Belagavi News In Kannada | News Belgaum

ರಾಜ್ಯದಲ್ಲಿ 187 ಕಪ್ಪು ಸ್ಥಳಗಳು ಅಪಘಾತ ಮುಕ್ತ ಸ್ಥಳಗಳಾಗಿ ಅಭಿವೃದ್ದಿ

ಬೆಳಗಾವಿ ಸುವರ್ಣಸೌಧ: ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳಲ್ಲಿನ ಅಡಿಯಲ್ಲಿ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿನ 187 ಕಪ್ಪು ಸ್ಥಳಗಳನ್ನು ರೂ.23204.42 ಲಕ್ಷ ಅಂದಾಜು ಮೊತ್ತದಲ್ಲಿ ಪಿ.ಆರ್.ಎ.ಎಂ.ಸಿ ವತಿಯಿಂದ ಅಭಿವೃದ್ದಿಪಡಿಸಿ ಅಪಘಾತ ಮುಕ್ತ ಸ್ಥಳಗಳನ್ನಾಗಿಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಪೈಕಿ 182 ಕಪ್ಪುಸ್ಥಳಗಳ ಅಭಿವೃಧ್ದಿ ಕಾಮಗಾರಿಗಳು ಪೂರ್ಣಗೊಂಡಿದ್ದು ಬಾಕಿ ಉಳಿದ 5 ಕಾಮಗಾರಿಗಳು ಪ್ರಗತಿಯಲ್ಲಿವೆ. ಇದುವರೆಗೆ ಸದ್ರಿ ಕಪ್ಪು ಸ್ಥಳಗಳ ಅಭಿವೃದ್ದಿಗೆ ರೂ.13841.49 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಅವರು ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಕೆ.ಎ. ತಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲೋಕೋಪಯೋಗಿ ಸಚಿವರ ಪರವಾಗಿ ಉತ್ತರಿಸಿದರು.

ಪಿ.ಆರ್.ಎ.ಎಂ.ಸಿ ವತಿಯಿಂದ ಹಾಗೂ ಲೋಕೋಪಯೋಗಿ ಇಲಾಖೆ ಸಂಪರ್ಕ ಮತ್ತು ಕಟ್ಟಡಗಳ ವಲಯಗಳ ಅಡಿಯಲ್ಲಿನ ವಿಭಾಗಗಳ ವತಿಯಿಂದ ಇಲ್ಲಿಯವರೆಗೆ ಅಭಿವೃದ್ಧಿಪಡಿಸಿರುವ ಒಟ್ಟು 205 ಕಪ್ಪು ಸ್ಥಳಗಳ ಅನುಷ್ಠಾನ್ನೊತ್ತರ ಅಧ್ಯಯನ (Post implementation study) ವನ್ನು ವೈಜ್ಞಾನಿಕವಾಗಿ ಕೈಗೊಳ್ಳಲು ವಿವಿಧ ತಾಂತ್ರಿಕ ಕಾಲೇಜುಗಳಿಗೆ ವಹಿಸಿಕೊಡಲಾಗಿದ್ದು, ಇಲ್ಲಿಯವರೆಗೆ ಅಭಿವೃದ್ಧಿಪಡಿಸಲಾದ 99 ಕಪ್ಪು ಸ್ಥಳಗಳ 3 ವರ್ಷಗಳ ವಾರ್ಷಿಕವಾರು ಅಧ್ಯಯನ ವರದಿಗಳು ಸ್ವೀಕೃತವಾಗಿದ್ದು, ಸದರಿ ಅಧ್ಯಯನ ವರದಿಯನುಸಾರ ಅಭಿವೃದ್ಧಿಪಡಿಸಲಾದ ಕಪ್ಪು ಸ್ಥಳಗಳಲ್ಲಿ ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬ0ದಿರುತ್ತದೆ ಎಂದು ತಿಳಿಸಿದರು.//////