Belagavi News In Kannada | News Belgaum

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡುವಂತೆ ಒತ್ತಾಯ

ಬೆಳಗಾವಿ: ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಮಾಡುವಂತೆ ಒತ್ತಾಯಿಸಿ  ಕರ್ನಾಟಕ ನಿರುದ್ಯೋಗಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಸುವರ್ಣಸೌಧದ ಬಳಿ ಸುವರ್ಣ ಗಾರ್ಡನ್‌ ಟೆಂಟ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ  ಸಂಘದ ಅಧ್ಯಕ್ಷ ಭೀಮಾರೆಡ್ಡಿ ಮಾತನಾಡಿ,  ದೈಹಿಕ ಶಿಕ್ಷಣ ಮಕ್ಕಳಲ್ಲಿ ಮಾನಸಿಕ ಆರೋಗ್ಯ ಜ್ಞಾನ ವೃದ್ಧಿಗೆ ಪೂರಕವಾಗಿದೆ. ಹಾಗೂ ಪ್ರತಿಯೊಂದು ಮಕ್ಕಳಿಗೂ ಶಿಕ್ಷಣ ನೀಡುವ ಕಳಕಳಿಯನ್ನು ರಾಜ್ಯ ಸರ್ಕಾರ ಹೊಂದಿರಬೇಕು. ಹಿಂದಿನ ಸರ್ಕಾರಗಳು ಕಳೆದ 17 ವರ್ಷಗಳಲ್ಲಿ ಒಮ್ಮೆಯೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನೇಮಕಾತಿ ಮಾಡಿರುವುದಿಲ್ಲ. ಈ ಕಾರಣದಿಂದ ಪ್ರಾಥಮಿಕ ಶಾಲೆಗೆ ವಯೋಮಿತಿ ಮಿರುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.

 ಮಕ್ಕಳ ಸಂಖ್ಯೆಗೆ ಅನುಗುಣವಾಗಿ 200 ಮಕ್ಕಳು ಇದ್ದರೆ ಮಾತ್ರ ಒಬ್ಬ ದೈಹಿಕ ಶಿಕ್ಷಕ ಎನ್ನುವ ನಿಯಮವನ್ನು ತೆಗೆದು ಹಾಕಬೇಕು. ಹಾಗೂ ಪ್ರಾಥಮಿಕ ಶಾಲೆಗೆ 60 ಮಕ್ಕಳು ಇರುವ ಕಡೆ ಒಬ್ಬ ಮುಖ್ಯೋಪಾಧ್ಯಾಯರನ್ನು ಹೇಗೆ ನೇಮಕಾತಿ ಮಾಡಿರುತ್ತಾರೆ. ಅದೇ ರೀತಿ ಮುಖ್ಯೋಪಾಧ್ಯಾಯರು ಇರುವ ಕಡೆ ಒಬ್ಬ ದೈಹಿಕ ಶಿಕ್ಷಕನನ್ನು ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು:  ಅತೀ ಶೀಘ್ರುದಲ್ಲಿ ಹಣಕಾಸು ಇಲಾಖೆಯ ಅನುಮೋದನೆ ಪಡೆದು ಪ್ರಾಥಮಿಕ ಮತ್ತು ಪ್ರೌಢ ಹಾಗೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರ ನೇಮಕಾತಿ ಮಾಡಬೇಕು,   ಪ್ರಸ್ತುತ ಖಾಲಿಯಿರುವ ದೈಹಿಕ ಶಿಕ್ಷಕರ ಹುದ್ದೆಗಳ ಪೈಕಿ 200 ದೈಹಿಕ ಶಿಕ್ಷಕರ ಹುದ್ದೆಗಳನ್ನು ಹಣಕಾಸು ಇಲಾಖೆ ಒಪ್ಪಿಗೆ ಪಡೆದಿದ್ದು ಇನ್ನು ಹೆಚ್ಚು ಹುದ್ದೆಗಳನ್ನು ಹೆಚ್ಚಿಸಿ ನೇಮಕಾತಿ ತುರ್ತಾಗಿ ಹೊರಡಿಸಬೇಕು, ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿ ಶಾಲೆಗಳು ಇರುವ ಕಡೆ ಒಬ್ಬ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಬೇಕು, ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರು ಎಂದು ಪರಿಗಣಿಸಬೇಕು,  952 ಹುದ್ದೆಗಳನ್ನು ಸಚಿವ ಸಂಪುಟ ಅನುಮೋದನೆ ನೀಡಿರುವ ಪ್ರಾಥಮಿಕ ದೈಹಿಕ ಶಿಕ್ಷಕರನ್ನು ಹಣಕಾಸು ಒಪ್ಪಿಗೆ ತೆಗೆದುಕೊಂಡು ನೇಮಕಾತಿ ಮಾಡಬೇಕು. ಯೋಗ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವಲ್ಲಿ ಮೊದಲ ಆದ್ಯತೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡಬೇಕು,  ವಸತಿ ಶಾಲೆಗಳಲ್ಲಿ ಪ್ರತಿ ಸಲ ಶಿಕ್ಷಕರ ನೇಮಕಾತಿಯಾದಾಗ ಸಹ ಶಿಕ್ಷಕರಂತೆ ದೈಹಿಕ ಶಿಕ್ಷಕರನ್ನು ಪರಿಗಣಿಸಬೇಕು. ಪುಸ್ತುತ 808 ಹುದ್ದೆ ಬರ್ತಿಗೆ ಅನುಮೋದನೆ ಸಿಕ್ಕಿದ್ದು 708 ಹುದ್ದೆಗಳು ಹೊರಗುತ್ತಿಗೆ ಆಧಾರವಾಗಿ ಹಾಗೂ ಕಾಯಂ ಶಿಕ್ಷಕರು 100 ಹುದ್ದೆಗಳು ಅದರಲ್ಲಿ ದೈಹಿಕ ಶಿಕ್ಷಕರನ್ನು ಪರಿಗಣನಿಗೆ ತೆಗೆದುಕೊಂಡಿರುವುದಿಲ್ಲ ತುರ್ತಾಗಿ ದೈಹಿಕ ಶಿಕ್ಷಕರನ್ನು ಪರಿಗಣನಿಗೆ ತೆಗೆದುಕೊಂಡು ನೇಮಕಾತಿ ಹೊರಡಿಸಬೇಕು,  ಅತಿಥಿ ಶಿಕ್ಷಕರಲ್ಲಿ ದೈಹಿಕ ಶಿಕ್ಷಕರನ್ನು ಪರಿಗಣಿಸಬೇಕು, ಕಾಲ ಕಾಲಕ್ಕೆ ನೇಮಕಾತಿ ಮಾಡಿಕೊಳ್ಳುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಪರಿಗಣಿಸಿ ನೇಮಕಾತಿ ಯನ್ನು ಹೊರಡಿಸಬೇಕು,

ಪ್ರತಿಭಟನೆಯಲ್ಲಿ  ಮಹಾಂತೇಶ ಡಿ.ಎಚ್.‌ ಬಸಯ್ಯೆಸ್.‌ ಎಚ್.‌ ಎಚ್.‌ ಸಿ. ಬಾರ್ಕಿ, ವಿಠ್ಠಲ್‌ ಜಿ,  ಭಾಘ್ಯಶ್ರೀ ಎಸ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು./////