Belagavi News In Kannada | News Belgaum

ಗಾಲಿ ಜನಾರ್ದನ ರೆಡ್ಡಿ ಅವರು ಬೆಳಗಾವಿಯ ರಾಜಹಂಸಗಡದ ಕೋಟೆಗೆ ಭೇಟಿ ನೀಡಿದರು.

ಬೆಳಗಾವಿ ವಿಧಾನಸಭೆ ಅಧಿವೇಶನದ ಬಿಡುವಿನ ವೇಳೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಅವರು ಬೆಳಗಾವಿಯ ರಾಜಹಂಸಗಡದ ಕೋಟೆಗೆ ಭೇಟಿ ನೀಡಿದರು..

ಕೋಟೆಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತದನಂತರ ಶಿವಾಜಿ ಮಹಾರಾಜರ ಪುತ್ತಳಿಗೆ ಹೂವಿನ ಹಾರವನ್ನು ಹಾಕುವ ಮೂಲಕ ನಮಿಸಿದರು. ಹಾಗೂ ಕೋಟೆಯ ಸುತ್ತಮುತ್ತಲಿನ ಆವರಣದಲ್ಲಿ ಕೆಲಕಾಲ ಸಂತೋಷದಿಂದ ಸಮಯ ಕಳೆದರು.

ಈ ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ಧನ ರೆಡ್ಡಿ ಅವರು ಅಂದಿನ ಶಾಸಕರಾಗಿದ್ದ ಸಂಜಯ್ ಪಾಟೀಲ್ ಹಾಗೂ ಸಂಸದರಾದ ಸುರೇಶ್ ಅಂಗಡಿ ಅವರ ಜೊತೆಯಲ್ಲಿ 14 ವರ್ಷಗಳ ಹಿಂದೆ ರಾಜಹಂಸಗಡಕ್ಕೆ ಭೇಟಿ ನೀಡಿ ಆ ಪ್ರದೇಶವನ್ನೆಲ್ಲಾ ವೀಕ್ಷಿಸಿ, ರಾಜಹಂಸಗಡವನ್ನು ಅಭಿವೃದ್ಧಿ ಮಾಡುವ ಕನಸು ಕಂಡು ಸುಮಾರು 11 ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಅದಾದ ಬಳಿಕ 14 ವರ್ಷಗಳ ಬಳಿಕ ರಾಜಹಂಸಗಡಕ್ಕೆ ಭೇಟಿ ನೀಡಿದ್ದಾರೆ.