Belagavi News In Kannada | News Belgaum

ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಗಜು ಧರನಾಯಿಕ ಆಗ್ರಹ

ಬೆಳಗಾವಿ 11: ಆಡಳಿತ ಸುಗಮದ ದೃಷ್ಟಿಯಿಂದ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಯುವ ಕಾಂಗ್ರೆಸ್ ಧುರೀಣ ಗಜು ಧರನಾಯಿಕ ಸರಕಾರವನ್ನು ಆಗ್ರಹಿಸಿದ್ದಾರೆ.
ಆಡಳಿತದ ಸುಗಮತೆಗೆ ಹಾಗೂ ಚಿಕ್ಕೋಡಿ, ರಾಯಬಾಗ, ಅಥಣಿ ಭಾಗದ ಜನತೆಗೆ ಅನುಕೂಲ ದೃಷ್ಟಿಯಿಂದ ಚಿಕ್ಕೋಡಿಗೆ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಭಾಗದ ಜನರು ಜಿಲ್ಲಾ ಕೇಂದ್ರಕ್ಕೆ ಬಂದು ತಮ್ಮ ಕೆಲಸ ಮಾಡಿಕೊಂಡು ಹೋಗಬೇಕಾದರೆ ಒಂದು ದಿನ ಬೇಕಾಗುತ್ತದೆ. ಅಧಿಕಾರಿಗಳು ಸಿಗದಿದ್ದರೆ ಮತ್ತೊಂದು ದಿನ ಬರಬೇಕಾಗುತ್ತದೆ. ಇದು ಜನಸಾಮಾನ್ಯರಿಗೆ ಹೊರೆ ಆಗುತ್ತದೆ. ಚಿಕ್ಕೋಡಿ ಜಿಲ್ಲೆ ಆಗುವುದರಿಂದ ಈ ಭಾಗದ ಜನತೆಗೆ ತುಂಬಾ ಅನುಕೂಲ ಆಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.