Belagavi News In Kannada | News Belgaum

ಸುವರ್ಣಸೌಧದ ಎದುರು ವಿಕಲಚೇತನರ ಬೃಹತ್‌ ಪ್ರತಿಭಟನೆ

ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ   ಸುವರ್ಣಸೌಧ ಸಮೀಪದ ಸುವರ್ಣ ಗಾರ್ಡನ್ ಬಳಿ ಗುರುವಾರ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ (ಎಂ.ಆರ್.ಡಬ್ಲ್ಯೂ.) ಮತ್ತು ಗ್ರಾಮೀಣ ಪುನರ್ವಸತಿ (ಬಿ.ಆರ್.ಡಬ್ಲ್ಯೂ.) ಹಾಗೂ ನಗರ ಪುನರ್ವಸತಿ (ಯು. ಆರ್. ಡಬ್ಲ್ಯೂ) ಕಾರ್ಯಕರ್ತರ ರಾಜ್ಯ ಒಕ್ಕೂಟ  ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ  ರಾಜ್ಯಾಧ್ಯಕ್ಷ ಕೆ. ಸುಬ್ರಮಣ್ಯಂ ಮಾತನಾಡಿ,  ಕಳೆದ 15 ವರ್ಷಗಳಿಂದ ವಿಕಲಚೇತನರಾದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿ ಸುತ್ತಾ ಬಂದಿದ್ದರೂ ನಮ್ಮ ಮನವಿಗೆ ಯಾವುದೇ ಸರಕಾರ ಸ್ಪಂದಿಸುತ್ತಿಲ್ಲ. ಸಮಾಜದ ಕಟ್ಟ ಕಡೆಯ ವಿಕಲಚೇತನರು ಕಳೆದ ಹಲವಾರು ವರ್ಷಗಳಿಂದ ವಿಕಲಚೇತನರ ಸವಾರ್ಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದರು.
ಒಂದೆಡೆ ನಮಗೆ ನೀಡುವ ವೇತನ ಜೀವನ ನಿರ್ವಹಣೆ ಮಾಡಲು ಸಾಕಾಗುತ್ತಿಲ್ಲ. ಮತ್ತೊಂದೆಡೆ ನಮ್ಮ ಹುದ್ದೆಗಳನ್ನು ಖಾಯಂ ಮಾಡುತ್ತಿಲ್ಲ. ಆದ್ದರಿಂದ ಖಾಯಂ ಆಗುವವರೆಗೆ ಎಂಆರ್ ಡಬ್ಲ್ಯೂ ಸಹಿತ ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ಕಾರ್ಯಕರ್ತರಿಗೆ 18 ಸಾವಿರ ರೂ. ವೇತನ ನೀಡಬೇಕು. ಅಲ್ಲದೆ ನಮಗೆ ಪ್ರತ್ಯೇಕ ನಿಗಮ ರಚನೆ ಆಗಬೇಕು ಎಂದು ಒತ್ತಾಯಿಸಿದರು.

ವಿಕಲಚೇತನರ ಹಾಗೂ ಹಿರಿಯ ನಾಗರೀದಕರ ಸಬಲೀಕರಣ ಇಲಾಖೆಯಡಿ ಕಳೆದ 15 ವರ್ಷಗಳಿಂದ ವಿಕಲಚೇತನರೇ ಆದ ವಿಕಲಚೇತನರು ಮತ್ತು ಹಿರಿಯ ನಾಗರೀಕರಿಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ.ರವರ ಅವಿರತ ಶ್ರಮದಿಂದಾಗಿ ಇಂದು ಕಟ್ಟಕಡೆಯ ವಿಕಲಚೇತನರನ್ನು ಗುರ್ತಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತಂದು ಆರ್ಥಿಕ, ಸಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಔದ್ಯೋಗಿಕ ಪುನರ್‌ವಸತಿ ಕಲ್ಪಿಸುತ್ತಿದ್ದೇವೆ ಎಂದರು.

ಈ ನೌಕರರ ಅವಿರತ ಶ್ರಮದಿಂದ ಮಾನ ಕೇಂದ್ರ ಸರ್ಕಾರವು ವಿಕಲಚೇತನರ ಕ್ಷೇತ್ರದಲ್ಲಿ 2018-19, 2019-20 ನೇ ಸಾಲಿನಲ್ಲಿ ಇಲಾಖೆಗೆ ರಾಷ್ಟ್ರ ಪ್ರಶಸ್ತಿಯು ದೊರೆತಿರುವುದು ಉಲ್ಲೇಖನಿಯ. ಆದರೆ, 15 ವರ್ಷಗಳಿಂದ ಕಾರ್ಯಕರ್ತರು ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರಿಗಾಗಿ ಯಾವುದೇ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಡಿಮೆ ಇಲ್ಲದಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಲಾಖೆಗೆ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕೊಂಡಿಯಂತೆ ಕರ್ತವ್ಯ ನಿರ್ವಹಿಸುತ್ತಾ ಯಾವುದೇ ಸೇವಾ ಭದ್ರತೆ ಸೌಲಭ್ಯಗಳಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದು ನಮ್ಮ ಸೇವೆಯನ್ನು ಪರಿಗಣಿಸಿ ಮಾನವಿಯಂತೆ ಆಧಾರದ ಮೇಲೆ ಖಾಯಂಗೊಳಿಸಬೇಕೆಂದು ಕಳೆದ 14 ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮ ಬೇಡಿಕೆಗಳು ಆರಣ್ಯರೋಧನವಾಗಿದೆ. ಅದ್ದರಿಂದ ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮೂಂದಾಗಬಕು ಎಂದು ಒತ್ತಾಯಿಸಿರು.

ಬೇಡಿಕೆಗಳು: ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ.ರವರ ಸೇವೆಯನ್ನು ಖಾಯಂಗೊಳಿಸಬೇಕು.  ವಿಕಲಚೇತನರ ಹಾಗೂ ಹಿರಿಯ ನಾಗರೀಕರಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು, 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಿ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ., ಎಂ.ಆರ್.ಡಬ್ಲ್ಯೂ.ರವರ ಖಾಯಂ ಅತಿ ಆಗುವವರೆಗೆ ಕನಿಷ್ಠ ವೇತನಕ್ಕೆ ಒಳಪಡಿಸಬೇಕು, ವಿ.ಆರ್.ಡಬ್ಲ್ಯೂ., ಯು.ಆರ್.ಡಬ್ಲ್ಯೂ., ಎಂ.ಆರ್.ಡಬ್ಲ್ಯೂ.ರವರಿಗೆ ಸೇವಾ ಭದ್ರತೆ ಕಲ್ಪಿಸಬೇಕು,  ವಿಕಲಚೇತನರಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸಬೇಕು, ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

 

ಪ್ರತಿಭಟನೆಯಲ್ಲಿ  ರಾಜ್ಯ ಸಂಚಾಲಕ ಜೆ. ದೇವರಾಜ್‌, ಎಸ್‌, ಕೃಷ್ಣಪ್ಪ ಸೇರಿದಂತೆ ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದೋದ್ದೇಶ (ಎಂ.ಆರ್.ಡಬ್ಲ್ಯೂ.) ಮತ್ತು ಗ್ರಾಮೀಣ ಪುನರ್ವಸತಿ (ಬಿ.ಆರ್.ಡಬ್ಲ್ಯೂ.) ಹಾಗೂ ನಗರ ಪುನರ್ವಸತಿ (ಯು. ಆರ್. ಡಬ್ಲ್ಯೂ) ಕಾರ್ಯಕರ್ತರ ರಾಜ್ಯ ಒಕ್ಕೂಟದ ಸಾವಿರಾರೂ ಸಂಖ್ಯೆಯ ವಿಕಲಚೇತನರು ಭಾಗವಹಿಸಿದ್ದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಭರವಸೆ:

ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿಧದೋದ್ದೇಶ (ಎಂ.ಆರ್.ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ (ವಿ.ಆರ್.ಡಬ್ಲ್ಯೂ) ಹಾಗೂ ನಗರ ಪುನರ್ವಸತಿ (ಯು.ಆರ್.ಡಬ್ಲ್ಯೂ) ಕಾರ್ಯಕರ್ತರ ರಾಜ್ಯ ಒಕ್ಕೂಟ (ರಿ) ಇವರ ವಿವಿಧ ಬೇಡಿಕೆ ಈಡೇರಿಕೆಗಾಗಿ ಸುವರ್ಣ ಗಾರ್ಡನ್ ಟೆಂಟ್ ನಂ. 6 ರಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿ, ಅವರ ಕುಂದುಕೊರತೆಗಳನ್ನು ಆಲಿಸಿ, ಅವರ ಬೇಡಿಕೆಗಳ ಬಗ್ಗೆ ಗಮನ ಹರಿಸಿ ಮಾಹಿತಿಯನ್ನು ಪಡೆದು ಮನವಿಯನ್ನು ಸ್ವೀಕರಿಸಿದರು.

ಶೀಘ್ರದಲ್ಲೇ ಎಲ್ಲ ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯನವರ  ಗಮನಕ್ಕೆ ತಂದು, ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. //////