Belagavi News In Kannada | News Belgaum

ಮಾರ್ಚ್ ಅಂತ್ಯಕ್ಕೆ ಚಿಕ್ಕರಂಗನಾಥ,ಕೊಗಳ,ಮತ್ತು ಮುಡಿಗುಂಡ ಕೆರೆ ಕಾಮಗಾರಿ ಪೂರ್ಣ -ಸಚಿವ ಎನ್.ಎಸ್.ಭೋಸರಾಜು

ಬೆಳಗಾವಿ ಸುವರ್ಣಸೌಧ,ಡಿ.12: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚಿಕ್ಕರಂಗನಾಥ, ಕೊಂಗಳ ಮತ್ತು ಮುಡಿಗುಂಡ ಕೆರೆಗಳ ಅಭಿವೃದ್ಧಿಯ 5 ಕಾಮಗಾರಿಗಳಿಗೆ ರಾಜ್ಯ ಸರ್ಕಾರ ರೂ.10 ಕೋಟಿ ಮಂಜೂರು ಮಾಡಿದೆ. ಈಗಾಗಲೇ ರೂ.3.38 ಕೋಟಿ ಬಿಡುಗಡೆಯಾಗಿದ್ದು, 2024ರ ಮಾರ್ಚ್ ಅಂತ್ಯಕ್ಕೆ ಕಾಮಾಗರಿಗಳು ಪೂರ್ಣಗೊಳ್ಳಲಿವೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು.

ಮಂಗಳವಾರ ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಕೃಷ್ಣಮೂರ್ತಿ.ಎ.ಆರ್ ಪ್ರಶ್ನೆಗೆ ಅವರು ಉತ್ತರಿಸಿದರು.

ಈ ಕೆರೆಗಳು ಒತ್ತುವರಿ ತೆರವುಗೊಳಿಸಿ ಕಾಮಗಾರಿಗಳನ್ನು ಮುಂದುವರಿಸುವAತೆ ರೈತರು ಮನವಿ ಮಾಡಿದ್ದಾರೆ. ಈ ಕಾರಣದಿಂದ ಕಾಮಗಾರಿ ಪ್ರಗತಿಯು ಕುಂಠಿತಗೊAಡಿದೆ. ಈ ಕೆರೆಗಳ ಅಚ್ಚುಕಟ್ಟು ಪ್ರದೇಶದ ಮುಂಗಾರು ಬೆಳೆಗಳಿಗೆ ನೀರು ನೀಡಲು ಕಬಿನಿ ನಾಲೆಯಿಂದ ಕೆರೆಗಳಿಗೆ ನೀರು ಹರಿಸಲಾಗಿದೆ. ಈ 5 ಕಾಮಗಾರಿಗಳ ಗುತ್ತಿಗೆ ಮೊತ್ತ ರೂ.8.30 ಕೋಟಿ ಆಗಿದೆ. ಹೊಂಗನೂರು ಹೀರೆ ಕೆರೆಯು 732 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 30.ಕಿ.ಮೀ ಕೆನಾಲ್ ನಿರ್ಮಿಸಬೇಕಿದೆ. ಈ ಕೆರೆಯ ಅಭಿವೃದ್ಧಿ ರೂ.18 ಕೋಟಿ ಅವಶ್ಯಕತೆ ಇದೆ. ಅನುದಾನ ಲಭ್ಯತೆ ಮೇಲೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದಾಗಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಲಬುರಗಿ ತಾಲ್ಲೂಕಿನ ಅಫಜಲಪುರ ಮತಕ್ಷೇತ್ರ ವ್ಯಾಪ್ತಿಯ ಫಿರೊಜೊಬಾದ್ ಏತ ನೀರಾವರಿ ಯೋಜನೆ 2019-20ರಲ್ಲಿ ಸರ್ಕಾರ ರೂ.2.88 ಬಿಡುಗಡೆ ಮಾಡಿದೆ. ಆದರೆ ಏತ ನೀರಾವರಿ ಪುನರುಜ್ಜೀವನಗೊಳಿಸಲು ವಾಸ್ತವಾಗಿ ರೂ.15.14 ಕೋಟಿ ಅವಶ್ಯಕವಿದ್ದು, ಅನುದಾನದ ಲಭ್ಯತೆ ಆಧರಿಸಿ ಕಾಮಗಾರಿ ಮಂಜೂರಾತಿ ನೀಡುವುದಾಗಿ ಶಾಸಕ ಪಾಟೀಲ್.ಎಂ.ವೈ ಪ್ರಶ್ನೆಗೆ ಸಚಿವ ಸಚಿವ ಎನ್.ಎಸ್.ಭೋಸರಾಜು ಉತ್ತರಿಸಿದರು.