Belagavi News In Kannada | News Belgaum

ಅಧಿವೇಶನ ವೀಕ್ಷಣೆಗೆ ಆಗಮಿಸಿದ ಮಕ್ಕಳ ಮನರಂಜನೆಗೆ ಸುವರ್ಣ ವಿಧಾನಸೌಧದಲ್ಲೊಂದು ರಾಕ್ ಕ್ಲೆಂಬಿಂಗ್

ಅಧಿವೇಶನ ವೀಕ್ಷಣೆಗೆ ಆಗಮಿಸಿದ ಮಕ್ಕಳ ಮನರಂಜನೆಗೆ
ಸುವರ್ಣ ವಿಧಾನಸೌಧದಲ್ಲೊಂದು ರಾಕ್ ಕ್ಲೆಂಬಿಂಗ್

 


ಬೆಳಗಾವಿ, ಡಿ 07 : ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ನೋಡಲು ಆಗಮಿಸುವ ಮಕ್ಕಳಿಗೆ ತಿಳುವಳಿಕೆ ಜೊತೆಗೆ ಮನರಂಜನೆಯನ್ನು ನೀಡುವ ಉದ್ದೇಶದಿಂದ ಸುವರ್ಣ ವಿಧಾನಸೌಧದ ಆವರಣದಲ್ಲಿ ರಾಕ್ ಕ್ಲೆöÊಂಬಿAಗ್‌ನ್ನು ತಾತ್ಕಲಿಕವಾಗಿ ನಿರ್ಮಿಸಲಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್ ಅವರು ತಿಳಿಸಿದರು.
ಇಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಕ್ಕಳಿಗಾಗಿ ನಿರ್ಮಿಸಲಾಗಿರುವ ರಾಕ್ ಕ್ಲೆöÊಂಬಿAಗ್ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು ಬೆಳಗಾವಿ ಸುತ್ತಮುತ್ತಲಿನ ಅನೇಕ ಶಾಲಾ ಮಕ್ಕಳು ಕಲಾಪವನ್ನು ನೋಡಲು ಉತ್ಸುಕರಾಗಿದ್ದಾರೆ. ಅವರನ್ನು ಹೊರಗಡೆ ಕಾಯಿಸುವ ಬದಲು ಇಂತಹ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದರು.
ಈ ವಯಸ್ಸಿನಲ್ಲಿ ಮಕ್ಕಳು ಅಧಿವೇಶನದಂತಹ ಮುಖ್ಯ ಸಂಗತಿಗಳನ್ನು ನೋಡಿದಾಗ ಅದು ಅವರಿಗೆ ಕೊನೆಯವರೆಗೂ ನೆನಪಿರುವಂತಹ ಸಂಗತಿಯಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಅಧಿವೇಶನ ನೋಡಲು ಆಗಮಿಸುವ ಮಕ್ಕಳಿಗಾಗಿ ಕುಡಿಯುವ ನೀರು, ಸಿಹಿ ಪಾನೀಯ ಸೇರಿದಂತೆ ಮಕ್ಕಳಿಂದ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. “ಇಂದಿನ ಮಕ್ಕಳು ಮುಂದಿನ ಪ್ರಜೆಗಳು” ಅವರು ಬೆಳಗಾವಿ ಅಧಿವೇಶನ ನೋಡಿದ್ದು ನೆನಪುಳಿಯುವಂತೆ ಮಾಡುವುದು ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಅವರು ಮಾತನಾಡಿ ರಾಜ್ಯದಲ್ಲಿ ಕ್ರೀಡೆಗೆ ಅತ್ಯಂತ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ, ರಾಕ್ ಕ್ಲೆöÊಂಬಿAಗ್ ಕ್ರೀಡೆಯನ್ನು ಓಲಂಪಿಕ್ಸ್ನಲ್ಲಿ ಸಹ ಆಡಿಸಲಾಗುತ್ತಿದೆ. ಮಕ್ಕಳಿಗೆ ಈ ಕುರಿತು ಆಸಕ್ತಿ ಬೆಳೆಸಲು ಈ ರೀತಿಯ ಕ್ರೀಡೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಓಲಂಪಿಕ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿರುವ ಏಕೈಕ ರಾಜ್ಯ ನಮ್ಮ ಕರ್ನಾಟಕ ಎಂದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಅಧಿವೇಶನ ನೋಡಲು ಆಗಮಿಸಿದ್ದ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.