Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಕೆಗೆ ಉ.ಕ ಅಂಜುಮನ್‌ ಎ ಇಸ್ಲಾಮ್‌ ಒತ್ತಾಯ

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಉ.ಕ ಅಂಜುಮನ್‌ ಎ ಇಸ್ಲಾಮ್‌ ವತಿಯಿಂದ  ಸುವರ್ಣಸೌಧದ ಎದುರು  ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಉ.ಕ ಅಂಜುಮನ್‌ ಎ ಇಸ್ಲಾಮ್‌ ಕೋಶಾಧಿಕಾರಿ ಅಬ್ದುಲ್‌ ವಾಹಿದ್‌ ಅತ್ತಾರ್‌ ಮಾತನಾಡಿ, 4%ರಿಂದ 8% ಕೋಟಾ ಹೆಚ್ಚಳದೊಂದಿದಿಗೆ 2ಬಿ ಮೀಸಲಾತಿ ಮರುಸ್ಥಾಪಿಸಬೇಕು,  ವಿಮಾನ ನಿಲ್ದಾಣ ಸಮೀಪ ಹುಬ್ಬಳ್ಳಿಯಲ್ಲಿ ಹಜ್‌ ಭವನ ನಿರ್ಮಾಣ ಮಾಡಬೇಕು, ಉತ್ತರ ಕರ್ನಾಟಕದಲ್ಲಿ  ಉರ್ದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು  ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಪ್ರತಿಬಟನೆಯಲ್ಲಿ  ಹಂಇದ ಕೊಪ್ಪದ,  ಜೆ.ಎನ್.‌ ಗಲಗಲಿ,  ಎ.ಬಿ ಅತ್ತಾರ, ಎ. ಎಂ. ಮುಲ್ಲಾ, ಆರೀಫ್‌ ಇನಾಂದಾರ ಸೇರಿದಂತೆ ಇತರರು ಭಾಗವಹಿಸಿದ್ದರು./////