Belagavi News In Kannada | News Belgaum

ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟ ಕೊರೊನಾ ವೈರಸ್

ಕಾರವಾರ: ಕೊರೊನಾ ರೂಪಾಂತರಿಯಾದ ಜೆಎನ್1 (JN1) ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟಿದೆ.

ಕಾರವಾರ ತಾಲೂಕಿನ ಸದಾಶಿವಗಡ ಗ್ರಾಮದ ಯುವಕನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಗೋವಾದಿಂದ ಕಾರವಾರಕ್ಕೆ ಬಂದಿದ್ದ ಯುವಕನೋರ್ವನಲ್ಲಿ ಕಳೆದ 15 ದಿನಗಳ ಹಿಂದೆ ಸೋಂಕು ಪತ್ತೆಯಾಗಿದ್ದು, ಈಗ ಆರ್‌ಟಿಪಿಸಿಆರ್ ರಿಪೋರ್ಟ್ ನೆಗೆಟಿವ್ ಬಂದಿದೆ. ಒಟ್ಟು 15ರಿಂದ 20 ಜನರಲ್ಲಿ ಕೆಮ್ಮು, ನೆಗಡಿ ಹಾಗೂ ಜ್ವರ ಕಾಣಿಸಿಕೊಂಡಿತ್ತು. ಒಂದೇ ಕುಟುಂಬದ ಸದಸ್ಯರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ಲಸಿಕೆ ಪಡೆದ ಹಿನ್ನೆಲೆ ಕೇವಲ 3ರಿಂದ 4 ದಿನಗಳಲ್ಲಿ ಪೂರ್ತಿ ಗುಣಮುಖರಾಗಿದ್ದಾರೆ.
ಚಳಿಗಾಲದ ಹಿನ್ನೆಲೆ ಹೆಚ್ಚು ಜನರಲ್ಲಿ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದೆ. ಕೊರೊನಾ ಲಕ್ಷಣ ಹೆಚ್ಚಾಗಿ ಕಂಡು ಬಂದಲ್ಲಿ ಮಾತ್ರ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಹೊಸ ವರ್ಷಕ್ಕೆ ಹೊರ ರಾಜ್ಯಗಳಿಂದ ಹೆಚ್ಚಿನ ಜನ ಕಾರವಾರಕ್ಕೆ ಬರುವ ಹಿನ್ನೆಲೆ ಮುಂಜಾಗೃತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.//////