Belagavi News In Kannada | News Belgaum

ವಿವಿಧ ಬೇಡಿಕೆ ಈಡೇರಿಕೆ ಸಾರಿಗೆ ನೌಕರರ ಪ್ರತಿಭಟನೆ

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘದ ವತಿಯಿಂದ  ಸುವರ್ಣಸೌಧದ ಬಳಿ ಇರುವ ಸುವರ್ಣ ಗಾರ್ಡನ್‌ ಟೆಂಟೆನಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು..

 

ಪ್ರತಿಭಟನೆಯಲ್ಲಿ ನಿರತ ನೌಕರರು ಮಾತನಾಡಿ,  2021ರಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ಸಂದರ್ಭದಲ್ಲಿ ಹಿಂದಿನ ಸರ್ಕಾರವು ಸಾವಿರಾರೂ ನೌಕರರನ್ನು ವಜಾ, ವರ್ಗಾವಣೆ ಮತ್ತು ನೌಕರರ ಅವರ ಕುಟುಂಬಸ್ಥರ ಮೇಲೆ ಪೊಲೀಸ್‌ ಪ್ರಕರಣಗಳನ್ನು ದಾಖಲಿಸುವ ಮೂಲಕ ಹಲವಾರೂ ರೀತಿಐ ಶಿಕ್ಷಗಳನ್ನು ನೀಡಲಾಗಿತ್ತು. ಅದೇ ಸರ್ಕಾರ ಹಂತ ಹಂತವಾಗಿ ಷರತ್ತುಗಳನ್ನು ವಿಧಸಿ ಮುಷ್ಕರದಿಂದ ಆಗಿದ್ದ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸುತ್ತಿದೆ..

ಆದರೆ ಚುನವಾಣೆ ನಡೆದು ಹೊಸ ಸರ್ಕಾರ ಬಂದು 6 ತಿಂಗಳೂ ಕಳೆದರೂ ಕೂಡಾ ಸಾರಿಗೆ ನೌಕರರ ಪ್ರಮುಖ ಸಮಸ್ಯೆಗಳು ಹಾಗೇ ಉಳಿದಿವೆ. ಆದಷ್ಟು ಬೇಗನೆ ಸಾರಿಗೆ ನೌಕರರ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು..

 

ಬೇಡಿಕೆಗಳು: 2021ರ ಮುಷ್ಟಕರ ಸಂದರ್ಭದಲ್ಲಿ ವಜಾಗೊಂಡ ಎಫ ಐಆರ್‌ ಪ್ರಕರಣಗಳಿಂದ ಬಾಕಿ ಇರುವ ನೌಕರರನ್ನು ಯಾವುದೇ ಷರತ್ತು ವಿಧಿಸದೆ ಪುನರ್‌ ನೇಮಕ ಮಾಡಿಕೊಳ್ಳಬೇಕು, ನೌಕರರ ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆಯಬೇಕು,.

ಸಾರಿಗೆ ನೌಕರರಿಗೆ ಬರಬೇಕಾದ 15% ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು, ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ಮತ್ತು ಅವರ ಕಟುಂಬಸ್ಥರಿಗೆ ನಗದುರಹಿತ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ನೀಡುವುದು ಎಂಬಿತ್ಯಾದಿ ಬೇಡಿಕಗಳನ್ನು ಮುಂದಿರಿಸಿದ್ದಾರೆ..

 

ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸಾರಿಗೆ ನೌಕರರು ಭಾಗವಹಿದ್ದರು..