Belagavi News In Kannada | News Belgaum

ದಲಿತ ಮಹಿಳೆಗೆ ವಂಚನೆ ಮಾಡಿದವರ ಮೇಲೆ ಕ್ರಮಕ್ಕೆ ಆಗ್ರಹ

ಬೆಳಗಾವಿ: ದಲಿತ ಮಹಿಳೆಗೆ ವಂಚನೆ ಮಾಡಿದ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಇಲ್ಲಿನ ಸುವರ್ಣ ಗಾರ್ಡನ್ ಬಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ದಲಿತ ಮಹಿಳೆಗೆ ಸೇರಿದ್ದ ಮಾಲ್ಕಿ ಜಮೀನ 5 ಗುಂಟೆ 21 ಗುಂಟೆಯನ್ನು 85 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಆದರೆ ಈ ಭೂಮಿಯ ಜಾಗ ಕೋಟ್ಯಂತರ ಜಮೀನು ಹೊಂದುತ್ತದೆ ವಂಚನೆ ಮಾಡಿದ ದಲಿತ ಮಹಿಳೆಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಂಕಣವಾಡಿ ಪಟ್ಟಣ ಪಂಚಾಯಿತಿ ಸದಸ್ಯ ನಟರಾಜ ಮಾವರಕರ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಚಿಂಚಲಿ ಗ್ರಾಮದ ದಲಿತ ಮಹಿಳೆ ಶೋಭಾ. ಸಂಜಯ. ಮಾನೆ ಇವರಿಗೆ ಸೇರಿದ ಜಮೀನ 5 ಎಕರೆ 21 ಗುಂಟೆ ಜಮೀನನ್ನು ತನ್ನ ಮನೆತನದ ಅಡಚಣೆಯ ಸಲುವಾಗಿ ಚಿಂಚಲಿ ಗ್ರಾಮದ ರಾಜು ಬನಗೆ ಇವನಿಗೆ ರೂ. 85,00,000/- (ಎಂಬತ್ತೈದು ಲಕ್ಷ) ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ದಲಿತ ಮಹಿಳೆ ಅಮಾಯಕ ವೃದ್ಧ ಮಹಿಳೆಯಾಗಿದ್ದು ಇವಳು ಮುಗ್ಧ ಇರುವುದನ್ನು ಗಮನಿಸಿ ಇವಳಿಗೆ ವಂಚನೆ ಮಾಡುವ ಉದ್ದೇಶದಿಂದ ಮಹಿಳೆಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೂ ಕೂಡಾ ಸೋಮೇಶ್ವರ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿ ಬಿರಡಿಯಲ್ಲಿ ಮಹಿಳೆಯ ಹೆಸರಿನಲ್ಲಿ ಖಾತೆ ತೆಗೆದು ಒಟ್ಟು 85,00,000/- (ಎಂಬತ್ತೈದು ಲಕ್ಷ) ರೂ. ಇಟ್ಟು ಅದರಲ್ಲಿ ಮಹಿಳೆಗೆ 1 ಲಕ್ಷ ಸೋಸೈಟಿಯಿಂದ ಕೋಡಿಸಿ ನಾಲ್ಕು ಲಕ್ಷ ರೂಪಾಯಿಗಳನ್ನು ಬ್ಯಾಂಕ ಆಪ್ ಬರೋಡಾದಲ್ಲಿ ಮಹಿಳೆ ಖಾತೆಗೆ ಇಟ್ಟಿದ್ದಾರೆ. ಇನ್ನುಳಿದ ರೂ. 80,00,000-00 (ಎಂಬತ್ತು ಲಕ್ಷ) ರೂಪಾಯಿಗಳನ್ನು ಚಿಂಚಲಿ ಗ್ರಾಮದ ರಮೇಶ ಅವರಿಗೆ ಕೊಟ್ಟಿದ್ದಾರೆ.
ದಲಿತ ಮಹಿಳೆಗೆ ಮೋಸ ಮಾಡುವ ಉದ್ದೇಶದಿಂದ ರಾಜಕೀಯ ಕೈವಾಡದಿಂದ : ಆರೋಪಿಗಳಾದ ರಾಜು ಭೂಪಾಲ ಬನಗೆ ಶೈಲಾ. ರಮೇಶ. ಪಾಟೀಲ, ಮ್ಯಾನೇಜರ ಸೋಮೇಶ್ವರ ಅರ್ಬನ ಕ್ರೆಡಿಟ್ ಸೊಸೈಟಿ ಬಿರಡಿ. ಶಿವನಗೌಡ, ಮಾಯಗೌಂಡ, ಪಾಟೀಲ.ಭೀಮಪ್ಪ ಮಾಯಗೌಂಡ ಪಾಟೀಲ. ಝಾಕೀರ ಮೌಲಾ ತರಡೆ ಸಂತೋಷ. ಪ್ರವೀಣ ಪಾಟೀಲ ಇವರೆಲ್ಲರೂ ಬಿರಡಿ ಮತ್ತು ಚಿಂಚಲಿ ಗ್ರಾಮದವರು ಇವರು ಮಹಿಳೆಗೆ ಅನ್ಯಾಯ ಮಾಡಿದ್ದರ ಬಗ್ಗೆ ಕುಡಚಿ ಪಿ.ಎಸ್.ಆಯ್. ಯವರಿಗೆ ಪಿರ್ಯಾದೆ ಕೊಟ್ಟರೂ ಸಹ ಸದರಿ ಪ್ರಕರಣ ದಾಖಲಿಸಿರುವುದಿಲ್ಲ.. ಕುಡಚಿ ಪಿ.ಎಸ್.ಆಯ್. ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಈ ರೀತಿ ಮೇಲೆ ತಿಳಿಸಿದ ಆರೋಪಿಗಳನ್ನು ತಕ್ಷಣವೇ ಬಂದಿಸಿ ಸೂಕ್ತ ತನಿಖೆಗೆ ಒಳಪಡಿಸಬೇಕು ಈ ಕುರಿತು ಕ್ರಮ ಜರುಗಿಸುವಲ್ಲಿ ವಿಳಂಭವಾದರೆ ಜಿಲ್ಲೆಯಾಧ್ಯಾಂತ ಸಮಿತಿಯು ಅನ್ಯಾಯಕ್ಕೊಳಗಾದ ಮಹಿಳೆಗೆ ನ್ಯಾಯ ಸಿಗುವವರೆಗೂ ಉಗ್ರ ಪ್ರತಿಭಟನೆ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು .
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ, ಲಕ್ಷ್ಮಣ ತೆಳಗಡೆ, ನಟರಾಜ ಮಾವರಕರ, ವಸಂತ ಅಲಖನೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.//////