ಟು 53977 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುವುದನ್ನು ಅಂದಾಜಿಸಲಾಗಿದ್ದು ಅದರ ನಿಯಂತ್ರಣ ಹಾಗೂ ಸಂಶೋಧನೆಗಾಗಿ 21.50 ಕೋಟಿ ರೂಗಳ ಅನುದಾನದ ಅವಶ್ಯಕತೆಯಿದ್ದು ಹೆಚ್ಚುವರಿ ಅನುದಾನದಕ್ಕಾಗಿ ಆರ್ಥಿಕ ಇಲಾಖೆಯನ್ನು ಕೋರಲಾಗಿದೆ ಎಂದರು.

ನೈಸ್ ಸಂಸ್ಥೆಗೆ ನೀಡಿದ್ದ 554 ಎಕರೆ ಜಮೀನು ಶೀಘ್ರದಲ್ಲಿ ಹಿಂಪಡೆಯಲಾಗುವುದು : ಸಚಿವ ಶರಣ ಬಸಪ್ಪ ದರ್ಶನಾಪುರ

ಬೆಳಗಾವಿ ಸುವರ್ಣ ಸೌಧ : ಕರ್ನಾಟಕ ಕೈಗಾರಿಕ ಪ್ರದೇಶಾಭಿವೃಧ್ದಿ ಮಂಡಳಿಯು ನೈಸ್ ಸಂಸ್ಥೆಗೆ ನೀಡಿದ್ದ 554 ಎಕರೆ ಹೆಚ್ಚವರಿ ಜಮೀನನ್ನು ಶೀಘ್ರವಾಗಿ ಹಿಂಪಡೆಯುವ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶರಣ ಬಸಪ್ಪ ದರ್ಶನಾಪುರ ಹೇಳಿದರು.
ವಿಧಾನ ಪರಿಷತ್ ಮಂಗಳವಾರ ಸದಸ್ಯ ಎಸ್. ಮುನಿರಾಜು ಗೌಡ ಪಿಎಂ ಕೇಳಿದ ಚುಕ್ಕೆಗುರಿತನ ಪ್ರಶ್ನೆ 25 ಕ್ಕೆ , ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃಧ್ದಿ ಸಚಿವರ ಪರವಾಗಿ ಅವರು ಉತ್ತರಿಸಿದರು.
ಬಿಎಂಐಸಿಪಿ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನುಗಳ ಪೈಕಿ 554 ಎಕರೆ ಹೆಚ್ಚುವರಿ ಜಮೀನುಗಳನ್ನು ಹಿಂಪಡೆಯುವ ಕುರಿತಂತೆ , ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳನ್ನು ಗುರುತಿಸಿ ಸರ್ವೇ ನಂ ಗಳೊಂದಿಗೆ ವಿವರವಾದ ಮಾಹಿತಿ ಸಲ್ಲಿಸುವಂತೆ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡ ( ದಕ್ಷಿಣ) ಇವರಿಗೆ ಪತ್ರದ ಮೂಲಕ ತಿಳಿಸಿದ್ದು, ಇವರಿಂದ ಮಾಹಿತಿ/ ಸ್ಪಷ್ಟವಾದ ವರದಿ ಪಡೆದು ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲಾಗುವುದು ಹಾಗೂ ಸದ್ರಿ ಬೂಮಿಯನ್ನು ಹಿಂಪಡೆದ ನಂತರ ಯಾವ ಉದ್ದೇಶಕ್ಕೆ ಬಳಸಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

ವಿಜಯಪುರ ವಿಮಾನ ನಿಲ್ದಾಣ ಪೆಬ್ರವರಿ ಅಂತ್ಯಕ್ಕೆ ಹಾರಾಟಕ್ಕೆ ಸಿದ್ದ : ಸಚಿವ ಶರಣ ಬಸಪ್ಪ ದರ್ಶನಾಪುರ

ಬೆಳಗಾವಿ ಸುವರ್ಣ ಸೌಧ : ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಪೆಬ್ರವರಿ ಅಂತ್ಯದಲ್ಲಿ ಮುಕ್ತಾಯಗೊಳಿಸಿ, ವಿಮಾನ ಹಾರಾಟವನ್ನು ಆರಂಭಿಸಲಾಗುವುದು ಎಂದು ಸಚಿವ ಶರಣ ಬಸಪ್ಪ ದರ್ಶನಾಪುರ ಹೇಳಿದರು.
ಅವರು ಇಂದು ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರಕಾಶ್ ಕೆ ರಾಥೋಡ್ ಕೇಳಿದ ಚುಕ್ಕೆಗುರಿತನ ಪ್ರಶ್ನೆ 134 ಕ್ಕೆ , ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃಧ್ದಿ ಸಚಿವರ ಪರವಾಗಿ ಉತ್ತರಿಸಿದರು.
ವಿಜಯಪುರದಲ್ಲಿ ವಿಮಾನ ನಿಲ್ದಾಣವನ್ನು ಏರ್ ಬಸ್-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ 347.92 ಕೋಟೊ ರೂ ಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಲಗುತ್ತಿದ್ದು, ಈ ಕಾಮಗಾರಿಗೆ ಇದುವರೆಗೆ 347.92 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. 3 ಪ್ಯಾಕೇಕ್ ಗಳಲ್ಲಿ ನಿರ್ಮಾಣವಾಗುತ್ತಿರುವ ಈ ವಿಮಾನ ನಿಲ್ದಾಣದ ಎಲ್ಲಾ ಕಾಮಗಾರಿಗಳು ಪೆಬ್ರವರಿ 2024 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.
ಈ ವಿಮಾನ ನಿಲ್ದಾಣಕ್ಕಾಗಿ 727.01 ಎಕರೆ ಜಮೀನನ್ನು ಭೂ ಸ್ವಾಧೀನಪಡಿಸಕೊಳ್ಳಲಾಗಿದ್ದು, ಇದುವರೆಗೆ 351 ಎಕರೆ ಜಮೀನಿಗೆ 31.92 ಕೋಟಿ ರೂ ಗಳ ಪರಿಹಾರವನ್ನು ಪಾವತಿಸಲಾಗಿದ್ದು, 28.08 ಎಕರೆ ಜಮೀನಿಗೆ ನ್ಯಾಯಾಲಯದಲ್ಲಿ 2.25 ಕೋಟಿ ರೂ ಗಳನ್ನು ಠೇವಣಿ ಮಾಡಲಾಗಿದೆ ಎಂದರು.
ಪರಿಷತ್ ಸದಸ್ಯ ಗೋವಿಂದರಾಜು, ಕೋಲಾರ ಜಿಲ್ಲೆಯಲ್ಲಿ ಆರು ತಾಲೂಕುಗಳಲ್ಲಿ ಬೆಳ ಹಾನಿ ಹಾಗೂ ಅದರಿಂದ ನಷ್ಟ ಉಂಟಾಗಿರುವ ಬಗ್ಗೆ ಕೃಷಿ ಸಚಿವರ ಗಮನ ಸೆಳೆದರು.
ಸಿ.ಎನ್. ಮಂಜೇಗೌಡ ಹಾಗೂ ಕೆ.ಎಂ. ತಿಪ್ಪೇಸ್ವಾಮಿ ಅವರು ರಾಜ್ಯದಲ್ಲಿ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸದಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವರ ಗಮನ ಸೆಳೆದರು.
ಈ ಬಗ್ಗೆ ಉತ್ತರಿಸಿದ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್, ರಾಜ್ಯದಲ್ಲಿ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಶೀಘ್ರದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶೂನ್ಯವೇಳೆಯ ಚರ್ಚೆ

ಬೆಳಗಾವಿ ಸುವರ್ಣ ಸೌಧ  ಡಿ.5: ಶೂನ್ಯ ವೇಳೆಯಲ್ಲಿ , ಶಾಸಕ ಮರಿತಿಬ್ಬೇಗೌಡ ಚುನಾವಣಾ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಚಟುವಟಿಕೆ ಮಏಲೆ ಪ್ರತಿಕೂಲ ಪರಿಣಮ ಬೀರುತ್ತಿರುವ ಬಗ್ಗೆ , ಯು.ಬಿ. ವೆಂಕಟೇಶ್ ಅವರು ರಾಜ್ಯದಲ್ಲಿ ನಡೆಯುತ್ತಿರುವ ಮಕ್ಕಳ ಮಾರಾಟ ಮತ್ತು ಕಳ್ಳತನ ಬಗ್ಗೆ , ಗೋವಿಂದರಾಜು ಅವರು ಕೋಲಾರ ಜಿಲ್ಲೆಯಲ್ಲಿ ನಡೆಯುತ್ರಿರುವ ಅಕ್ರಮ ಮದ್ಯ ಮಾರಾಟ ಪ್ರಕರಣಗಳ ಬಗ್ಗೆ, ನಾಗರಾಜ್ ಅವರು ಶಾಲಾ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಭೀತಿ ಮೂಡಿಸಿರುವ ಬಗ್ಗೆ, ಬಿ.ಎಸ್ ಅರುಣ್ ಅವರು , ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿರುವ ಬಿದನೂರಿನ ಕೊಪ್ಪಲಮಠದಲ್ಲಿರುವ ಕೆಳದಿ ಅರಸರ ಐತಿಹಾಸಿಕ ಸ್ಮಾರಕಗಳ ಒತ್ತುವರಿ ತೆರವು ಮತ್ತು ಅವುಗಳನ್ನು ಸಂರಕ್ಷಿಸುವ ಬಗ್ಗೆ, ಹನುಮಂತ ನಿರಾಣಿ ಅವರು ಬಾಗಲಕೋಟೆಯ ತೇರದಾಳ ಗ್ರಾಮದ ಮಾಲಿಂಗಪುರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವ ಬಗ್ಗೆ , ತಿಪ್ಪೇಸ್ವಾಮಿ ಅವರು ಡಯಾಲಿಸಿಸ್ ಸಿಬ್ಬಂದಿಗಳ ಪ್ರತಿಭಟನೆ ಬಗ್ಗೆ, ಬಿಜೇಶ್ ಕುಶಾಲಪ್ಪ ಅವರು ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಪಡಿಸುವ ಬಗ್ಗೆ ಮಾತನಾಡಿದರು.

ಬರ ನಿರ್ವಹಣೆ ಕಾರ್ಯಕ್ಕೆ 31 ಜಿಲ್ಲೆಗಳಿಗೆ
324 ಕೋಟಿ ರೂ. ಬಿಡುಗಡೆ: ಕೃಷಿ ಸಚಿವರು

ಬೆಳಗಾವಿ ಸುವರ್ಣ ಸೌಧ : ಮುಂದಿನ ದಿನಗಳಲ್ಲಿ ಕುಡಿಯುವ ನೀರಿ ಪೂರೈಕೆ, ಗೋಶಾಲೆ, ಮೇವಿನ ಬ್ಯಾಂಕ್ ನಿರ್ವಹಣೆ ಇತರೆ ತುರ್ತು ಬರ ನಿರ್ವಹಣೆ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು 31 ಜಿಲ್ಲೆಗಳಿಗೆ 324 ಕೋಟಿ ರೂ.ಗಳನ್ನು ಕಳೆದ ಅಕ್ಟೋಬರ್ ಮಾಹೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಎಂದು ಕೃಷಿ ಸಚಿವರಾದ ಚೆಲುವ ನಾರಾಯಣಸ್ವಾಮಿ ಅವರು ಹೇಳಿದರು.
ವಿಧಾನ ಪರಿಷತ್ತಿನಲ್ಲಿ ಸದಸ್ಯರಾದ ಗೋವಿಂದರಾಜು ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಆರ್‌ಬಿಐ ನಿರ್ದೇಶನದಂತೆ ರೈತರ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಅಲ್ಪಾವಧಿಯಿಂದ ಮಧ್ಯಾವಧಿ ಅಥವಾ ದೀರ್ಘಾವಧಿವರೆಗೆ ರೀ ಸ್ಟçಕ್ಚರ್ ಮಾಡಲು ಎಸ್‌ಎಲ್‌ಬಿಸಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಈಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೆ ವರದಿಯನ್ವಯ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಬೆಳೆಹಾನಿ ಇನ್‌ಪುಟ್ ಸಬ್ಸಿಡಿಗೆ ಎನ್‌ಡಿಆರ್‌ಎಫ್ ಅಡಿಯಲ್ಲಿ ರೂ.4663.12 ಕೋಟಿ ರೂ.ಗಳ ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅನುದಾನವನ್ನು ನಿರೀಕ್ಷಿಸಿ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಬೆಳೆಹಾನಿ ಪರಿಹಾರದ ಮೊಲದನೇ ಕಂತಾಗಿ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ 2000 ರೂ. ರೈತರಿಗೆ ಪಾವತಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಶೇ.11ರಷ್ಟು ಮಳೆ ಕೊರತೆಯಾಗಿದೆ. ಈಲ್ಲೆ ಆರೂ ತಾಲೂಕುಗಳಲ್ಲಿ ಸುಮಾರು 219.87 ಕೋಟಿ ರೂ.ನಷ್ಟವಾಗಿದೆ. ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟವನ್ನು ಅಂದಾಜು ಮಾಡಿದ್ದಾರೆ. ಬೇಸಿಗೆಯ ಬಗ್ಗೆ ಭೀತಿ ಮೂಡಿದೆ ಎಂದು ಇದೆ ವೇಳೆ ಗೋವಿಂದರಾಜು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಶು ಸಂಗೋಪನೆ ಇಲಾಖೇಯ ವರದಿಯನುಸಾರ ಕೋಲಾರ ಜಿಲ್ಲೆಯಲ್ಲಿ 2.23 ಲಕ್ಷ ಟನ್ ಮೇವು ಲಭ್ಯವಿದೆ. ಎಸ್‌ಡಿಆರ್‌ಎಫ್ ಅಡಿಯಲ್ಲಿ ಮೇವಿನ ಕಿರು ಪೊಟ್ಟಣಗಳನ್ನು ನಿಯಮಾನುಸಾರ ಖರೀದಿಸಲು 20 ಕೋಟಿ ರೂ. ಗಳನ್ನು ಪಶು ಸಂಗೋಪನೆ ಇಲಾಖೆಗೆ ಬಿಡುಗಡೆಗೊಳಿಸಲಾಗಿದೆ. 31 ಜಿಲ್ಲೆಗಳಿಗೆ ಬಿಡುಗಡೆ ಮಾಡಿದ 324 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ ಪೈಕಿ ಕೋಲಾರ ಜಿಲ್ಲೆಗೆ 9 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈಲ್ಲೆಯ 4 ಗ್ರಾಮಗಳಲ್ಲಿ ಖಾಸಗಿ ಬೋರವೆಲ್ ಮೂಲಕ ಬಾಡಿಗೆ ಆಧಾರದ ಮೇಲೆ ನೀರು ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಅಧಿವೇಶನದಲ್ಲಿ ಗಮನ ಸೆಳೆದ ಬೆಂಗಳೂರಿನ ವಿಶೇಷ ಶಾಲೆ
: ಚಿಂತಕರ ಚಾವಡಿಯಲ್ಲಿ ಸದಸ್ಯರಿಂದ ಒಕ್ಕೋರಲಿನ ಧನಿ

ಬೆಳಗಾವಿ ಸುವರ್ಣವಿಧಾನಸೌಧ ಡಿ.05: ರಾಜಧಾನಿಯಲ್ಲಿ ಏಕೈಕವಾಗಿರುವ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಏಳ್ಗೆಗೆ ಬಗ್ಗೆ ಚಿಂತಕರ ಚಾವಡಿ ಎಂದೇ ಹೆಸರಾದ ವಿಧಾನ ಪರಿಷತ್ತಿನಲ್ಲಿ ಡಿಸೆಂಬರ್ 5ರಂದು ಸುಧೀರ್ಘ ಚರ್ಚೆ ನಡೆಯಿತು.
ನಿಯಮ 72ರಡ ಗಮನೆ ಸೆಳೆಯುವ ಸೂಚನೆಗೆಯಡಿ ಮಂಡಿಸಿದ ವಿಷಯದ ಬಗ್ಗೆ ಪಕ್ಷಬೇಧ ಮರೆತು ಚರ್ಚೆ ನಡೆಸಿದ ಸದಸ್ಯರು, ‘ನೀವು ಹೃದಯ ವೈಶಾಲ್ಯತೆ ವಿಷಯವನ್ನು ಪರಿಷತ್ತಿನಲ್ಲಿ ಮಂಡಿಸಿ ಸಮಸ್ಯೆಯ ಮೇಲೆ ಬೆಳಕು ಚಲ್ಲಿದ್ಧೀರಿ ಎಂದು ಪರಿಷತ್ ಶಾಸಕರಾದ ಕೆ.ಎಂ.ತಿಪ್ಪೇಸ್ವಾಮಿ ಅವರಿಗೆ ಅಭಿನಂದಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ವಸತಿಯುತ ಶಾಲೆ ಇಲ್ಲದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಂಸಧ್ನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯನ್ನು ಬೆಂಗಳೂರಿನ ಇಂದಿರಾನಗರದಲ್ಲಿ ವಸತಿಯುತ ಶಾಲೆಯನ್ನಾಗಿ ಪ್ರಾರಂಭಿಸಲು 2016ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದ 9 ಅಧಿವೇಶನಗಳಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಈ ಶಾಲೆಗೆ ವಿಶೇಷ ಜಾಗ ಸಿಕ್ಕಿದೆ. ದೊಡ್ಡ ಕಟ್ಟಡವಿದೆ. ಆಟದ ಮೈದಾನವಿದೆ. ಮೂಲಭೂತ ಸೌಕರ್ಯವಿದೆ. ವಸತಿ ಶಾಲೆಯನ್ನಾಗಿ ಪ್ರಾರಂಭಿಸಲು ನಿರ್ದಿಷ್ಟ ಸಮಯವನ್ನು ಕೋರಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಸದಸ್ಯರಾದ ಕೆ.ಎಂ.ತಿಪ್ಪೇಸ್ವಾಮಿ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷಿö್ಮ ಹೆಬ್ಬಾಳಕರ ಅವರು ಮಾತನಾಡಿ, ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳಶಾಲೆಯನು ಸರ್ಕಾರದ ವಶಕ್ಕೆ ಪಡೆದು ಹಾಲಿ ಇರುವ ಸಿಬ್ಬಂದಿಗಳ ಸಮೇತ ಚರ ಸ್ಥಿರ ಆಸ್ತಿಗಳನ್ನೊಳಗೊಂಡ ಸರ್ಕಾರಿ ವಸತಿಯುತ ಶಾಲೆಯನ್ನಾಗಿ ನಿಯಮಾನುಸಾರ ಮಾರ್ಪಡಿಸಲು 136.35 ರೂ ಲಕ್ಷ ಮಂಜೂರಾತಿ ನೀಡಿ 2016ರಲ್ಲಿ ಆದೇಶಿಸಲಾಗಿದೆ. 2019ರಲ್ಲಿ ಸಂಸ್ಥೆಯನ್ನು ಸರ್ಕಾರದ ವಶಕ್ಕೆ ಪಡೆದಿದ್ದೇವೆ. ವಸತಿಯುತ ಶಾಲೆಯನ್ನಾಗಿ ಪರಿವರ್ತಿಸಲು ಅಗತ್ಯವಿರುವ ಹೆಚ್ಚುವರಿ ಹುದ್ದೆಗಳ ಸೃಜನೆ ಹುದ್ದೆಗಳ ಮಂಜೂರಾತಿಗೆ ಆರ್ಥಿಕ ಇಲಾಖೇಯಿಂದ ಅನುಮತಿ ಪಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿ ವಸತಿಯುತ ಶಾಲೆಯನ್ನಾಗಿ ಪುನಾರಂಭಿಸಲಾಗುವುದು ಎಂದು ತಿಳಿಸಿದರು.
ಸದಸ್ಯರಾದ ಬೋಜೆಗೌಡ ಅವರು ಮಾತನಾಡಿ, ಇಡೀ ರಾಜ್ಯದಲ್ಲಿ ಇಂತಹ ಶಾಲೆಗಳಿಲ್ಲ. ಸಮಾಜಮುಖಿ ಮತ್ತುಹೃದಯ ವೈಶಾಲ್ಯತೆಯಿಂದಾಗಿ ಆರಂಭಗೊAಡ ಇಂತಹ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕಿದೆ. ಆ ಶಾಲೆಯ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಸಿಬ್ಬಂದಿಯ ಅವಶ್ಯಕತೆಯಿದೆ. ಆರ್ಥಿಕ ಇಲಾಖೆ ಇದಕ್ಕೆ ಸಹಕಾರ ನೀಡಬೇಕು. ಇಂತಹ ಶಾಲೆಗಳು ಜಿಲ್ಲೆಗೊಂದು ಆಗಬೇಕು. ಈ ಹಿಂದೆ ಈ ಶಾಲೆಗೆ ನೀಡಿದ ಆಸ್ತಿಯನ್ನು ರಕ್ಷಿಸಿದಂತೆ ಸೂಕ್ತ ಸೌಲಭ್ಯ ಕಲ್ಪಿಸಿದಲ್ಲಿ ಶ್ರಮವಹಿಸಿ ಕಟ್ಟಿದವರ ಪ್ರಯತ್ನ ಫಲಪ್ರದವಾಗಲಿದೆ ಎಂದು ತಿಳಿಸಿದರು.
ಸದಸ್ಯರಾದ ಸತೀಶ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸಹ ಇಂತಹ ಶಾಲೆಗಳ ಕೊರತೆಯಿದೆ. ವಿಕಲಚೇತನ ಮಕ್ಕಳಿಗೆ ಈಗ ಕೊಡುವ ಸಹಾಯಧಾನ ಯಾತಕ್ಕೂ ಸಾಲದು. ಪ್ರತಿ ಮಾಹೆ 10,000 ನೀಡಬೇಕು ಎಂದ ಅವರು, ವಿಕಲಚೇತನರ ಮಕ್ಕಳ ಶಾಲೆಗೆ ಬಳ್ಳಾರಿ ಜಿಲ್ಲೆಯಲ್ಲಿ ಜಾಗ ನೀಡಿದರೆ ತಾವೇ ಹಣ ನೀಡಿ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಸದಸ್ಯರಾದ ತೇಜಸ್ವಿನಿ ಅವರು ಮಾತನಾಡಿ, ವಿಕಲಚೇತನ ಮಕ್ಕಳು ತಮ್ಮ ತಂದೆ ತಾಯಿ ಮತ್ತು ಪರಿಚಿತ ಸಮುದಾಯದೊಂದಿಗೆ ಬಾಳಿ ಬದುಕಲು ಅನುಕೂಲವಾಗುವಂತೆ ಇಂತಹ ಶಾಲೆಗಳು ತಾಲೂಕಿಗೊಂದು ಆಗಬೇಕು. ಬೆಂಗಳೂರಿನ ಹಂಸಧ್ವನಿ ಶಾಲೆಯು ವಸತಿಯುತ ಶಾಲೆಯಾಗಿ ಮಾರ್ಪಾಡಾಗಬೇಕು. ಹೃದಯ ವೈಶಾಲ್ಯತೆ ಇರುವವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಇಂತಹ ಶಾಲೆಗಳು ಉಳಿಯಲು ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಲು ಅನುಕೂಲವಾಗುವಂತೆ ಸರ್ಕಾರವು ಒಂದು ಬೋರ್ಡ್ ಮತ್ತು ಡೈರೇಕ್ಟರೇಟನ್ನು ರಚಿಸಬೇಕು ಎಂದು ಸದಸ್ಯರಾದ ರವಿಕುಮಾರ ಅವರು ಸಲಹೆ ಮಾಡಿದರು.
ವಿಕಲಚೇತನ ಮಕ್ಕಳು ವಿಕಲಚೇತನ ಪ್ರಮಾಣ ಪತ್ರ ಪಡೆಯಲು ಈಗಲೂ ಹರಸಾಹಸ ಪಡುವ ಸ್ಥಿತಿಯಿದೆ. ಹೀಗಾಗಿ ಸರ್ಕಾರವೇ ಅಂತಹ ಮಕ್ಕಳನ್ನು ಗುರುತಿಸಿ ಅವರ ಮನೆಗಳಿಗೆ ಹೋಗಿ ಪ್ರಮಾಣ ಪತ್ರ ನೀಡುವ ಕಾರ್ಯವಾಗಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ತಿನ ಎಲ್ಲ ಸದಸ್ಯರು ತಮ್ಮ ವೇತನದಲ್ಲಿ ಶೇ.15ರಷ್ಟು ಹಣವನ್ನು ಇಂತಹ ಮಕ್ಕಳಿಗೆ ಇಂತಹ ಶಾಲೆಗೆ ನೀಡಬೇಕು ಎಂದು ಸಲಹೆ ಮಾಡಿದರು.
ಸದುದ್ದೇಶದಿಂದ ನಿರ್ಮಾಣಗೊಂಡ ಈ ಶಾಲೆಯ ಜಾಗ ಉಳಿಯಬೇಕು ಎನ್ನುವ ಉದ್ದೇಶದಿಂದ 2016ರಲ್ಲಿ ಈ ಶಾಲೆಯನ್ನು ವಸತಿ ಶಾಲೆಯಾಗಿ ಮಾರ್ಪಡಿಸಿದೆವು. ಆಸ್ತಿ ಉಳಿಸಿಕೊಂಡ ಉದ್ದೇಶ ಸಾಕಾರವಾಗಬೇಕು. ಆರ್ಥಿಕ ಇಲಾಖೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು ಎಂದು ಉಮಾಶ್ರೀ ಅವರು ಮನವಿ ಮಾಡಿದರು.
ಸದನದಲ್ಲಿ ನೀಡಿದ ಸಲಹೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಹ ನಡೆಸಿ ಪ್ರಸ್ತಾವನೆಗೆ ಒಪ್ಪಿಗೆ ಪಡೆಯಲಾಗುವುದು ಎಂದು ಸಚಿವರಾದ ಹೆಬ್ಬಾಳಕರ ಅವರು ಪ್ರತಿಕ್ರಿಯಿಸಿದರು.

ಯಶಸ್ವಿನಿ ಯೋಜನೆಯ ಮಾನದಂಡಗಳ ಬದಲಾವಣೆಗೆ ಪರಿಶೀಲನೆ

ಬೆಳಗಾವಿ ಸುವರ್ಣವಿಧಾನಸೌಧ ಡಿ.05: ಯಶಸ್ವಿನಿ ಯೋಜನೆ ಅನುಷ್ಠಾನದ ಉದ್ದೇದಿಂದ ಅವಶ್ಯಕತೆ ಕಂಡು ಬಂದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಬದಲಾಯಿಸಲು ಪರಿಶೀಲಿಸಲಾಗುವುದು ಎಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಿಸಲಾಗಿದೆ. ಅದರಂತೆ ಸದಸ್ಯರ ನೋಂದಣಿಯನ್ನು 2022ರ ನವೆಂಬರ್ 1ರಿಂದ ಪ್ರಾರಂಭಿಸಿದ್ದು ನೋಂದಾಯಿಸಿದ ಸದಸ್ಯರಿಗೆ ನೆಟ್ ವರ್ಕ್ ಆಸ್ಪತೆಗಳಲ್ಲಿ 2023ರ ಜನವರಿ 1 ರಿಂದ 2024ರ ಮಾರ್ಚ 31ರವರೆಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈಗಿನ ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ನೆಟ್‌ವರ್ಕ್ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ನಿಗದಿತವಾಗಿ ಪಾವತಿಸುತ್ತ ಬಂದಿದ್ದು ಜನವರಿ 2023ರಿಂದ ಆಗಸ್ಟ್ 2023ರವರೆಗೆ 8 ಕಂತುಗಳಲ್ಲಿ 39 ಕೋಟಿ ರೂ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಚಿವರು ಇದೆ ವೇಳೆ ಉತ್ತರಿಸಿದರು.