Belagavi News In Kannada | News Belgaum

ಆಯುಷ್ ಆಸ್ಪತ್ರೆಗಳಿಗೆ ಸೂಕ್ತ ಮೇಲ್ವಿಚಾರಣೆ: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ: ಆಯುಷ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ದಾಖಲಾತಿ ವ್ಯವಸ್ಥೆ ಮಾಡುವುದು ಸೇರಿದಂತೆ ಎಲ್ಲಾ ರೀತಿಯಿಂದ ಸೂಕ್ತ ಮೇಲ್ವಿಚಾರಣೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಸದಸ್ಯರಾದ ಪಿ.ಎಚ್. ಪೂಜಾರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿರುವ 80 ಆಸ್ಪತ್ರೆಗಳಲ್ಲಿ ಈಗಾಗಲೇ 55 ಆಯುಷ್ ಆಸ್ಪತ್ರೆಗಳಲ್ಲಿ ಒಳರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲಾಗಿದ್ದು ಉಳಿದ 25 ಆಯುಷ್ ಆಸ್ಪತ್ರೆಗಳಲ್ಲಿ ಒಳ ರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುತ್ತಿದೆ.
ಜಿಲ್ಲಾ ಆಯಷ್ ಅಧಿಕಾರಿಗಳ ಪ್ರತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿ ಆಸ್ಪತ್ರೆಗಳ ಒಳರೋಗಿಗಳ ದಾಖಲಾತಿಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ. ಆಯುಷ್ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೊರತೆ ಇರುವ ಕಡೆ ಗಮನ ಕೊಟ್ಟು ಔಷಧಿ ಖರೀದಿ, ಸಿಬ್ಬಂದಿ ನೇಮಕ ಮತ್ತು ಆಯುಷ್ ತಜ್ಞ ವೈದ್ಯರ ನೇಮಕಕ್ಕೆ ಒತ್ತು ಕೊಡಲಾಗುತ್ತಿದೆ. ಕೇಂದ್ರ ಸರ್ಕಾರವು ಆಯುಷ್ ಆಸ್ಪತ್ರೆಗಳಿಗೆ ಔಷಧಿ, ಸಲಕರಣೆ ಮತ್ತು ಉಪಕರಣಕ್ಕೆ ನೀಡಿದ ಅನುದಾನದ ಸದ್ಭಳಕೆ ಮಾಡಲಾಗುತ್ತಿದೆ. ಎರಡು ತಿಂಗಳೊಳಗೆ ಅವಶ್ಯವಿರುವ ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಆರೈಕೆ ಕೇಂದ್ರಗಳಲ್ಲಿ ಇಬ್ಬರು ಶುಶ್ರೂಷಕಿಯರಿಗೆ ರಕ್ತಸಂಬಂಧಿತ ಖಾಯಿಲೆಗಳ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಯ ಆರಂಭಿಕ ತರಬೇತಿಯನ್ನು ನೀಡಲಾಗಿದೆ. ಈ ಕೇಂದ್ರಗಳಲ್ಲಿ ಉಚಿತ ಆಂಟಿ ಹಿಮೋಫಿಲಿಯಾ, ಉಚಿತ ರಕ್ತ ನೀಡುವುದು, ಉಚಿತ ಸಮಾಲೋಚನೆ, ಉಚಿತ ಫೀಜಿಯೊಥೆರಪಿ,  ಹೆಚ್ಚಿನ ಚಿಕಿತ್ಸೆ, ಉಚಿತ   Genetic Counseling ,  ಉಚಿತ ರೋಗಪತ್ತೆ  ಸೇವೆಗಳನ್ನು ಒದಗಿಸುತ್ತಿದ್ದು, ಒಬ್ಬ ಹಿಮೋಫಿಲಿಯಾ ರೋಗಿಗೆ ಪ್ರತಿ ವರ್ಷ ಅಂದಾಜು ರೂ. 3 ರಿಂದ 4 ಲಕ್ಷ ವೆಚ್ಚವಾಗಲಿದೆ ಎಂದರು.

ಹಿಮೋಫಿಲಿಯಾ ರೋಗಕ್ಕೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಪ್ರತಿ ವರ್ಷ ಜಿಲ್ಲಾವಾರು  ಕಾರ್ಯಾಗಾರಗಳನ್ನು ಹಿಮೋಫಿಲಿಯಾ ಸೊಸೈಟಿ ಸಹಭಾಗಿತ್ವದೊಂದಿಗೆ ಆಯೋಜಿಸಿ ಮಾಹಿತಿಯನ್ನು ನೀಡಲಾಗುತ್ತಿದೆ. ಎಲ್ಲಾ ಹಿಮೋಫಿಲಿಯಾ ರೋಗಿಗಳಿಗೆ IEC     ಚಟುವಟಿಕೆ ಮತ್ತು ತರಬೇತಿ  ಮುಖಾಂತರ ಹಿಮೋಫಿಲಿಯಾ ಆರೈಕೆ ಮತ್ತು ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಪ್ರತಿ ವರ್ಷ 17ನೇ ಏಪ್ರಿಲ್ ರಂದು ವಿಶ್ವ ಹಿಮೋಫಿಲಿಯಾ ದಿನಾಚರಣೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ಆಚರಿಸಲಾಗುತ್ತಿದ್ದು, ರಾಜ್ಯದಲ್ಲಿ ಈವರೆಗೆ 2706 ಹಿಮೋಫಿಲಿಯಾ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಇವರಿಗೆ ಆಂಟಿ ಹಿಮೋಫಿಲಿಯಾ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 20 ರಿಂದ 30 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ ಎಂದರು.///////