Belagavi News In Kannada | News Belgaum

ನೂತನ ಬಸ್ ಆರಂಭ

ಕೆಂಭಾವಿ: ಬಸವಕಲ್ಯಾಣದಿಂದ ಬಾಗಲಕೋಟ ನಗರಕ್ಕೆ ಕೆಂಭಾವಿ ಮಾರ್ಗವಾಗಿ ನೂತನ ಬಸ್ ಆರಂಭಿಸಲಾಗಿದ್ದು ಪ್ರಯಾಣಿಕರು ಸದುಪಯೋಗ ಪಡಿಸಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧೀಕಾರಿ ಎಸ್. ಎಚ್. ಪುಲೆಕರ್ ತಿಳಿಸಿದ್ದಾರೆ..
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈ ನೂತನ ಬಸ್ ಬಸವಕಲ್ಯಾಣದಿಂದ ಬೆಳಿಗ್ಗೆ ೧೦ ಗಂಟಗೆ ಹೊರಟು ಕಲಬುರಗಿ, ಶಹಾಪೂರ, ಕೆಂಭಾವಿ, ಪೀರಾಪೂರ, ತಾಳಿಕೋಟ, ಮುದ್ದೇಬಿಹಾಳ, ಆಲಮಟ್ಟಿ ಮಾರ್ಗವಾಗಿ ಬಾಗಲಕೋಟ ತಲುಪಲಿದೆ. ಇದೇ ಮಾರ್ಗವಾಗಿ ಬೆಳಿಗ್ಗೆ ೬ ಗಂಟೆಗೆ ಬಾಗಲಕೋಟ ನಗರದಿಂದ ಹೊರಟು ಬಸವಕಲ್ಯಾಣಕ್ಕೆ ೪ ಗಂಟೆಗೆ ತಲುಪಲಿದೆ ಎಂದು ತಿಳಿಸಿದ್ದಾರೆ..
ಈ ಭಾಗದ ಪ್ರಯಾಣಿಕರ ಬಹು ದಿನಗಳ ಬೇಡಿಕೆಯಾಗಿದ್ದ ಈ ಮಾರ್ಗದ ಬಸ್ ಓಡಿಸಲು ಸಹಕರಿಸಿದ ಇಲಾಖೆಯ ಎಲ್ಲ ಮೇಲಾಧಿಕಾರಿಗಳಿಗೆ ನಾಗರಿಕ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ
ಸಂಜೀವರಾವ ಕುಲಕರ್ಣಿ, ಉಪಾಧ್ಯಕ್ಷ ನೂರುಲ್ಲಾಖಾನ (ಬಾಬಾ) ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.