Belagavi News In Kannada | News Belgaum

ಸುವರ್ಣಸೌಧದ ಎದುರು ಖಾಸಗಿ ಶಾಲೆಗಳ ಬೇಡಿಕೆ ಈಡೇರಿಕೆಗೆ ಹೋರಾಟ

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ  ರುಪ್ಸಾ ಕರ್ನಾಟಕದಿಂದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘದ ವತಿಯಿಂದ ಸುವರ್ಣಸೌಧದ  ಸಮೀಪ ಸುವರ್ಣಾ ಗಾರ್ಡನ್  ಬಳಿ ಸೋಮವಾರ ಪ್ರತಿಭಾನೆ ನಡೆಸಲಾಯಿತು.

ಪ್ರತಿಬಟನೆಯಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿ ಶಶಿಧರ ದಿಂಡೂರ ಮಾತನಾಡಿ, 1995ರ ನಂತರ ಕನ್ನಡ ಮಾಧ್ಯಮ ಎಲ್ಲ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. ಖಾಸಗಿ ಶಾಲೆಗಳಲ್ಲಿ ಶೇ.25 ಆರ್‌ಟಿಇ ಮಕ್ಕಳ ದಾಖಲಾತಿ ಮರು ಸ್ಥಾಪಿಸಬೇಕು, ಸರ್ಕಾರದಿಂದ ಪ್ರತಿ ಮಗುವಿಗೆ ನೀಡುವ 16 ಸಾವಿರ ವೆಚ್ಚವನ್ನು 35 ಸಾವಿರ ರೂ.ಗಳಿಗೆ ಏರಿಸಬೇಕು. ಖಾಸಗಿ ಶಾಲೆಗಳ ನವೀಕರಣ ವೇಳೆ ಅಗ್ನಿ ಶಾಮಕ ರಕ್ಷಣೆ ಮತ್ತು ಕಟ್ಟಡ ಭದ್ರತಾ ಪ್ರಮಾಣ ಪತ್ರಗಳಿಗೆ ರಿಯಾಯಿತಿ ನೀಡಬೇಕು. ಖಾಸಗಿ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ನವೀಕರಣವನ್ನು 10 ವರ್ಷಗಳ ಅವಧಿಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಖಾಸಗಿ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಹೈಕೊರ್ಟ್‌ ಆದೇಡಶದಂತೆ ಕನಿಷ್ಠ 10 ವರ್ಷಗಳಿಗೆ ನೀಡಬೇಕು, ಶೈಕ್ಷನಿಕ ವರ್ಷ 2017-18ರ ಮುಂಚೆ ಪ್ರಾರಂಭವಾದ ಶಿಕ್ಷಣ ಸಂಸ್ಥೆಗಳಿಗೆ ಫೈಯರ್‌ ಸೇಫ್ಟಿ, ಬಿಲ್ಡಿಂಗ್‌ ಸೇಫ್ಟಿ, ಭಯ ಪರಿವರ್ತನಾ ನಿಯಮದಿಂದ  ಕೊರ್ಟ್‌ ಆದೇಶದಂತೆ ವಿನಾಯತಿ ನೀಡುವುದು, ರಾಷ್ಟ್ರೀಯ ಶಿಕ್ಷಣ ನೀತಿ 2020 ಕರ್ನಾಟಕದಲ್ಲಿ ಅನುಷ್ಠಾನವಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಬಟನೆಯಲ್ಲಿ  ಸಂಘದ ರಾಜ್ಯಾಧ್ಯಕ್ಷ ಡಾ. ಹಾಲನೂರು ಲೇಪಾಕ್ಷ,  ರೂಪ್ಸಾ ತಾಲೂಕು ಅಧ್ಯಕ್ಷ ನಾಗರಾಜ ಹಿರೇಮಠ, ಕಾರ್ಯದರ್ಶಿ ನಾಗರಡ್ಡಿ ದೇವಾಪುರ, ರಾಜ್ಯ ನಿರ್ದೇಶಕ ನಾಗನಗೌಡ, ಮಹ್ಮದ್ ಖಾದರಪಾಶಾ, ಸಂಗಯ್ಯ ಮೂಲಿಮಠ ಸೇರಿದಂತೆ ಇತರರು ಇದ್ದರು./////