Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಕೆಗೆ ಪತ್ರಕರ್ತರ ಒತ್ತಾಯ

ಬೆಳಗಾವಿ: ಪತ್ರಕರ್ತರಿಗೂ ಮೂಲ ಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ  ಸುವರ್ಣಸೌಧ ಬಳಿ ಇರುವ ಸುವರ್ಣಗಾರ್ಡನ್‌ ಟೆಂಟ್‌ ನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯಾಧ್ಯಕ್ಷ ಮಾತನಾಡಿ, ಸ್ವಾತಂತ್ರ್ಯ ಬಂದು 76 ವರ್ಷ ಕಳೆಯುತ್ತಾ ಬಂದರೂ ಇಂದಿನವರೆಗೂ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಪತ್ರಕರ್ತರಿಗೂ ಮೂಲ ಭೂತ ಸೌಕರ್ಯ ಮರೀಚಿಕೆಯಾಗಿದೆ. ಸರ್ಕಾರ ನೀಡುತ್ತಿರುವ ಆಕ್ಸಿಡೇಷನ್ ತಾರತಮ್ಯದಿಂದ ಕೂಡಿದ್ದು, ದಿನ ಪತ್ರಿಕೆಗಳ ಜಿಲ್ಲಾ ವರದಿಗಾರರಿಗೆ ಮಾತ್ರ ಅಕ್ಸಿಡೇಷನ್ ಸೌಲಭ್ಯ ದೊರೆಯುತ್ತಿದ್ದು, ಇನ್ನುಳಿದಂತ 10 ಸಾವಿರ ಪತ್ರಕರ್ತರು ಸರ್ಕಾರದ ಈ ನೀತಿಯಿಂದಾಗಿ ರಾಜ್ಯದಲ್ಲಿ ವಂಚಿತವಾಗಿ ಯಾವುದೇ ಸೌಲಭ್ಯಗಳು ದೊರೆಯಂದಂತಾಗಿದೆ ಎಂದು ತಮ್ಮ ಅಳಲನ್ನೊ ತೋಡಿಕೊಂಡರು.
ದಿ. 14/8/2023 ರಂದು ನಮ್ಮ ಕಾ.ನಿ.ಪ.ಧ್ವನಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕಾನಲ್ಲಿ ನಾಡಿನ | ಪತ್ರಕರ್ತರ ಜ್ವಲಂತ ಸಮಸ್ಯೆಗಳ ಬೇಡಿಕೆಗಳ ಈಡೇರಿಕೆಗಾಗಿ ನಡೆಸಿದ ಹೋರಾಟದ ಸ್ಥಳಕ್ಕೆ ತಮ್ಮ ಮಾಧ್ಯಮ ಸಲಹೆಗಾರರಾದ ಪ್ರಭಾಕರ್‌ರವರು ಆಗಮಿಸಿ, ಸಮಸ್ಯೆಗಳಿಗೆ ಸ್ಪಂಧಿಸುವುರಾಗಿ ಹೇಳಿ, ದಿ 21/8/2023 ರಂದು ತಮ್ಮ ನೇತೃತ್ವದಲ್ಲಿ (ಮುಖ್ಯಮಂತ್ರಿ ಸಿದ್ದರಾಮಯ್ಯನವರ) ಕೃಷ್ಣದಲ್ಲಿ ಸಭೆ ನಡೆಸಿದ್ದರೂ ಇಲ್ಲಿಯವರೆಗೂ ಪ್ರಯೋಜನಕ್ಕೆ ಬಾರದಾಗಿದ್ದು ವಿಷಾದನೀಯ ಎಂದರು.

ಹಲವಾರು ವರ್ಷಗಳಿಂದ ಬಸ್ ಪಾಸ್ ಗಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಆಯಾ ಜಿಲ್ಲಾ ವ್ಯಾಪ್ತಿ ಓಡಾಡಲು ಪತ್ರಕರ್ತರಿಗೆ ಕೇವಲ ವಾರ್ಷಿಕ 10 ಕೋಟಿ ರೂಗಳು ಬಡ್ಡಟ್ನಲ್ಲಿ ಮೀಸಲಿಡಲು ಆಗದ ತಮಗೆ ತಮ್ಮ ಸಾಮಾಜಿಕ ಹರಿಕಾರತನ ಬಗ್ಗೆ ಅನುಮಾನ ಮೂಡುವಂತಾಗಿರುವ ಈ ಸಂದರ್ಭದಲ್ಲಿ ಕೊನೆಯ ಹೋರಾಟ ಕೊನೆಯ ಮನವಿ ತಮಗೆ ಈ ಚಳಿಗಾಲದ ಅಧಿವೇಶನದ ಬೆಳಗಾವಿ ಸುರ್ವಣ ಸೌಧದ ಮುಂದೆ ಪ್ರತಿ ಭಟನ ಧರಣಿಯೊಂದಿಗೆ ಮನವಿ ಸಲ್ಲಿಸುತ್ತಿದ್ದು. ತಾವು ನೊಂದಂತ ಪತ್ರಕರ್ತರ ಮನವಿಗೆ ಸ್ಪಂದಿಸಿದರೆ ಸರಿ ಇಲ್ಲದಿದ್ದರೆ ಜನವರಿ 2024 ರಿಂದ ತಮ್ಮ ಹಾಗೂ ತಮ್ಮ ಸರ್ಕಾರದ ವಿರುದ್ಧ ಕಾನೂನು ಹೋರಾಟ . ಅನಿವಾರ್ಯವಾಗುವುದು ಎಂದು ಎಚ್ಚರಿಕೆ ನೀಡಿದರು.

 

ಬೇಡಿಕೆಗಳು:  ರಾಜ್ಯದಂತ ಆರ್.ನ್.ಐ ಹೊಂದಿರುವ ಸಂಪಾದಕರಿಗೆ ಹಾಗೂ ಅಲ್ಲಿ ಕಾರ್ಯ ನಿರ್ವಯಿಸುವ ವರದಿಗಾರರಿಗೂ ಆಯಾ ಜಿಲ್ಲೆಯಾದ್ಯಂತ ಓಡಾಡಲು ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು, ವಾರ್ತಾ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ 300 ಕ್ಕೂ ಅಧಿಕ ಸಿಬ್ಬಂಧಿಯವರನ್ನು ಸರಕಾರ ಕೂಡಲೇ ನೇಮಕಗೊಳಿಸಬೇಕು, ಸರ್ಕಾರ ಹಾಗೂ ಸಾರ್ವಜನಿಕರ ಮದ್ಯೆ ಸಂಪರ್ಕ ಸೇತುವೆಯಾಗಿ ಪ್ರಾಣದ ಹಂಗನ್ನು ತೊರೆದು ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ರಾಜ್ಯದ ಪತ್ರಕರ್ತರುಗಳೀಗೆ ಸರ್ಕಾರ ಪತ್ರಕರ್ತರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸಬೇಕು, ವಾರ್ತಾ ಇಲಾಖೆಯಾ ಮಾಧ್ಯಮ ಪಟ್ಟಿಯಲ್ಲಿ ಇರುವ 800 ಕ್ಕೂ ಅಧಿಕ ಪತ್ರಿಕೆಗಳನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾಗುವಂತೆ ಸರ್ಕಾರ ಕ್ರಮವಹಿಸಿ, ಅಲ್ಲಿ ಕಾರ್ಯ ನಿರ್ವಹಿಸುವ ವರದಿಗಾರರಿಗೆ ಕಟ್ಟಿನಿಟ್ಟಾಗಿ ಕಾರ್ಮಿಕ ಕಾಯ್ದೆಗಳನ್ನು ಅನುಷ್ಠಾನಗೊಳೀಸಬೇಕು, ರಾಜ್ಯದ ಕಾರ್ಯನಿರತ ಪ್ರತಿಯೊಬ್ಬ ಪತ್ರಕರ್ತರುಗಳಿಗೆ ಜೀವ ವಿಮಾ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು ಏಂಬಿತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಸವರಾಜ ಶಿರಸಂಗಿ, ಎಸ.ಎನ್.‌ ಕುಮಾರ, ಮಂಜುಳಾ,  ಜಗಳೂರು ಲಕ್ಷ್ಮಣರಾವ್‌, ಅಕ್ಬರ್‌ ಬೆಳಗಾವಕರ ಸೇರಿದಂತೆ ಇತರರು ಭಾಗವಹಿಸಿದ್ದರು.

6. ಜಿಲ್ಲಾ ವ್ಯಾಪ್ತಿಯಲ್ಲಿರುವ ಪತ್ರಿಕಾ ಭವನಗಳನ್ನು ಯಾವೊಂದು ಪತ್ರಿಕಾ ಸಂಘಟನೆಗಳಿಗೆ ನೀಡದೆ ಆಯಾ ಜಿಲ್ಲಾಧಿಕಾರಿಗಳ ಸುಪರ್ಧಿಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳ ಮೂಲಕ ನಿರ್ವಹಣೆಗೆ ಆದೇಶಿಸಬೇಕು.

7. ನಾಡಿನ ಪತ್ರಕರ್ತರ ಹಿತಕಾಗಿ ಪತ್ರಕರ್ತರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.

8. ಪತ್ರಕರ್ತರು ಕರ್ತವ್ಯ ನಿರ್ವಹಿಸುವಾಗ ಸಹಜ ಸಾವು ಹಾಗೂ ಅಪಘಾತದಿಂದ ಮೃತ ಪಟ್ಟರೆ ಆ ಪತ್ರಕರ್ತರ ಕುಟಂಬಕ್ಕೆ ಸರ್ಕಾರದಿಂದ 10.ಲಕ್ಷ ರೂಗಳ ಪರಿಹಾರ ಒದಗಿಸಬೇಕು./////