Belagavi News In Kannada | News Belgaum

ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ರಾಜಕೀಯ ಬೇಡ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ:   ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಬಿಜೆಪಿಗರು ರಾಜಕೀಯ ಮಾಡುವುದು ಸರಿಯಲ್ಲ, ಇದನ್ನು ಬಗ್ಗೆ ಹರಿಸಲು ಪಕ್ಷಗಳು ಉಪಾಯ ನೀಡಬೇಕೆ ಹೊರತು  ರಾಜಕೀಯವಾಗಿ ಬಳಿಸಿಕೊಳ್ಳಬಾರದು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಹೇಳಿದರು.

ನಗರದ ಜಿಲ್ಲಾಡಳಿತ ಆವರಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಚಿವರು,  ಇಂತಹ  ಸಾಕಷ್ಟು ಘಟನೆಗಳು ಮಣಿಪುರ, ಉತ್ತರ ಪ್ರದೇಶದಲ್ಲಿ  ನಡೆದಿವೆ. ಅಲ್ಲಿಗೆ ಭೇಟಿ ನೀಡದ ಬಿಜೆಪಿಗರೂ,  ಬೆಳಗಾವಿಯ ಘಟನೆಯನ್ನು ರಾಜಕೀಯ ಅಸ್ತ್ರವಾಗಿ ಬಳಿಸಿಕೊಳ್ಳುತ್ತಿವೆ ಎಂದು ಕಿಡಿಕಾರಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಗಳನ್ನು ಪೊಲೀಸ್‌ ಇಲಾಖೆ ಬಂಧಿಸಿದೆ.  ಮತ್ತೆ  ಇಂತಹ ಅಮಾನೀಯ ಘಟನೆ ಮರುಕಳಿಸದಂತೆ ಇಲಾಖೆ ಸನ್ನದ್ಧವಾಗಿದೆ. ಈ ಕೃತ್ಯ ನಡೆದಾಗ ಸಾರ್ವಜನಿಕರ ಜವಾಬ್ದಾರಿ ಬಹಳ ಮುಖ್ಯವಾಗಿದೆ. ಮಹಿಳೆಯ ಸಹಾಯಕ್ಕೆ ಗ್ರಾಮಸ್ಥರು  ಬಾರದ  ಹಿನ್ನೆಲೆಯಲ್ಲಿ ಹೈಕೋರ್ಟ್‌ ಸಹ  ಗ್ರಾಮಸ್ಥರಿಗೆ ದಂಡ  ವಿಧಿಸಿದೆ ಎಂದು ಹೇಳಿದರು.

ಸಂತ್ರಸ್ತೆ ಮಹಿಳೆಯ ಅನುಕೂಲಕ್ಕಾಗಿ ಸರ್ಕಾರದಿಂದ  ಈಗಾಗಲೇ  ‘ಐದು ಲಕ್ಷದ ಜೊತೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2 ಎಕರೆ ಜಮೀನು ಮಂಜೂರು  ಮಾಡಲಾಗಿದೆ ಎಂದ ಅವರು,  ಇನ್ನು ಸಿಐಡಿ ತನಿಖೆಗೂ ಮುನ್ನವೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೂ ಪ್ರಕರಣವನ್ನು ಸರ್ಕಾರ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ. ತನಿಖೆ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಸಿಐಡಿಗೆ ಕೊಟ್ಟಿದ್ದಾರೆ.ಇಂತಹದೊಂದು ಘಟನೆ ಆಗಬಾರದಿತ್ತು, ಆದರೆ ನಮ್ಮ ಭಾಗದಲ್ಲಿ ಆಗಿದೆ. ಮುಂದೆ ಇಂತಹ ಘಟನೆ ಆಗದಂತೆ ಎಲ್ಲರೂ ಪ್ರಯತ್ನ ಮಾಡೋಣ ಎಂದುಸ ಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಗೃಹಮಂತ್ರಿಗಳು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ:  ಪೊಲೀಸ್‌ ರು ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಗ್ರಾಮದ ವಾತಾವರಣ ಸಹಜ ಸ್ಥಿತಿಗೆ ಮರಳಿದೆ,  ದಿಟ್ಟ ಕ್ರಮಕೈಗೊಳ್ಳಲಾಗಿದೆ.  ಇದರಲ್ಲಿ ಗೃಹಮಂತ್ರಿಗಳು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಸರ್ಕಾರದ ಕ್ಯಾಬಿನೇಟ್‌ ಇಬ್ಬರು ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ,  ಬಿಜೆಪಿಯ ನಾಯಕರು,  ಇಬ್ಬರು ಸಂಸದರು ಇದ್ದರು ಕೂಡ ಗ್ರಾಮಕ್ಕೆ ಬಂದಿಲ್ಲ, ಅವರ ಆರೋಪಗಳಲ್ಲಿ ಉರುಳಿಲ್ಲ ಎಂದು ತಿರುಗೇಟು ನೀಡಿದರು.//////