Belagavi News In Kannada | News Belgaum

ವಿವಿಧ ಸೌಲಭ್ಯ ನೀಡಲು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರತಿಭಟನೆ

ಬೆಳಗಾವಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿಯ ಪರಿಷ್ಕೃತ ಆದೇಶದೊಂದಿಗೆ ಕೇಂದ್ರಕ್ಕೆ ಶಿಪಾರಸ್ಸು ಮಾಡಿ ಎಸ್.ಸಿ.ಪಿ., ಟಿ.ಎಸ್.ಪಿ. ಸೇರಿದಂತೆ ನಾನ್ ಸ್ಟೆಚ್ಯುಟರಿ ಆರ್ಥಿಕ ಸೌಲಭ್ಯಗಳಿಗೂ ಒಳಮೀಸಲಾತಿಯನ್ನು ವಿಸ್ತರಿಸಿ ಆದೇಶಿಸಲು ಆಗ್ರಹಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪರಿಷ್ಕೃತ ಆದೇಶವನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂದು ಮತ್ತು ಪರಿಶಿಷ್ಟ  ಜಾತಿಗಳ ಒಳಮೀಸಲಾತಿ ಅನುಪಾತ ಶೇ. 6%, ಶೇ. 5.5%, ಶೇ. 4.5% ಮತ್ತು ಶೇ. 1.00 ರಂತೆ ಎಸ್.ಸಿ.ಪಿ. ಟಿ.ಎಸ್.ಪಿ. ಸೇರಿದಂತೆ ಎಲ್ಲಾ ಆರ್ಥಿಕ ಸೌಲಭ್ಯಗಳಿಗೂ ವಿಸ್ತಿರಿಸಿ ಆದೇಶಿಸಬೇಕೆಂದು ಹೋರಾಟ ಸಮಿತಿ ಆಗ್ರಹಿಸಿತು.

 

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಹಕ್ಕೋತ್ತಾಯಗಳು:-

1) ಜಿ. ಮಾದುಸ್ವಾಮಿ ನೇತೃತ್ವದ ಉಪಸಮಿತಿಯ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಪರಿಷ್ಕೃತ ಆದೇಶವನ್ನು ಕೇಂದ್ರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು.

2) ಪರಿಶಿಷ್ಠ ಜಾತಿಗಳ ಒಳಮೀಸಲಾತಿಯ ವರ್ಗ-4 ರಲ್ಲಿರುವ ಹಲವು ಉಪಜಾತಿಗಳನ್ನು ವರ್ಣ-1 ವರ್ಗ- 2ಕ್ಕೆ ವರ್ಗಾಯಿಸಬೇಕು.

3) ವರ್ಗ-1, ವರ್ಗ-2ರಲ್ಲಿ ಆದಿ ಕರ್ನಾಟಕ, ಆದಿ ದ್ರಾವೀಡ, ಆದಿ ಆಂಧ್ರ, ಉಪಜಾತಿಗಳ ಹೆಸರುಗಳು ಮುಂದುವರೆಯಬೇಕು.

4) ಮೈಸೂರು, ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಮಾದಿಗ, ಹೊಲೆಯ ಎಂದು ಜಾತಿ ಪ್ರಮಾಣ ಪತ್ರ ನೀಡುವಂತೆ ಕಂದಾಯ ಇಲಾಖೆಗೆ ಆದೇಶಿಸಬೇಕು.

6) ತ್ರಿಮತಸ್ಥರಿಗೆ (ಮೋಜಿ, ಡೋಹರ, ಸಮಗಾರ,) ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.

7) 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು.

8) ಮಾನ್ಯ ಡಾ. ಕಾಂತರಾಜ್ ಮಾಜಿ ಅಧ್ಯಕ್ಷರು, ಹಿಂದುಳಿದ ವರ್ಗಗಳ ಆಯೋಗ ಬೆಂಗಳೂರು ಇವರ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು./////