Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

ಬೆಳಗಾವಿ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸುವರ್ಣಸೌಧದ ಎದು ಎದುರು ಕರ್ನಾಟಕ ರಾಜ್ಯ ರೈತ ಸಂಘಟನೆಗಳಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ನಿರತ ರೈತರು ಮಾತನಾಡಿ, ದನಕರುಗಳಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದು ತಮಗೂ ಗೊತ್ತಿರುವ ಸಂಗತಿ. ಇಂತಹದರಲ್ಲಿ ರೈತ ಬೆಳೆದಂತ ಬೆಳೆಗಳಿಗೆ ನಿಗದಿತ ಬೆಲೆ ಸಿಗದೇ ಇರುವುದು ಕೃಷಿ ಸಂಬಂದಿಸಿದ ಗೊಬ್ಬರ ಇನ್ನು ಮುಂತಾದವುಗಳ ಬೆಲೆಗಳು ಗಗನಕ್ಕೆ ಏರಿರುವುದರಿಂದ ರೈತ ಕಂಗಾಲಾಗಿದ್ದಾನೆ. ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ದು:ಖದ ಸಂಗತಿ ಇಂತಹದರಲ್ಲಿ ಮಾನ್ಯರಾದ ತಾವುಗಳು ರೈತರ ಕಷ್ಟ ಸುಖಗಳ ಬಗ್ಗೆ ಕಾಳಜಿ ವಹಿಸಿ ಪರಿಹಾರ ಮಾಡುತ್ತಿರಿ ಅನ್ನುವ ಭರವಸೆ ನಮ್ಮ ರೈತರಿಗೆ ಇದೆ. ಕಾರಣ ತಮ್ಮ ಸರಕಾರ ಗ್ಯಾರಂಟಿ ಅನ್ನುವ ಯೋಜನೆ ಮಾಡಿರುವುದರಿಂದ ಕೃಷಿ ಚಟುವಟಿಕೆ ಮಾಡಲು ಕೂಲಿ ಜನರು ಸಿಗದಂತೆ ಪರಿಸ್ಥಿತಿ ಬಂದಿದೆ. ಶೀಘ್ರವೇ ರೈತರ ಎಲ್ಲ ಬೇಡಿಕೆಗಳನ್ನು ಇಡೇರಿಸಬೇಕು ಎಂದುರು.

ಬೇಡಿಕೆಗಳು : ರೈತರ ಸಾಲ ಸಂಪೂರ್ಣ ಮನ್ನಾ ರಾಷ್ಟ್ರೀಕೃತ ಬ್ಯಾಂಕ ಸರಕಾರಿ ಸಂಘಗಳು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುವುದು, ರೈತರ ಜಮೀನುಗಳಿಗೆ ಹಗಲು ವೇಳೆ ನಿರಂತರ 3 ಪೇಸ್ ವಿದ್ಯುತ ಪೂರೈಕೆ ರಾತ್ರಿ ವೇಳೆ ಸಿಂಗಲ್ ಪೇಸ್ ವಿದ್ಯುತ ಕೊಡುವುದಾಗಬೇಕು,  ರೈತರಿಗೆ ಇಂಧನ ಇಲಾಖೆಯಿಂದ ಮೂಲಭೂತ ಸೌಕರ್ಯಗಳನ್ನು ಯಥಾಸ್ಥಿತಿ ಮುಂದುವರಿಸಬೇಕು, ರೈತರ ಕೃಷಿ ಕಾಯ್ದೆ ರದ್ದು ಮಾಡಬೇಕು,  ಬರಗಾಲದಿಂದ ತತ್ತರಿಸುವ ರೈತರ ಖಾತೆಗೆ ಪ್ರತಿ ಎಕರೆಗೆ 50000/- ರೂ. ಪರಿಹಾರ ಕೊಡಬೇಕು, ರೈತರ ಜಮೀನುಗಳಿಗೆ ಹೋಗಿ ಬರಲು ಸರಕಾರಿ ಕಾಲು ದಾರಿ ಇರುವ ಮಾರ್ಗಗಳನ್ನು ರಸ್ತೆಯಾಗಿ ಮಾಡಿಕೊಡಬೇಕು, ನರೇಗಾ ಯೋಜನೆಯಡಿಯಲ್ಲಿ ರೈತರಿಗೆ ಪ್ರತಿ ಎಕರೆಗೆ 50- ಜನ ಕೂಲಿ ಕಾರ್ಮಿಕರನ್ನು ಒದಗಿಸುವುದು, ಬರಗಾಲದಿಂದ ಜಾನುವಾರಗಳಿಗೆ ಮೇವು ಕೊರತೆ ನಿಗಿಸಲು ಮೇವು ಬ್ಯಾಂಕ ತೆರೆಯಬೇಕು. 9. ಕೇಂದ್ರ ಸರಕಾರ ಕಿಸಾನ ಸಮ್ಮಾನ ಯೋಜನೆಡಿಯಲ್ಲಿ 6000-ರೂ ಜೊತೆಗೆ ರಾಜ್ಯ ಸರಕಾರ ನೀಡುತ್ತಿದ್ದ 4000/-ರೂ ಯೋಜನೆಯನ್ನು ಜಾರಿ ಮಾಡಬೇಕು. 10.ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಹಾಗೂ ಸರಕಾರವೇ ರೈತರಿಂದ ಬೆಳೆಗಳನ್ನು ಖರೀದಿಸಬೇಕು, ಸರಕಾರಿ ಹಾಗೂ ಖಾಸಗಿ ಕಾರ್ಖಾನೆಗಳಲ್ಲಿ ರೈತರ ಮಕ್ಕಳ ಹೆಚ್ಚಾಗಿ ಕೆಲಸ ಮಾಡುತ್ತಿದ್ದು ಅವರಿಗೆ ಸೂಕ್ತ ಉದ್ಯೋಗ ಭದ್ರತೆ ಒದಗಿಸಬೇಕು, ಇದಕ್ಕಿಂತ ಮೊದಲಾಗಿ ಕೃಷಿ ಪ್ರಧಾನವಾದ ನಮ್ಮಲ್ಲಿ ಎಲ್ಲರಿಗೂ. L.K.G ಯಿಂದ ಹಿಡಿದು P.G ವರೆಗೆ ಉಚಿತ ಶಿಕ್ಷಣ ನೀಡಬೇಕು ಎಂಬಿತ್ಯಾಸಿ ಬೇಡಿಕೆಗಳನ್ನು ಮುಂದಿರಸಲಾಗಿದೆ. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು./////