Belagavi News In Kannada | News Belgaum

ಸಂಕೇಶ್ವರ ಗೋದಾಮುಗಳಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ದಿಢೀ‌ರ್ ಭೇಟಿ

ಬೆಳಗಾವಿ: ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನ ಮಾಪನ ಶಾಸ್ತ್ರ ಇಲಾಖೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಹೇಳಿದರು.

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಬೆಳಗಾವಿ ಜಿಲ್ಲೆಯ ಸಂಕೇಶ್ವರನಲ್ಲಿರುವ ಗೋದಾಮಿಗೆ ಸಚಿವರು ದಿಢೀರ್ ಭೇಟಿ ನೀಡಿ ಅಕ್ಕಿ ಹಾಗೂ ಗೋಧಿಯನ್ನು ಪರಿಶೀಲಿಸಿ ಹಾಗೂ ಅಕ್ಕಿ ಚೀಲವನ್ನು ತೂಕದ ಯಂತ್ರದ ಮೇಲೆ ಇಟ್ಟು ತೂಕವನ್ನು ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಸಂಕೇಶ್ವರನಲ್ಲಿರುವ ಎರಡು ಗೋದಾಮಿನ ಸ್ವಚ್ಛತೆ ಮತ್ತು ದಾಸ್ತಾನು ಅಚ್ಚುಕಟ್ಟಾಗಿದೆ. ಗೋಧಿ ಹಿಟ್ಟು ಸೇರಿದಂತೆ ಎಫ್ ಸಿ ಐ ನಿಂದ ಬಂದಿರುವ ಅಕ್ಕಿಯ ಪ್ರಮಾಣದ ಸಂಪೂರ್ಣ ಮಾಹಿತಿ ಇದೆ ಎಂದರಲ್ಲದೆ, ಹೊಸ ಪಡಿತರ ಚೀಟಿ ಪಡೆಯಲು ಲೋಪದೋಷ ಇರುವ ಕೆಲ ವರದಿ ಮಾಹಿತಿಯನ್ನು ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಪ್ರಕಾಶ್ ರವರು ನೀಡಿದ್ದಾರೆ ಅದನ್ನು ಲಿಖಿತ ರೂಪದಲ್ಲಿ ಸ್ವೀಕರಿಸಿ ಕ್ರಮ ಜರುಗಿಸುತ್ತೇವೆ. ಯಾವುದೇ ಕಾರಣಕ್ಕೂ ಸಾರ್ವಜನಿಕರಲ್ಲಿ, ಗ್ರಾಹಕರಲ್ಲಿ ಒತ್ತಾಯ ಪೂರ್ವಕವಾಗಿ ಇನ್ಸ್‌ಪೆಕ್ಟರ್, ಶಿರಸ್ತೇದಾರ್ ಸೇರಿದಂತೆ ಆಹಾರ ಗ್ರಾಹಕ ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಣ ಪಡೆಯುವುದು ಕಂಡಲ್ಲಿ ಶಿಸ್ತಿನ ಕ್ರಮ ಜರುಗಿಸಿ ಅಮಾನತು ಮಾಡಲಾಗುವುದು ಎಂದರು.

ಸಾರ್ವಜನಿಕರಿಗೆ, ಗ್ರಾಹಕರಿಗೆ ಉಚಿತವಾಗಿ ನೀಡುವ ಪಡಿತರವನ್ನು ಸಮರ್ಪಕವಾಗಿ ನೀಡಬೇಕು ಅಧಿಕಾರಿ, ಸಿಬ್ಬಂದಿಗಳಿಂದ ಲೋಪದೋಷ ಉಂಟಾದಲ್ಲಿ ಗೋದಾಮಿನಲ್ಲಿ ತೊಂದರೆ ಇದ್ದರೆ ತಾಲೂಕು ಸೊಸೈಟಿಯವರಿಗೆ ತೊಂದರೆ ಇದ್ದರೆ ಪಿಡಿಎಸ್ ಮಾಲೀಕರಿಗೆ ತೊಂದರೆ ಇದ್ದಲ್ಲಿ ಆಯಾ ಭಾಗದ ಸಾರ್ವಜನಿಕರು ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಬಂದರೆ ಕ್ರಮ ಜರುಗಿಸಿ, ಪರಿಹಾರ ಸೂಚಿಸಲಾಗುವುದು ಎಂದರು. ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು ಶಹಪೂರದಲ್ಲಿ ಆಗಿರುವ ಘಟನೆಗೆ ಈಗಾಗಲೇ ಶಿಸ್ತಿನ ಕ್ರಮ ತೆಗೆದುಕೊಂಡು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡಲಾಗುತ್ತಿದೆ ಸಾರ್ವಜನಿಕರಿಗೆ ಯಾವುದೇ ಕುಂದುಕೊರತೆಯಾಗದಂತೆ ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಅವರಿಗೆ ಸರ್ಕಾರಿ ಸೇವೆಗಳು ಸಮರ್ಪಕವಾಗಿ ತಲುಪಬೇಕೆನ್ನುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಜುಲೈ 10 ನೇ ತಾರೀಖಿನಿಂದ ಡಿಬಿಟಿ (ನೇರ ನಗದು ವರ್ಗಾವಣೆ) ಪ್ರಾರಂಭಿಸಿದ್ದೇವೆ. ಬೆಳಗಾವಿ ವಿಭಾಗದಲ್ಲಿ ಮೊದಲನೆಯ ತಿಂಗಳು 46 ಕೋಟಿ ರೂ ಎರಡನೇ ತಿಂಗಳು 50 ಕೋಟಿ 88 ಲಕ್ಷ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ 53 ಕೋಟಿ 73 ಲಕ್ಷ, ಅಕ್ಟೋಬರ್ ತಿಂಗಳಿನಲ್ಲಿ 55 ಕೋಟಿ 80 ಲಕ್ಷ, ನವೆಂಬ‌ರ್ ತಿಂಗಳ ಮಾಹಿತಿ ಪ್ರಗತಿಯಲ್ಲಿದೆ ಅರ್ಹತಾ ಪಡಿತರ ಚೀಟಿಗೆ ನವೆಂಬರ್ ತಿಂಗಳಿನಲ್ಲಿ 10 ಲಕ್ಷ 6 ಸಾವಿರ 895 ಜುಲೈ ತಿಂಗಳಿನಲ್ಲಿ 8 ಲಕ್ಷ 79 ಸಾವಿರದ 208 ಆಗಸ್ಟ್, ಸೆಪ್ಟೆಂಬರ್ ಅಕ್ಟೋಬರ್ ನವಂಬರ್ ನಲ್ಲಿ ಅಧಿಕಾರಿಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸಿ 8 ಲಕ್ಷ ಇದ್ದ ಮೊತ್ತವನ್ನು ಮನೆಬಾಗಿಲಿಗೆ ಹೋಗಿ 10 ಲಕ್ಷ ಅಂದರೆ 1ಲಕ್ಷದ 74 ಸಾವಿರ ಜನರಿಗೆ ಬ್ಯಾಂಕ್ ಮಾಹಿತಿ ನವೀಕರಿಸಿ ಪಡಿತರ ಚೀಟಿ ನವೀಕರಿಸಿ 5 ಕೆಜಿ ಅಕ್ಕಿ ಮತ್ತು 170 ರಂತೆ ಹಣವನ್ನು ನೀಡಲಾಗಿದೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿಯ ಅಭಾವ ಇರುವುದರಿಂದ ಹಣವನ್ನು ನೀಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಆದಷ್ಟು ಬೇಗ 10 ಕೆಜಿ ಅಕ್ಕಿಯನ್ನು ನೀಡಲಾಗುವುದು ಎಂದರು. ಸಂಕೇಶ್ವರದಲ್ಲಿ ಗೋಡೌನ್ ಗಳು ಕ್ರಮಬದ್ಧವಾಗಿದೆ ಮುಂದೆ ಇದೇ ರೀತಿ ನಡೆಸಿಕೊಳ್ಳಲು ಸೂಚನೆ ನೀಡಿದರು.

ಅಂತ್ಯೋದಯ 68356, ಫಲಾನುಭವಿಗಳು 2,68000, ಬಿಪಿಎಲ್ ಕಾರ್ಡುಗಳು 1076000, ಫಲಾನುಭವಿಗಳು 3498606. ಉಳಿತ 20000 ಕಾರ್ಡುಗಳ ವಿತರಣೆಯನ್ನು 15 ದಿನಗಳೊಳಗಾಗಿ ಪರಿಶೀಲನೆ ಮಾಡಿ ವಿತರಿಸುವ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನ ಮಾಪನ ಶಾಸ್ತ್ರ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ಡಾ ನಟರಾಜ್, ಜಂಟಿ ನಿರ್ದೇಶಕ ಶ್ರೀಶೈಲ ಕಂಕನವಾಡಿ, ವಿಭಾಗ ನಿಯಂತ್ರಕ ಮಾಳಿ, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ರುದ್ರೇಶ್ ಬಿಸಾಗುಪ್ಪಿ, ಉಪ ನಿರ್ದೇಶಕಿ ಸುಶೀಲಮ್ಮ ಎಪಿಎಂಸಿ ಅಧ್ಯಕ್ಷ ಪ್ರಶಾಂತ ಪಾಟೀಲ, ಸಾಗಾಣಿಕೆ ಗುತ್ತಿಗೆದಾರ ಶಿವಾನಂದ ಮುಡಸಿ, ಆಹಾರ ನಿಗಮದ ಅಧಿಕಾರಿ ಸೋಮೇಶ್ ಮಗದುಮ್ಮ, ಶಿರಸ್ತೇದಾರ್ ಉಸ್ತಾದ, ಗೋದಾಮು ವ್ಯವಸ್ಥಾಪಕ ಲಕ್ಷ್ಮಿ ಮೆದಾರ್ ಹಾಗೂ ಆಹಾರ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.//////