Belagavi News In Kannada | News Belgaum

ಎಚ್‌ಡಿಕೆಗೆ ತಿರುಗೇಟು ನೀಡಿದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: 50-60 ಮಂದಿ ಶಾಸಕರ ಜೊತೆ ಪ್ರಭಾವಿ ಸಚಿವ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿಕೆಗೆ, ನಮ್ಮಲ್ಲಿ ಯಾರು ಏಕನಾಥ್ ಶಿಂಧೆ, ಪವಾರ್ ಇಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು, ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನಾನೇನ್ ಡೆಲ್ಲಿಗೆ ಹೋಗಿಲ್ವಲ್ಲ,ಡೆಲ್ಲಿಗೆ ಹೋದವ್ರನ್ನ ಕೇಳಬೇಕು. ಕುಮಾರಸ್ವಾಮಿ ಆ ಪ್ರಭಾವಿ ಸಚಿವ ಯಾರು ಅಂತ ಹೇಳಿದ್ರೆ ಮುಗಿದು ಹೋಗುತ್ತದೆ ಎಂದು ಹೇಳಿದರು.
ಕಿತ್ತೂರು ಗಲಾಟೆ ವಿಚಾರ ಗೊತ್ತಿದೆ. ಮುಷ್ಕರ ಮಾಡುವ ಅವಶ್ಯಕತೆ ಇರಲಿಲ್ಲ, ಅವರ ಎಲ್ಲ ಬೇಡಿಕೆ ಈಡೇರಿಸಿದ್ದೇವೆ. ಎಲ್ಲ ಸರ್ವೇ ಮಾಡಿಸಿದ್ದೇವೆ, ಪ್ರತಿಭಟನೆ ವೇಳೆ ಮಕ್ಕಳ ನುಗ್ಗಾಟ ಆಗಬಾರದಿತ್ತು. ದೊಡ್ಡವರು,ಸಣ್ಣವರು ಪ್ರತಿಭಟನೆ ಮಾಡುವವರ ಜೊತೆ ಬೇರೆ ರೀತಿ ವರ್ತನೆ ಮಾಡಬೇಕು ಎಂದು ತಿಳಿಸಿದರು./////