Belagavi News In Kannada | News Belgaum

ಕಿತ್ತೂರ: ಹೂಲಿಕಟ್ಟಿ ಪ್ರೌಢ ಶಾಲೆಗೆ ಶಿಕ್ಷಣ ಸಚಿವರ ಭೆಟ್ಟಿ

ಕಿತ್ತೂರ ತಾಲೂಕಿನ ಹೂಲಿಕಟ್ಟಿ ಸರಕಾರಿ ಪ್ರೌಢಶಾಲೆಗೆ ಇಂದು ಗಣ ಸರಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಖಾತೆಯ ಸಚಿವರಾದ ಮಾನ್ಯ ಮಧು ಬಂಗಾರಪ್ಪ ನವರು ಶಾಲಾ ಸಂದರ್ಶನ ನೀಡಿದರು. ಶಾಲೆಯ ಎಸ್ ಡಿ ಎಂ ಸಿ ಹಾಗೂ ಶಿಕ್ಷಕರೊಂದಿಗೆ ಶಾಲಾ ಪ್ರಗತಿಯ ಕುರಿತು ಸಮಾಲೋಚಿಸಿದರು  ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ  ಅವಶ್ಯಕ ಮೂಲಭೂತ ಸೌಲಭ್ಯಗಳ ಕುರಿತು  ಪರಿಹರಿಸಲು ಸ್ಥಳದಲ್ಲಿ ಉಪಸ್ಥಿತರಿದ್ದ
 ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಕಿತ್ತೂರ ಶಾಸಕರಾದ ಮಾನ್ಯ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ ನನ್ನ ಮೊದಲು ಅಧ್ಯತೆ ಶಿಕ್ಷಣ ಪ್ರಗತಿ ನನ್ನ ಅನುದಾದಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಅದೇಶ ನೀಡಿರುವುದಾಗಿ ತಿಳಿಸಿ ಹೂಲಿಕಟ್ಟಿ ಶಾಲೆಗೆ ಅವಶ್ಯ ವಿರುವ ಸೌಕಾರ್ಯವನ್ನು ತ್ವರಿತ ಗತಿಯಲ್ಲಿ ಅನುಷ್ಠಾನ ಮಾಡುವುದಾಗಿ ಗ್ರಾಮಸ್ಥರಿಗೆ ಹಾಗೂ ಎಸ್ ಡಿ ಎಂ ಸಿ ಯವರಿಗೆ ಭರವಸೆ ನೀಡಿದರು .
ಶಾಲೆಯ ವಾತಾವರಣ ಮಕ್ಕಳ ಕ್ರಿಯಾ ಶೀಲತೆ  ನನಗೆ ತುಂಬಾ ಖುಸಿಕೊಟ್ಟಿದ್ದು ಅಧಿವೇಶನ  ಸಮಯದಲ್ಲಿ ಮಕ್ಕಳೊಂದಿಗೆ ಸಂವಾದ ಮಾಡಿದಾಗ ನಾನು ಭರವಸೆ ನೀಡಿದಂತೆ ಇಂದು ಹೂಲಿಕಟ್ಟಿ ಶಾಲೆಗೆ ಅತ್ಯಂತ ಸಂತೋಷದಿಂದ ಬಂದಿರುವುದಾಗಿ ತಿಳಿಸಿ ಶಾಲಾ ಮುದ್ದು ಮಕ್ಕಳೊಂದಿಗೆ ಮಧ್ಯಾನ್ಹ ಭೋಜನ ಸವಿದರು . ಇದೆ ಸಂದರ್ಭದಲ್ಲಿ ಶಾಲಾ ಗುರು ಬಳಗ ಹಾಗೂ ಎಸ್ ಡಿ ಎಂ ಸಿ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿದ ಸಚಿವರು   ಮಕ್ಕಳ  ಶೈಕ್ಷಣಿಕ ಚಟುವಟಿಕೆ ಉತ್ತೇಜಿಸಲು ಸರಕಾರ ಸದಾ ಸಿದ್ದವಿರುವುದಾಗಿ ದೆ ಬರುವ ಶೈಕ್ಷಣಿಕ ವರ್ಷದಿಂದಲೇ ಈ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರ ಮಾಡುವುದಾಗಿ ಘೋಷಿಸಿ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಸ್ ಡಿ ಎಂಸಿ ಅಧ್ಯಕ್ಷರಾದ ನಿಂಗಪ್ಪ ಮೊಕಾಶಿ ಬಸಲಿಂಗಪ್ಪ ಶಾಹಾಪೂರ, ರುದ್ರಪ್ಪ ಮಣ್ಣಿಕೇರಿ, ಬಸಪ್ಪಣ್ಣ ಕಲ್ಲೂರ   ಮುಖ್ಯೋಪಾಧ್ಯರಾದ ಜಿ ಎಚ್ ನಾಯ್ಕ  ಡಾ ಶೇಖರ ಹಲಸಗಿ, ನೌಕರ ಸಂಘದ ಅಧ್ಯಕ್ಷರಾದ ಎಸ್ ಎಸ್ ಹುಲಮನಿ ಗ್ರಾಮಪಂಚಯತಿಯ ಸದಸ್ಯರು ಮಾನ್ಯ ಸಚಿವರನ್ನು  ಹಾಗೂ ಶಾಸಕರನ್ನು  ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಿತ್ತೂರ ತಹಶೀಲ್ದಾರ ರವೀಂದ್ರ ನೇಸರಗಿ ಸಿಟಿಇ ಪ್ರಚಾರ್ಯ ಎಂ ಎಂ ಸಿಂಧೂರ, ಬಿ ಈ ಓ ಜುಟ್ಟಣವರ್ ಡಿಡಿ ಪಿಐ ಮೋಹನ ಹಂಚಾಟಿ, ಗಾಯತ್ರಿ ಅಜ್ಜನವರ ಅಧಿಕಾರಿ ವರ್ಗದವರು ಗ್ರಾಮದ ಶಿಕ್ಷಣ ಪ್ರೇಮಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಶಾಲಾ ಗುರು ಬಳಗದ ಶ್ರೀ ಮತಿ ಎ ಎಸ್ ಅಡಕಿ, ಕಾಂಚನ ಕದ್ದು,
ಎಲ್ ಕೆ ಕಣಬರಗಿ  ಬಿ ಎಸ್ ಪಾಟೀಲ, ಎಸ್ ಎಸ್ ಹಿರೇಮಠ, ರಾಧಾ ಬಾಗಲಕೋಟೆ, ಉಪಸ್ಥಿತರಿದ್ದರು, ಶಾಲಾ ವಿದ್ಯಾರ್ಥಿಗಳು ಡೊಳ್ಳು ಕುಣಿತದ ಮೂಲಕ ಸಚಿವರನ್ನು ಶಾಸಕ ರನ್ನು ಶಾಲೆಗೆ ಬರಮಾಡಿಕೊಂಡು ಮಕ್ಕಳು ಆರತಿ ಬೆಳಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಜಿ ಎಚ್ ನಾಯಕ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಡಾ ಶೇಖರ ಹಲಸಗಿ ನುಡಿದರು ಕೊನೆಯಲ್ಲಿ ಎಸ್ ಎಸ್ ಹಿರೇಮಠ ವಂದಿಸಿದರು. ಯಶಸ್ವಿ ಯಾಗಿ ಕಾರ್ಯಕ್ರಮ ಜರುಗಿತು ಮಕ್ಕಳ ಉಲ್ಲಾಸ ಮುಗಿಲು ಮುಟ್ಟಿತ್ತು ಸಚಿವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಚಾಕಲೇಟ್ ವಿತರಿಸಿ ಸಂತಸ ಪಟ್ಟರು