Belagavi News In Kannada | News Belgaum

ಮಾಕಿ ಚೇರಮಮ್ನರು ಇನ್ನಿಲ್ಲ

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮ‌ದ ಮಾಜಿ ಗ್ರಾಪಂ ಅಧ್ಯಕ್ಷ ನಾಗಪ್ಪ ಮಡ್ಡೆಪ್ಪ ಮಾಕಿ ಗುರುವಾರ ನಿಧನರಾದರು. ಒಂದು ಕಾಲದಲ್ಲಿ ಅತ್ಯಂತ ಶೂರತನಕ್ಕೆ ಹೆಸರಾದ ಈ ಗ್ರಾಮದಲ್ಲಿ ಸ್ವಾಭಿಮಾನಕ್ಕೆ ಸಣ್ಣ ಪೆಟ್ಟುಬಿದ್ದರು ವೈರತ್ವ ಹೇಗಿತ್ತೆಂದರೆ ಸರಣಿ ಕೊಲೆಗಳಲ್ಲಿ ಅಂತ್ಯಕಾಣುವ ಕಾಲದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷರಾಗಿ 10ವರ್ಷಗಳ ಕಾಲ ಯಾವುದೆ ಪಕ್ಷಪಾತ ಮಾಡದೆ ಅಧಿಕಾರ ನಡೆಸಿದ್ದರು. ಆ ಕಾಲದಲ್ಲಿ ಗ್ರಾಮಕ್ಕೆ ಸರ್ಕಾರದ ಯಾವುದೆ ಅಧಿಕಾರಿಗಳು ಬಂದರು ಮೊದಲು ಬರುವದೆ ಗ್ರಾಮ ಪಂಚಾಯತಿ ಕಛೇರಿಗೆ, ಪೋಲಿಸ್ ರನ್ನ ಕಂಡರೆ ಭಯಬೀತರಾಗುವಂತಹ ವಾತವರಣದಲ್ಲಿ ಗ್ರಾಮದಲ್ಲಿ ಎಷ್ಟೆ ದೊಡ್ಡ ಘಟನೆ ನಡೆದರು ಅವುಗಳನ್ನು ಪೊಲಿಸ್ ಅಧಿಕಾರಿಗಳ ಮುಂದೆ ಹೇಳಿಕೆ ನೀಡುವ ಮೂಲಕ ಜವಾಬ್ದಾರಿಯುತವಾಗಿ ನಿಭಾಯಿಸಿ ಗ್ರಾಮದಲ್ಲಿದ್ದ ಕೆಲ‌ಪುಂಡರಿಗೆ ಜೈಲಿಗಟ್ಟಿದ ಕಿರ್ತಿ ಆಗಿನ ಗ್ರಾಪಂ ಅಧ್ಯಕ್ಷ ನಾಗಪ್ಪ ಮಡ್ಡೆಪ್ಪ ಮಾಕಿಯವರದ್ದು ಇವರನ್ನ ಎಲ್ಲರೂ ಪ್ರೀತಿಯಿಂದ ಇವತ್ತಿನ ವರೆಗೂ ಮಾಕಿ ಚೇರಮನ್ನರು ಸಣ್ಣ ಮಕ್ಕಳು ಮಾಕಿ‌ಚೇರಮನಜ್ಜ ಎಂದೆ ಗುರುತಿಸಲು ಕಾರಣ ಇವರ 10ವರ್ಷದ ಕರ್ತವ್ಯ. ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಅಧಿಕಾರ ನಡೆಸಿದ್ದ ಇವರು
ಗ್ರಾಮದಲ್ಲಿ 6ದಶಕಗಳ ಹಿಂದೆ ಗ್ರಾಮಕ್ಕೆ ರಿಂಗ್ ರಸ್ತೆ (ಚಕ್ಕರ ಲೈನ್ ) ಜಾರಿಗೆ ತಂದು ಗ್ರಾಮದಲ್ಲಿ‌ಪಂಚಾಯತ ಖಾಲಿ‌ಜಾಗೆ ಹಾಗೂ ರಸ್ತೆ ಅತಿಕ್ರಮಣ ಮಾಡಿದ ವ್ಯಕ್ತಿಗಳ ವಿರೋಧತೆ ಲೆಕ್ಕಿಸದೆ ತೆರುವುಗೊಳಿಸಿ ಗ್ರಾಮದಲ್ಲಿ ಸಹಕಾರಿ ಸಂಘ ಕಟ್ಟಡ ನಿರ್ಮಾಣ, ಸರಕಾರಿ ಆಸ್ಪತ್ರೆ, ಶಾಲಾ‌ ಕಟ್ಟಡ ಕಟ್ಟಿಸುವದರೊಂದಿಗೆ ಗ್ರಾಮದ ವಿರಕ್ತಮಠಕ್ಕೆ ಲಿಂ.ಗಂಗಾಧರ ಸ್ವಾಮೀಜಿಗಳನ್ನು ಪೀಠಾರೋಹಣದಲ್ಲಿ‌ ಪ್ರಮುಖ ಪಾತ್ರ ವಹಿಸಿದ್ದರು. ಉಳ್ಳುವವನೆ ಒಡೆಯ ಕಾನೂನಿನಲ್ಲಿ‌ ಅನೇಕರಿಗೆ ಭೂಮಿ ಕಲ್ಪಿಸಿದ್ದರೆ ಅನೇಕ‌ ಬೇನಾಮಿ ಕುಳಗಳಿಂದ‌ ಮಠ ಮಾನ್ಯಗಳ ಭೂಮಿಯನ್ನು ಉಳಿಸಿದ್ದರು. ಗ್ರಾಮದ ಎಳೆಗೆಗೆ ಸದಾ ಶ್ರಮಿಸಿದ್ದ ಇವರು ಗ್ರಾಮ ಸ್ವಾರಾಜ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು.
ಇಂತಹ ಮಾಹಾನ ವ್ಯಕ್ತಿ 95ನೇ ವಯಸ್ಸಿನಲ್ಲಿ ನಿಧನರಾಗಿದ್ದು ಗ್ರಾಮದ ಬೆಳಕು ಆರಿದಂತಾಗಿದೆ. ನಾಗಪ್ಪ ಮಡ್ಡೆಪ್ಪ ಮಾಕಿ ಇವರು ಲಿಂಗೈಕ್ಯರಾಗಿದ್ದ ನಿಮಿತ್ಯ ಇವರ ಸ್ಮರಣೆಯ ಉದ್ದೇಶದಿಂದ ಸ್ಥಳೀಯ ಪ್ರೌಢ ಶಾಲೆಯಲ್ಲಿ ಶ್ರದ್ದಾಂಜಲಿ ಅರ್ಪಿಸಿ ಶಾಲೆಗೆ ರಜೆ ನೀಡಲಾಯಿತು.
ಸಂತಾಪ: ಮೃತರ ಸುದ್ದಿ ತಿಳಿದ ಮುರಗೋಡ ದುರದುಂಡೇಶ್ವರ ಮಠದ ಪೂಜ್ಯ ನೀಲಕಂಠ ಸ್ವಾಮೀಜಿ, ಬೈಲಹೊಂಗಲದ ಶಾಖಾ ಮೂರುಸಾವಿರ ಮಠದ ಪೀಠಾದಿಪತಿ ಪೂಜ್ಯ ಪ್ರಭು ನೀಲಕಂಠ ಸ್ವಾಮೀಜಿ ಎಸ್.ಎನ್.ವಿ.ವಿ.ಎಸ್.ಸಂಸ್ಥೆಯ ಮಾಜಿ ಕಾರ್ಯಧ್ಯಕ್ಷ ಸಿ.ಎಸ್.ಸಾಧುನವರ, ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ,ಮಾಜಿ‌ ಪಿಕೆಪಿಎಸ್ ಅಧ್ಯಕ್ಷ ಗುರಸಿದ್ದಪ್ಪ ಚಳಕೊಪ್ಪ, ಸೋ.ಸ.ಖಾ.ನಿರ್ದೇಶಕ ಪ್ರಕಾಶ ಮೂಗಬಸವ, ವೀರನಗೌಡ ಪಾಟೀಲ, ಮಾಜಿ ಎಪಿಎಂಸಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ, ಮಾಜಿ ತಾಪಂ‌ ಸದಸ್ಯ ಜಗದೀಶ ಬೂದಿಹಾಳ, ಪಿಡಿಓ ಎಸ್.ಡಿ.ಕನಕನ್ನವರ, ಗ್ರಾಪಂ ಸದಸ್ಯರು ಪ್ರೌಢ ಶಾಲಾ‌ ಶಿಕ್ಷಕರು ಅಪಾರ ಬಂಧು ಬಳಗ ಅಂತಿಮ ಕ್ರೀಯೆಯಲ್ಲಿ ಪಲ್ಗೊಂಡು ಸಂತಾಪ‌ ಸೂಚಿಸಿದರು ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಅಪಾರ ಬಳಗ ಹೊಂದಿದೆ.