Belagavi News In Kannada | News Belgaum

ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಸಿಡಿದೆದ್ದ ಖಾದರವಾಡಿ ಗ್ರಾಮಸ್ಥರು

ಚೋರ್ ಹೈ. ಚೋರ್ ಹೈ. ಅಭಯ ಪಾಟೀಲ ಚೋರ್ ಹೈ ಎಂದ ಜನ -ಜಮೀನು ಮರಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಬೆಳಗಾವಿ: ಖಾದರವಾಡಿಯ ಗ್ರಾಮ ಸಮಯಕದ ಜಮೀನನ್ನು ಸ್ಥಳೀಯ ಶಾಸಕ ಅಭಯ ಪಾಟೀಲ ಅವರ ಸಹೋದರ ಹಾಗೂ ಬೆಂಬಲಿಗರು ಗುಂಡಾ ವರ್ತನೆ ತೋರಿ ಕಬಳಿಸುವ ಹುನ್ನಾರ ನಡೆಸಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಖಾದರವಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯ ಖಾದರವಾಡಿಯ ಗ್ರಾಮದಲ್ಲಿ ಇಲ್ಲಿನ ಗ್ರಾಮ ಸಮಯಕನ ಸುಮಾರು 75 ಎಕರೆ ಜಮೀನನ್ನು ಶಾಸಕ ಅಭಯ ಪಾಟೀಲ ಸಹೋದರ ಶಿಥಲ್ ಪಾಟೀಲ್ ಹಾಗೂ ಸುಷ್ಮಾ ಪಾಟೀಲ ಅವರ ಹೆಸರಿನಲ್ಲಿ 6 ಎಕರೆ ಜಮೀನು ಖರೀದಿ ಮಾಡಿ ಗ್ರಾಮದ ಜನರಿಗೆ ಅನ್ಯಾಯ ಮಾಡಿದ್ದಾರೆ ಎಂದು ಖಾದರವಾಡಿಯ ಗ್ರಾಮಸ್ಥರು ಆರೋಪಿಸಿದರು.

 

 

ನಂತರ ಸಾಮಾಜೀಕ ಕಾರ್ಯಕರ್ತ ಸುಜೀತ್ ಮುಳಗುಂದ ಮಾತನಾಡಿ, ಬೆಳಗಾವಿಯ ಖಾದರವಾಡಿಯ ಗ್ರಾಮದಲ್ಲಿ 75 ಎಕರೆ ಜಮೀನನ್ನು ಶಾಸಕ ಅಭಯ ಪಾಟೀಲ ಸಹೋದರ ಶಿಥಲ್ ಪಾಟೀಲ್ ಖರೀದಿ ಮಾಡಿದ್ದಾರೆ ಈ 6 ಎಕರೆ ಜಮೀನು ಕಬಳಿಕೆ ಮಾಡಲು ಶಾಸಕ ಅಭಯ ಪಾಟೀಲ ದಬ್ಬಾಳಿಕೆಯಿಂದ ನಗರಾಭಿವೃದ್ಧಿ ಪ್ರಾಧಿಕಾರದವರು ಜಮೀನು ವಶಪಡಿಸಿಕೊಳ್ಳಲು ಗ್ರಾಮಸ್ಥರಿಗೆ ನೋಟಿಸ್ ನೋಡಿ ಬೇದರಿಕೆ ಹಾಕಿ ಜಮೀನು ವಶಪಡಿಸಿಕೊಂಡಿದ್ದಾರೆ. ರೈತರಿಗೆ 13 ಲಕ್ಷ ಪರಿಹಾರ ಕೊಡುತ್ತಾರೆ. ಆದರೆ ಬುಡಾದಲ್ಲಿ ಕೋಟ್ಯಂತರ ರೂ.ಗೆ ಪರಿಹಾರ ನೀಡಿದ್ದೇವೆ ಎಂದು ದಾಖಲೆ ಇದೆ ಎಂದು ಹರಿಹಾಯ್ದರು.
ಒಂದು ಕೋಟಿ 8 ಲಕ್ಷ ರೂ.ಗೆ ಒಂದು ಎಕರೆ ಜಮೀನಿಗೆ ಪರಿಹಾರ ಕೊಡಲಾಗಿದೆ ಎಂದು ಬುಡಾದಲ್ಲಿ ಶಾಸಕ ಅಭಯ ಪಾಟೀಲ ಒತ್ತಾಯದ ಮೇರೆಗೆ ಬರೆಸಲಾಗಿದೆ. ಇದು ಕಾನೂನು ಬಾಹೀರ. ಈ ಕುರಿತು ಈಗಾಗಲೇ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಗಮನಕ್ಕೂ ತರಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇವೆ ಎಂದರು .


ಶಾಸಕ ಅಭಯ ಪಾಟೀಲ ನಾನ ಗೌಡ ಅದೇನಿ ಎಂದು ಜನರ ಜಮೀನನ್ನು ಕಬಳಿಸಿದ್ದಾರೆ ಗೌಡ ಇದ್ದವನು ಜನರ ಪರವಾಗಿ ಕೆಲಸ ಮಾಡುವುದು ಬಿಟ್ಟು ಪೊಲೀಸರ ಅಧಿಕಾರ ದುರುಪಯೋಗ ಪಡೆಸಿಕೊಂಡು ಜನರ ಜಮೀನನ್ನು ಕಬಳಿಸುತ್ತಾ ಬಂದಿದ್ದಾರೆ ಕೂಡಲೇ ಖಾದರವಾಡಿಯ ಗ್ರಾಮದ ಜನರ ಜಮೀನು ಅವರಿಗೆ ಮರಳಿಸುವಂತೆ ಒತ್ತಾಯಿಸಿದರು .
ಇನ್ನೋರ್ವ ಗ್ರಾಮದ ಮಹಿಳೆ ಮಾತನಾಡಿ, ನಮ್ಮ ಗ್ರಮದ ಸಮಯಕದ ಜಮೀನನ್ನುಶಾಸಕ ಅಭಯ ಪಾಟೀಲ ಅವರ ಸಹೋದರ ಅವರು ಅಕ್ರಮವಾಗಿ ಕಬಳಿಸುವ ಯತ್ನ ಮಾಡುತ್ತಿದ್ದಾರೆ ಕೂಡಲೇ ನಮಗೆ ನ್ಯಾಯ ಸಿಗಬೇಕು ನಮ್ಮ ಆಸ್ತಿ ನಮಗೆ ಸಿಗಬೇಕೆಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಮಕಾಂತ ಕೊಂಡುಸ್ಕರ್ , ರಾಯಪ್ಪ ಹಂಚಿನಾಳ, ಯಲ್ಲಮ್ಮ ದೀವಾಳಿಕರ್, ಜ್ಯೋತಿ ಗಡಾದ ಸೇರಿದಂತೆ ಖಾದರವಾಡಿ ಗ್ರಾಮದ ನೂರಾರು ಜನರು ಭಾಗವಹಿಸಿದ್ದರು.