Belagavi News In Kannada | News Belgaum

ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಸಿಡಿದ್ದೆದ್ದ ಖಾದರವಾಡಿ ಗ್ರಾಮಸ್ಥರು

ಬೆಳಗಾವಿ: ಖಾದರವಾಡಿಯ ಗ್ರಾಮ ಸಮಯಕದ ಜಮೀನನ್ನು ಸ್ಥಳೀಯ ಶಾಸಕ ಅಭಯ ಪಾಟೀಲ ಅವರ ಸಹೋದರ ಹಾಗೂ ಬೆಂಬಲಿಗರು ಗುಂಡಾ ವರ್ತನೆ ತೋರಿ ಕಬಳಿಸುವ ಹುನ್ನಾರ ನಡೆಸಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಚೋರ್ ಹೈ. ಚೋರ್ ಹೈ. ಅಭಯ ಪಾಟೀಲ ಚೋರ್ ಹೈ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ಖಾದರವಾಡಿಯ ಗ್ರಾಮದಲ್ಲಿ ಇಲ್ಲಿನ ಗ್ರಾಮ ಸಮಯಕನ ಸುಮಾರು 75 ಎಕರೆ ಜಮೀನನ್ನು ಶಾಸಕ ಅಭಯ ಪಾಟೀಲ ಸಹೋದರ ಶಿಥಲ್ ಪಾಟೀಲ್ ಹಾಗೂ ಸುಷ್ಮಾ ಪಾಟೀಲ ಅವರ ಹೆಸರಿನಲ್ಲಿ 6 ಎಕರೆ ಜಮೀನು ಖರೀದಿ ಮಾಡಿ ಗ್ರಾಮದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ 6 ಎಕರೆ ಜಮೀನು ಕಬಳಿಕೆ ಮಾಡಲು ಶಾಸಕ ಅಭಯ ಪಾಟೀಲ ದಬ್ಬಾಳಿಕೆಯಿಂದ ನಗರಾಭಿವೃದ್ಧಿ ಪ್ರಾಧಿಕಾರದವರು ಜಮೀನು ವಶಪಡಿಸಿಕೊಳ್ಳಲು ಗ್ರಾಮಸ್ಥರಿಗೆ ನೋಟಿಸ್ ನೋಡಿ ಬೇದರಿಕೆ ಹಾಕಿ ಜಮೀನು ವಶಪಡಿಸಿಕೊಂಡಿದ್ದಾರೆ. ರೈತರಿಗೆ 13 ಲಕ್ಷ ಪರಿಹಾರ ಕೊಡುತ್ತಾರೆ. ಆದರೆ ಬುಡಾದಲ್ಲಿ ಕೋಟ್ಯಂತರ ರೂ.ಗೆ ಪರಿಹಾರ ನೀಡಿದ್ದೇವೆ ಎಂದು ದಾಖಲೆ ಇದೆ ಎಂದು ಹರಿಹಾಯ್ದರು.
ಒಂದು ಕೋಟಿ 8 ಲಕ್ಷ ರೂ.ಗೆ ಒಂದು ಎಕರೆ ಜಮೀನಿಗೆ ಪರಿಹಾರ ಕೊಡಲಾಗಿದೆ ಎಂದು ಬುಡಾದಲ್ಲಿ ಶಾಸಕ ಅಭಯ ಪಾಟೀಲ ಒತ್ತಾಯದ ಮೇರೆಗೆ ಬರೆಸಲಾಗಿದೆ. ಇದು ಕಾನೂನು ಬಾಹೀರ. ಈ ಕುರಿತು ಈಗಾಗಲೇ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೂ ತರಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಾಮಾಜಿಕ ಕರ‍್ಯರ‍್ತ ಸುಜೀತ್ ಮುಳಗುಂದ, ರಾಯಪ್ಪ ಹಂಚಿನಾಳ, ಯಲ್ಲಮ್ಮ ದೀವಾಳಿಕರ್, ಜ್ಯೋತಿ ಗಡಾದ ಸೇರಿದಂತೆ ನೂರಾರು ಜನರು ಇದ್ದರು./////