Belagavi News In Kannada | News Belgaum

ಕಳಸಾ ಬಂಡೂರಿ ಮಹದಾಯಿ ಕಾಮಗಾರಿ ಪ್ರಾರಂಭಿಸುವಂತೆ ರೈತರ ಒತ್ತಾಯ

 ಬೆಳಗಾವಿ: ಧಾರವಾಡ ಜಿಲ್ಲೆಗೆ ಬರ ಪರಿಹಾರ  212 ಕೋಟಿ ರೂ. ಬಿಡುಗಡೆ ಹಾಗೂ ಕಳಸಾ ಬಂಡೂರಿ ಮಹದಾಯಿ ಕಾಮಗಾರಿಯ ಪ್ರಾರಂಭಿಸುವಂತೆ ಒತ್ತಾಯಿಸಿ ರತ್ನ ಭಾರತ ರೈತ ಸಮಾಜ ನವ ದೆಹಲಿ ವತಿಯಿಂದ  ಸುವರ್ಣಸೌಧ ಸಮೀಪದ ಸುವರ್ಣ ಗಾರ್ಡನ್ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ರತ್ನ ಭಾರತ ರೈತ ಸಮಾಜ ನವ ದೆಹಲಿ ಉಪಾಧ್ಯಕ್ಷ ಹೇಮನಗೌಡ ಸವನಗೌಡ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳನ್ನು ಬರಗಾಲ ಅಂತಾ ಘೋಷಣೆ ಮಾಡಿದ್ದು, ಧಾರವಾಡ ಜಿಲ್ಲೆಗೆ 212 ಕೋಟಿ ರೂಗಳ ಬರ ಪರಿಹಾರದ ಹಣ 1 ರೂಪಾಯಿ ಕೂಡಾ ಜಮಾ ಆಗಿರುವುದಿಲ್ಲ. ರಾಜ್ಯಾದ್ಯಾಂತ ಬರಗಾಲಕ್ಕೆ ತುತ್ತಾಗಿ ರೈತರು ಬೆಳೆಸಾಲ ಮಾಡಿ ತುಂಬಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಕೂಡಲೇ ಧಾರವಾಡ ಜಿಲ್ಲೆಗೆ ಪರಿಹಾರದ ಹಣ 212 ಕೋಟಿಗಳನ್ನು ಬಿಡುಗಡೆ ಮಾಡಬೇಕು. ರೈತರು ತುಂಬಿದ ಬೆಳೆ ವಿಮೆ ಹಣವನ್ನು ಮಿಮಾ ಕಂಪನಿಯಿಂದ ಕೊಡಿಸಬೇಕು. ಕೇಂದ್ರ ಸರ್ಕಾರದಿಂದ ರೈತರಿಗೆ 6 ಸಾವಿರ ರೂ ಮತ್ತು ರಾಜ್ಯಸರ್ಕಾರದಿಂದ ಬರುವ 4 ಸಾವಿರ ರೂಗಳು ಹಣವನ್ನು ರಾಜ್ಯ ಸರ್ಕಾರ ಬಂದ ಮಾಡಿದ್ದು ಈ ಕೂಡಲೇ ಅಧಿವೇಶನದಲ್ಲಿ ರೈತರಿಗೆ 4 ಸಾವಿರ ರೂಗಳು 1ವರ್ಷಕ್ಕೆ ಕೊಡುವ ವ್ಯವಸ್ಥೆ ಮಾಡಬೇಕು.
ಮೇಕೆದಾಡು ಯೋಜನೆಗೆ ಇರುವಂತಹ ಕಾಳಜಿ ಕಳಸಾ ಬಂಡೂರಿ ಯೋಜನೆಗೆ ರಾಜ್ಯ ಸರ್ಕಾರ ಏಕೆ ಮಲತಾಯಿ ಧೋರಣೆ ತೋರುತ್ತಿದ್ದೀರಿ? ಕಾರಣ ಕಳಸಾ ಬಂಡೂರಿ ಮಹಾದಾಯಿ ಯೋಜನೆಯ ಕಾಮಗಾರಿಯನ್ನೂ ಪ್ರಾರಂಭಿಸಿಬೇಕು ಹಾಗೂ ರಾಜ್ಯದ ರೈತರಿಗೆ 3 ಪೇಸ್ 12 ತಾಸು ವಿದ್ಯುತ್ತ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ  ಪಂಜೀವ ದಂಮಕನಾಳ, ಸಂಜು ದುಮಕನಾಳ,  ಬಸವರಾಜ ಮಲ್ಲಗವಾಡ, ಈರಪ್ಪ ಕುನ್ನೂರು ಚಿಠಠಲ ಗಾಟಗೆ ಸೇರಿದಂತೆ ಇತರ ರೈತರು ಭಾಗವಹಿದ್ದರು.//////