Belagavi News In Kannada | News Belgaum

ಸಮಾಜಕಾರಣದಲ್ಲಿ ರಾಜಕೀಯ ಸಲ್ಲ- ಬಾಲಾಚಾರ್ಯ ಸಿದ್ದಸೇನ ಶ್ರೀ

 

ಬೆಳಗಾವಿ: 14: ಧರ್ಮ ಸೇವೆ ಮತ್ತು ಸಮಾಜ ಸೇವೆ ಮಾಡುವ ಸಂದರ್ಭದಲ್ಲಿ ಯಾರೂ ಯಾವುದೇ ರೀತಿಯ ರಾಜಕೀಯ ಮಾಡದೆ ನಿಸ್ವಾರ್ಥ ಭಾವನೆಯಿಂದ ಸಮಾಜ ಸೇವೆ ಮಾಡಬೇಕೆಂದು ಬಾಲಾಚಾರ್ಯ ಶ್ರೀ. 108 ಸಿದ್ದಸೇನ ಮುನಿ ಮಹಾರಾಜರು ಹೇಳಿದರು.
ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಶ್ರೀ. 108 ಸಿದ್ದಸೇನ ಮುನಿ ಮಹಾರಾಜ ಆಧ್ಯಾತ್ಮಿಕ ಅನುಸಂಧಾನ ಫೌಂಡೇಶನ ವತಿಯಿಂದ ಮೂರು ದಿನಗಳ ವರೆಗೆ ಹಮ್ಮಿಕೊಳ್ಳಲಾದ ಶ್ರೀ 1008 ಭಗವಾನ ಮಹಾವೀರ ತೀರ್ಥಂಕರರ 2550 ನಿರ್ವಾಣ ಮಹೋತ್ಸವ, ಆಚಾರ್ಯರತ್ನ 108 ಬಾಹುಬಲಿ ಮುನಿ ಮಹಾರಾಜರ 92 ನೇ ಜನ್ಮ ದಿನಾಚರಣೆ ಹಾಗೂ ಶ್ರೀ ಸಿದ್ದಸೇನ ಮುನಿಗಳ 25 ನೇ ದೀಕ್ಷಾ ಮಹೋತ್ಸವ ಕಾರ್ಯಕ್ರಮದ ಎರಡನೇಯ ದಿನವಾದ ಬುಧವಾರದಂದು ರಾಜ್ಯ ಜೈನ ಜಾಗೃತಿ ಸಂಘದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ಸಮಾಜಕಾರಣ ಬೇರೆ, ರಾಜಕಾರಣ ಬೇರೆಯಾಗಿದೆ. ಸಮಾಜಕಾರಣದಲ್ಲಿ ರಾಜಕೀಯ ತಂದರೆ ಸಂಘ ಸಂಸ್ಥೆಗಳು ಬೆಳೆಯಲು ಸಾಧ್ಯವಿಲ್ಲ .ಹಾಗಾಗಿ ಯಾವುದೇ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನು ಮಾಡುವಾಗ ರಾಜಕೀಯ ಬೆರೆಸಬಾರದು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತರು ಹಾಗೂ ಸಂಘದ ಪದಾಧಿಕಾರಿಯಾದ ಕುಂತಿನಾಥ ಕಲಮನಿ ಅವರು,ಸಂಘವು ಮಕ್ಕಳಲ್ಲಿ ಧಾರ್ಮಿಕ ಅಧ್ಯಯನ ,ಪಾಠಶಾಲೆ, ಸಂಸ್ಕಾರ ಶಿಬಿರಗಳು, ಧಾರ್ಮಿಕ ಚರ್ಚೆಗಳು, ತೀರ್ಥಕ್ಷೇತ್ರ ಮತ್ತು ಬಸದಿಗಳ ರಕ್ಷಣೆ, ಕಾರ್ಯ ಮಾಡಲಿದ್ದು, ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ಈಗಾಗಲೇ 25 ಸಾವಿರ ಜನರು ಸಂಘದ ಸದಸ್ಯರಾಗಿದ್ದು, ಕರ್ನಾಟಕದ ಅತೀ ದೊಡ್ಡ ಜೈನ ಸಂಘ ಎಂದು ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಬಯಲು ಸಿಮೆ ನಿಗಮದ ಮಾಜಿ ಅಧ್ಯಕ್ಷರು, ಹಾಗೂ ಜೈನ ಸಮಾಜದ ಹಿರಿಯರಾದ ತವನಪ್ಪ ಅಷ್ಟಗಿ,ಅತುಲ ಜೈನ, ಶ್ರೇಯಾಂಶ ಜೈನ, ಮನೋಜ ಜೈನ ಅಶ್ವಿನ ಜೈನ ,ಡಿ.ಡಿ.ಪಾಟೀಲ,ಅಜಿತ ಮುರಗುಂಡೆ, ಬಾಹುಬಲಿ ಪರಮಗೊಂಡಾ, ಸಂತೋಷ ಸನ್ನಮಣ್ಣವರ, ವಿಕಾಸ ಜೈನ, ಪದ್ಮರಾಜ ಜೈನ ಇವರು ರಾಜ್ಯ ಜೈನ ಜಾಗೃತಿ ಸಂಘವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ನೂತನ ವರ್ಷದ ಕ್ಯಾಲೇಂಡರ ಸಹ ಬಿಡುಗಡೆ ಮಾಡಲಾಯಿತು.
ಸಮಾರಂಭದಲ್ಲಿ ಶ್ರೀ. 108 ಪುಣ್ಯಸಾಗರಜೀ ಮಹಾರಾಜ,, 108 ಶ್ರೀ.ಪುರಾಣಸಾಗರಜೀ ಮಹಾರಾಜ, ಶ್ರೀ.108 ಪ್ರಸಂಗ ಸಾಗರಜೀ ಮಹಾರಾಜ ಇವರು ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಸಂಘದ ಅಧ್ಯಕ್ಷ ಅಮೃತ ಗಣಿ, ಉಪಾಧ್ಯಕ್ಷ ಮಹಾವೀರ ಪಾಟೀಲ, ಕಾರ್ಯದರ್ಶಿ ಎಸ.ಡಿ.ಸಗರಿ, ಸಹ ಕಾರ್ಯದರ್ಶಿ ವಿಜಯಕುಮಾರ ಬೆಳಗಾವಿ, ಖಜಾಂಚಿ ಸಿದ್ದಗೌಡ ಬಿರಾದಾರಪಾಟೀಲ, ಸಹ ಖಜಾಂಚಿ ಚಂದ್ರಕುಮಾರ ಟಿ.ಡಿ. ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಕುಂತಿನಾಥ ಕಲಮನಿ, ಪದ್ಮರಾಜ ಕೆ.ಎಚ್. ಮಲ್ಲಪ್ಪ ಬಾಬಣ್ಣವರ, ಕುಂತಿನಾಥ ಸಸಾಲಟ್ಟಿ, ದೇವೆಂದ್ರ ಪಾಟೀಲ, ರಾಜು ಅಲಾಸೆ, ಸನ್ನತಕುಮಾರ ಗಣೆ, ಮಾಲಾಶ್ರೀ ಜೈನ, ಉಮಾ ಕೋಟಿ, ರಾಜಶ್ರೀ, ಚೌಗುಲೆ, ತ್ರೀಶಲಾ ತೆರದಾಳೆ, ನಮಿತಾ ಪಾಟೀಲ, ಭಾರತಿ ಹಣ್ಣಿಕೇರಿ, ಶೈಲಾ ಕುಂದೂರ ಸವಿತಾ ಕಡೆಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು,////

ಪಾದುಕಾ ಪ್ರತಿಷ್ಠಾಪನಾ ದಿನ ಆಚರಣೆ

ಬೆಳಗಾವಿ.ಡಿ.14: ಶ್ರೀ,ಸಮರ್ಥ ಶ್ರೀಧರ ತತ್ವಜ್ಞಾನ ಮಂಡಳ ಟ್ರಸ್ಟ ಶ್ರೀ ಶ್ರೀಧರಸ್ವಾಮಿ ಮಂದಿರ ಬಸವಣ ಗಲ್ಲಿ ಬೆಳಗಾವಿ ಇಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀಗಳ ಪಾದುಕಾ ಪ್ರತಿಷ್ಠಾಪನಾ ದಿನಾಚರಣೆ ಅಂಗವಾಗಿ ಶುಕ್ರವಾರ ದಿನಾಂಕ 15 ರಿಂದ ಡಿಸೆಂಬರ 19 ನಡೆಲಿದೆ. ಅದರಂತೆ ಡಿ. 20 ರಿಂದ ಡಿ.26 ರವರೆಗೆ ಶ್ರೀ.ದತ್ತ ಜಯಂತಿ ಹಾಗೂ ಶ್ರೀಧರ ಸ್ವಾಮಿಗಳ 115 ನೇ ಜಯಂತಿ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ. ಈ ಎರಡು ಕಾರ್ಯಕ್ರಮಗಳ ಅಂಗವಾಗಿ ಡಿ. 15 ರಿಂದ ಡಿ26 ರವರೆಗೆ ಸಾಯಂಕಾಲ 4 ಗಂಟೆಯಿಂದ 6;30 ರವರೆಗೆ ಹ.ಭ.ಪ.ಶ್ರೀಕೌಸ್ತುಬಬುವಾ ರಾಮದಾಸಿ,ಮಠಾಧಿಪತಿ ವೇಣಾಬಾಯಿ ಮಠ ಮಿರಜ ಇವರಿಂದ ಸಂಗೀತ ಗುರುಚರಿತ್ರೆ ಕಾರ್ಯಕ್ರಮ ಮತ್ತು ಕೀರ್ತನಾ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳು ಬಸವಣಗಲ್ಲಿಯ ಶ್ರೀಧರ ಸ್ವಾಮಿ ಮಂದಿರದಲ್ಲಿ ನಡೆಯಲಿದ್ದು, ಭಕ್ತಾದಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಥೀರ್ಥ ಪ್ರಸಾದ ಸ್ವೀಕರಿಸಿ ಶ್ರೀ. ಸದ್ಗುರುಗಳ ಕೃಪಾರ್ಶಿವಾದಕ್ಕೆ ಪಾತ್ರರಾಗಬೇಕೆಂದು ಶ್ರೀ. ಸಮರ್ಥ ಶ್ರೀಧರ ತತ್ವಜ್ಞಾನ ಮಂಡಳ ವತಿಯಿಂದ ವಿನಂತಿಸಲಾಗಿದೆ.///