Belagavi News In Kannada | News Belgaum

ಹಂದಿಗುಂದ ಸಾರ್ವಜನಿಕ ಕೆರೆ ಒತ್ತುವರಿದಾರರ ವಿರುದ್ಧ ಬೆಳಗಾವಿ ಜಿಲ್ಲಾಧಿಕಾರಿ ಸೇರಿ ಒಟ್ಟು 17 ಜನರ ವಿರುದ್ದ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಸಮನ್ಸ್ ಜಾರಿ

ಹಂದಿಗುಂದ ಸಾರ್ವಜನಿಕ ಕೆರೆ ಒತ್ತುವರಿದಾರರ ವಿರುದ್ಧ ಬೆಳಗಾವಿ ಜಿಲ್ಲಾಧಿಕಾರಿ ಸೇರಿ ಒಟ್ಟು 17 ಜನರ ವಿರುದ್ದ ಕರ್ನಾಟಕ ಉಚ್ಚ ನ್ಯಾಯಾಲಯ
ಬೆಂಗಳೂರು ಸಮನ್ಸ್ ಜಾರಿ

ಬೆಂಗಳೂರು: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಕೆರೆ ಒತ್ತುವರಿ ವಿಷಯವಾಗಿ ಬೆಳಗಾವಿ ಜಿಲ್ಲಾಧಿಕಾರಿ ಸೇರಿ ಒಟ್ಟು 17 ಜನರ ವಿರುದ್ದ ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಸಮನ್ಸ್ ಜಾರಿ ಮಾಡಿದೆ.
ಬೆಂಗಳೂರು ಸೆರಿದಂತೆ ರಾಜ್ಯದ ಉದ್ದಗಲಕ್ಕೂ ಕೆರೆಗಳೂ ಮತ್ತು ಅವುಗಳ ಸುತ್ತಮುತ್ತಲಿನ 30 ಮೀಟರ್ ಬಫರ್ ವಲಯದ ಸರ್ವೇ ಕಾರ್ಯವನ್ನು ಪುನರಾರಂಬಿಸಬೇಕೆಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಹಲವಾರು ಪ್ರಕರಣಗಳಲ್ಲಿ ಖಡಕ್ ಆದೇಶÀ ನೀಡಿದೆ ಈ ಸಂಬಂಧ ನ್ಯಾಯಾಲಯವು ಸರ್ಕಾರ, ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರ ಹಾಗೂ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಬೆಂಗಳೂರಿನಂಥ ನಗರ ಪ್ರದೇಶಗಳಷ್ಟೇ ಅಲ್ಲದೆ ರಾಜ್ಯದ ಉದ್ದಗಲಕ್ಕೂ ದೊಡ್ಡ ಸಂಖ್ಯೆಯಲ್ಲಿ ಕೆರೆಗಳೂ ಒತ್ತುವರಿಯಾಗಿವೆ. ರಾಜ್ಯದಲ್ಲಿ ಈ ಮೋದಲು ಸುಮಾರು 39 ಸಾವಿರ ಕೆರೆಗಳಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಈ ಪೈಕಿ 5 ಸಾವಿರಕ್ಕೂ ಹೆಚ್ಚೂ ಕೆರೆಗಳೂ ಕಣ್ಮರೆಯಾಗಿದ್ದು. ಈಗ ಕೇವಲ 34 ಸಾವಿರ ಕೆರೆಗಳೂ ಬದೂಕೂಳಿದಿವೆ. ಈ ಕೆರೆಗಳನ್ನೂ ಕೆಲವರು ಒತ್ತುವರಿ ಮಾಡಿಕೊಳ್ಳಲಾಗುತ್ತಿದ್ದು ಅವಸಾನದ ಅಂಚಿಗೆ ತಲುಪುತ್ತಿವೆ. ಬಹುತೇಕ ಕೆರೆಗಳೂ ಸಣ್ಣ ನಿರಾವರಿ ಇಲಾಖೆಯ ವ್ಯಾಪ್ತಿಯಲ್ಲಿದ್ದರೆ ಕೆಲವೆಡೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ಮತ್ತಿತರ ಸರ್ಕಾರಿ ಸಂಸ್ಥೆಗಳ ಒಡೆತನದಲ್ಲಿವೆ .

ರಾಜ್ಯದಲ್ಲಿ 2021 ರ ಪೇಬ್ರುವರಿ 23 ರ ಹೊತ್ತಿಗೆ 17000 ಕೆರೆಗಳ ಸರ್ವೇ ನಡೆಸಲಾಗಿದೆ. ಜೂನ್ 18 ರಂದೂ ರಾಜ್ಯ ಮಟ್ಟದ ಸಮಿತಿಯ ಸಭೆ ನಡೆಸಲಾಗಿದ್ದು , ಸರ್ವೇ ಕಾರ್ಯ ಆರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೈಕೋರ್ಟಿಗೆ ಸರ್ಕಾರ ಮಾಹಿತಿ ನೀಡಿದೆ . ವಾಸ್ತವದಲ್ಲಿ ಕೆರೆಗಳ ಸಂರಕ್ಷಣೆ ವಿಷಯದಲ್ಲಿ ಸರ್ಕಾರಗಳೂ ಜವಾಬ್ದಾರಿಯಿಂದ ವರ್ತಿಸಿದ್ದರೆ ನ್ಯಾಯಾಲಯಗಳೂ ಆದೇಶ ಮಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ ಉಳಿದಿರುವ ಕೆರೆಗಳನ್ನಾದರೂ ಮುಂದಿನ ಪಿಳಿಗೆಗೆ ಕಾಪಾಡುವ ಕೇಲಸ ಮಾಡಬೇಕಿದೆ.

ನಮ್ಮ ರಾಜ್ಯದಲ್ಲಿ ಬಹುತೇಕ ಭಾಗಗಳಿಗೆ ಕೃಷಿ ಮತ್ತು ಕುಡಿಯುವ ನೀರಿಗೆ ಜಲ ಮೂಲ ಎಂಬುವುದನ್ನು ಮರೆಯಬಾರದೂ ಆದರೆ ಕೇಲವು ಕಿಡಿಗೆಡಿಗಳ ದುರಾಶೆಯ ಫಲವಾಗಿ ಈ ಜಲ ಮೂಲಗಳನ್ನು ಹಾಳು ಮಾಡಲಾಗುತ್ತಿವೇ. ಕೆರೆಗಳ ಅಳಿವು -ಉಳಿವು ಅಂದರೆ ಅದು ಕೇವಲ ಕೇರೆಗಳ ಸಂರಕ್ಷಣೆ ಮಾತ್ರವಲ್ಲ .ಅದು ನಮ್ಮ ಅಳಿವು -ಉಳಿವು ಸಹ ಹೌದು. ಕೆರೆಗಳು ಜಿವಂತವಾಗಿದ್ದರೆ ನಾವು ಬದುಕುತ್ತೆವೆ . ಇಲ್ಲವಾದರೆ ನಮ್ಮ ಬದುಕು ಬತ್ತಿಹೋಗುತ್ತದೆ ಎಂಬ ಪ್ರಜ್ಞೆಯನ್ನು ಮೆರೆಯಬೇಕಿದೆ. ಕೆರೆಗಳ ಒತ್ತುವರಿ ಕೇವಲ ಬೆಂಗಳೂರಿನಂತಹ ನಗರ ಪ್ರದೇಶಗಳಿಗೆ ಸಿಮೀತವಾಗಿದೆ ಎಂಬ ಭಾವನೆ ಇದೆ. ಆದರೆ ರಾಜ್ಯಾದ್ಯಂತ ಹಳ್ಳಿ ,ನಗರವೆಂಬ ಬೇದವಿಲ್ಲದೆ ಕೆರೆಗಳೂ ಒತ್ತೂವರಿಯಾಗಿರುವುದು ಹಗಲಿನಷ್ಟೇ ಸತ್ಯ. ಸದ್ಯ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಂದಿಗುಂದ ಎಂಬ ಗ್ರಾಮ ಈ ಅಪವಾದಕ್ಕೆ ಜಿವಂತ ಸಾಕ್ಷಿಯಾಗಿದೆ ಎಂದರೆ ಅಕ್ಷರಶ: ತಪ್ಪಾಗದೂ ಒಂದು ಅಂದಾಜಿನ ಪ್ರಕಾರ ಹಂದಿಗುಂದ ಗ್ರಾಮದ ಜನಸಾಮನ್ಯರನ್ನೂ ನೋಡಿದರೆ ತುಂಬಾ ಹೃದಯವಂತರೂ , ಸಹೃದಯಿಗಳೂ ಹಾಗೂ ಪರೋಪಕಾರಿಗಳು ಅಂದರೆ ಖಂಡಿತವಾಗಿಯೂ ಅತಿಶಯೋಕ್ತಿಯವಲ್ಲ. ಆದರೆ ಕೆಲವೇ ಕೆಲವು ಕೀಡಿಗೇಡಿಗಳು ಮಾಡುವ ಅಂದಾ ದುಂದಿಗೆ ನಿಜಕ್ಕೂ ಅಖಂಡ ಗ್ರಾಮದ ಜನತೆಯೇ ಕೆಲವು ಸಂಧರ್ಭಗಳಲ್ಲಿ ತಲೆ ತಗ್ಗಿಸುಂತಾಗಿದೆ . ಸದ್ಯ ಇಂತಹ ಅಪವಾದಕ್ಕೆ ಸಾಕ್ಷಿಯಾಗಿದ್ದೂ ಹಂದಿಗುಂದ ಗ್ರಾಮದ ಕೆರೆ ಒತ್ತುವರಿ.

ಹೌದು ಹಂದಿಗುಂದ ಗ್ರಾಮದ ಕೆರೆ ಒತ್ತುವರಿಯಾಗಿರುವ ವಿಷಯವನ್ನು ನ್ಯಾಯವಾದಿ ಮತ್ತು ಛಲಗಾರ ವಾಹಿನಿಯ ಮುಖ್ಯಸ್ಥ ಶ್ರೀ ಪ್ರಭಾಕರ ಹೆಚ್ ಗಗ್ಗರಿ ಎಂಬುವವರು ತಮ್ಮ ಗಮನಕ್ಕೆ ಬರುತ್ತಿದ್ದ ಹಾಗೆ ಹೆಗಾದರೂ ಸರಿ , ಹಂದಿಗುಂದ ಗ್ರಾಮದ ಕೆರೆಯನ್ನು ಉಳಿಸಿಕೊಳ್ಳಬೇಕು ಎಂದು ಸಂಕಲ್ಪ ಮಾಡಿ ದಿನಾಂಕ 22/01/2021 ರಂದು ಮೇ//ಜಿಲ್ಲಾಧಿಕಾರಿಗಳು ,ಬೆಳಗಾವಿ ಇವರಿಗೆ ಹಂದಿಗುಂದ ಗ್ರಾಮದ ಸಾರ್ವಜನಿಕ ಕೇರೆ ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ನಿಡಿ ಅಕ್ರಮ ಕಟ್ಟಡಗಳನ್ನು ತೇರವುಗೊಳಿಸಲು ಪಿರ್ಯಾದಿ ನಿಡಿರುತ್ತಾರೆ. ನಂತರ ಸಂಬಂದಿತ ಅಧಿಕಾರಿಗಳ ಕ್ರಮ ವಿಳಂಬವಾಗಿದ್ದರಿಂದ ದಿನಾಂಕ 18/02/2021 ರಂದು ಮತ್ತೆ ಮೇ//ಜಿಲ್ಲಾಧಿಕಾರಿಗಳು ,ಬೆಳಗಾವಿ ಇವರಿಗೆ ಮರು ಅರ್ಜಿ ನಿಡಿರುತ್ತಾರೆ. ನಂತರ ಸದರಿ ಅಧಿಕಾರಿಗಳು ಕಾನೂನೂ ಕ್ರಮಕ್ಕಾಗಿ ಮೇ// ತಹಶಿಲ್ದಾರರವರು, ತಹಶಿಲ್ದಾರರವರ ಕಾರ್ಯಾಲಯ ರಾಯಬಾಗ ಇವರಿಗೆ, ರವಾಣೇ ಮಾಡಿ , ಸದರಿ ಅರ್ಜಿಯ ಕುರಿತು ನಿಯಮಾನುಸರ ಪರಿಶೀಲನೆ ಮಾಡಿ ,ಸೂಕ್ತ ಕ್ರಮಕೈಗೊಂಡು , ಕೈಗೊಂಡ ಕ್ರಮದ ಕುರಿತು ಅರ್ಜಿದಾರರಿಗೆ ಹಿಂಬರಹ ನಿಡಿದ್ದು ಇರತ್ತದೆ . ಸದರಿ ಅರ್ಜಿಯ ಉಲ್ಲೇಖ: ನಂ ಕಂಶಾ/ಎನ್‍ಸಿಆರ್ /ಸಿಆರ್/07/2020-21 ದಿನಾಂಕ : 03/02/2021 ಎಂದು ಇರುತ್ತದೆ.

ವಿಷಯ ಹಿಗಿರುವಾಗ ಸದರಿ ತಣ ಖಾಧಿಕಾರಿಗಳು ಅರ್ಜಿ ನೀಡಿ ಒಂದು ವರ್ಷವಾದರೂ ಇದುವರೆಗೂ ಕೇರೆ ಒತ್ತುವರಿ ಮಾಡಿರುವ ಆರೋಪಿಗಳ ವಿರುದ್ಧವಾಗಲಿ, ಅಥವಾ ತೇರವುಗೋಳಿಸುವ ವಿಷಯವಾಗಲಿ ಯಾವುದೇ ಕಾನೂನೂ ಕ್ರಮ ಜರುಗಿಸಿರುವುದಿಲ್ಲ, ಆದ್ದರಿಂದ ಸದರಿ ತಣ ಖಾಧಿಕಾರಿಗಳನ್ನು ಕರ್ತವ್ಯಲೋಪದ ಆದಾರದ ಮೇಲೆ ಸೇವೆಯಿಂದ ಅಮಾನತ್ತು ಮಾಡಬೇಕು .ಮತ್ತು ಸದರಿ ಕೇರೆ ಒತ್ತುವರಿ ತೇರವುಗೋಳಿಸಲು ದಕ್ಷ ಪ್ರಾಮಾಣ ಕ ಅಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ಸದರಿ ಅರ್ಜಿಯ ಬಗ್ಗೆ ತೇಗೆದುಕೊಂಡಿರುವ ಕಾನೂನು ಕ್ರಮದ ಕುರಿತು 20 ದಿನಗಳಲ್ಲಿ ಲೀಖಿತವಾಗಿ ಹಿಂಬರಹದೊಂದಿಗೆ ಮಾಹಿತಿ ನಿಡತಕ್ಕದ್ದು. ಎಂದು ಲೀಖಿತವಾಗಿ ಪಿರ್ಯಾದಿ ನಿಡಿರುತ್ತಾರೆ. ಅದರಂತೆ ಮೇ// ಜಿಲ್ಲಾಧಿಕಾರಿಗಳು ಬೆಳಗಾವಿ ರವರು ದಿನಾಂಕ 02/03/2022 ರಂದು ರಾಯಬಾಗ ತಹಶಿಲ್ದಾರರವರಿಗೆ ಕೆರೆ ಅತಿಕ್ರಮಣವನ್ನು ತೇರವುಗೊಳಿಸಲು ಮರು ಆದೇಶ ಮಾಡಿರುತ್ತಾರೆ. ಆದರೆ ಸದರಿ ಅಧಿಕಾರಿಗಳು ಇದುವರೆಗೂ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸಿರುವುದಿಲ್ಲ ಆದ್ದರಿಂದ ತಡವಾಗಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ Éಬಳಿ ಬಂದು ಪಿರ್ಯಾದಿ ನಿಡಿರುತ್ತಾರೆ. ಅದರಂತೆ ಗೌರವಾನ್ವಿತರಾದ ಪ್ರಾಧಿಕಾರ ಕೂಡಲೇ ಅನಧಿಕೃತವಾಗಿ ಅತಿಕ್ರಮಣವಾಗಿರುವ ಹಂದಿಗುಂದ ಕೆರೆಯನ್ನು ತೆರವುಗೊಳಿಸಬೇಕು ಮತ್ತು ಅತಿಕ್ರಮಣದಾರರ ಮೇಲೆ ಯೋಗ್ಯ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಪ್ರಭಾಕರ ಹೆಚ್ ಗಗ್ಗರಿ ಪಿರ್ಯಾದಿ ನಿಡಿರುತ್ತಾರೆ. ಮತ್ತು ಸದರಿ ಪಿರ್ಯಾದಿಯ ಬಗ್ಗೆ ತೆಗೆದುಕೊಂಡಿರುವ ಕಾನೂನು ಕ್ರಮದ ಕುರಿತು ಹಿಂಬರಹದ ಮುಖಾಂತರ ಮಾಹಿತಿ ನೀಡಬೇಕೆಂದು ದಿನಾಂಕ : 11/03/2022 ರಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ನೆಲ ಮಹಡಿ,ಬೀಜ ಭವನ, ಬಳ್ಳಾರಿ ರಸ್ತೆ ಹೆಬ್ಬಾಳ ,ಬೆಂಗಳೂರು ಇವರಲ್ಲಿ ಲೀಖಿತವಾಗಿ ಪಿರ್ಯಾದಿ ನಿಡಿರುತ್ತಾರೆ. ಆದರಂತೆ ಸದರಿ ಅಧಿಕಾರಿಗಳು ದಿನಾಂಕ : 13/04/2022 ರಂದು ಹಿಂರಹದ ಮೂಲಕ ಜಿಲ್ಲಾಧಿಕಾರಿಗಳು ಬೆಳಗಾವಿಯವರಿಗೆ ಆದೇಶ ಮಾಡಿದ್ದು ಸದರಿ ಹಿಂಬರಹದ ಅರ್ಜಿಯ ಉಲ್ಲೇಖ : ಸಂಖ್ಯೆ : ಕ.ಕೆ.ಸಂ.ಅ.ಪ್ರಾ/ಬೆಂ/ಉಡಿievಚಿಟಿಛಿe/ ಬೆಳಗಾವಿ/19/2020-21/106 ಇರುತ್ತದೆ . ಅದರಂತೆ ಸದರಿ ಹಿಂಬರಹ ಅದೇಶದಲ್ಲಿ 1) ಜಿಲ್ಲಾಧಿಕಾರಿಗಳು ಬೆಳಗಾವಿ 2) ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು, ಜಿಲ್ಲಾ ಪಂಚಾಯತಿ ಬೆಳಗಾವಿ 3) ಮೇ// ತಹಶಿಲ್ದಾರರವರು, ತಹಶಿಲ್ದಾರರವರ ಕಾರ್ಯಾಲಯ ರಾಯಬಾಗ ಇವರಿಗೆ, 4) ಜಿಲ್ಲಾ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿ ಜಿಲ್ಲೆ ಇವರಿಗೆ ರವಾಣ ಸಿ ಕಾನೂನು ಕ್ರಮಕ್ಕಾಗಿ ಕಳುಹಿಸಿರುತ್ತಾರೆ. ಆದರೆ ಇದುವರೆಗೂ ಸಂಬಂದ ಪಟ್ಟ ಅಧಿಕಾರಿಗಳು , ಕೆರೆ ಸಂರಕ್ಷಣಾ ಕ್ರಮವಾಗಲಿ ಅಥವಾ ಅತಿಕ್ರಮಣ ಮಾಡಿದ ಆರೋಪಿಗಳ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸಿರುವುದಿಲ್ಲ.

( ಕ.ಕೆ.ಸಂ.ಅ.ಪ್ರಾ/ಬೆಂ ಇವರ ಆದೇಶದಲ್ಲಿ ಸದರಿ ಇಲಾಖೆಯಲ್ಲಿ ಇರುವ ದಾಖಲೆಗಳನ್ನು ಪರಿಶೀಲಿಸಲಾಗಿದ್ದು. ಈ ಕೆರೆಯು ಹಂದಿಗುಂದ ಗ್ರಾಮ ಪಂಚಾಯತಿಗೆ ಬರುವುದಾಗಿ ಗಮನಿಸಿದ್ದು. ಈ ಹಿನ್ನೆಲೆಯಲ್ಲಿ ಈ ಕೆರೆಯು ಪಂಚಾಯತ ಅಭಿವೃದ್ಧಿ ಅಧಿಕಾರಿ ಸುಪರ್ಧಿಯಲ್ಲಿದ್ದು ಈ ರೀತಿ ಒತ್ತುವರಿಯಾಗಿರುವುದನ್ನು ತಡೆಗಟ್ಟಲು ವಿಫಲಾರಾಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ, ಮತ್ತೊಮ್ಮೆ ತಹಶಿಲ್ದಾರರಿಗೆ ತಮ್ಮ ವತಿಯಿಂದ ನಿರ್ದೇಶನ ನೀಡಿ ಒತ್ತುವರಿಯನ್ನು ಗುರುತಿಸಿ ತೇರುವುಗೊಲಿಸಲು ಹಾಗೂ ಕೆರೆಯನ್ನು ರಕ್ಷೀಸಲು ತಂತಿಬೆಲಿ/ಟ್ರೇಂಚ್/ ಅರಣ ್ಯಕರಣ ಕಾಮಗಾರಿಯನ್ನು ಕೈಗೊಳ್ಳಲು ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು, ಜಿಲ್ಲಾ ಪಂಚಾಯತಿ ಬೆಳಗಾವಿ ರವರಿಗೆ ನಿರ್ದೇಶಿಸಬಹುದಾಗಿ ಕೊರುತ್ತಾ ಈ ನಿಟ್ಟಿನಲ್ಲಿ ಕೆಳಹಂತದ ಅಧಿಕಾರಿಗಳು ಕ್ರಮ ಕೈಗೊಳ್ಳಲು ತಮ್ಮ ವತಿಯಿಂದ ನಿರ್ದೇಶನ ನೀಡಲು ಕೊರುತ್ತೆನೆ. ಎಂದು ಪ್ರಾಧಿಕಾರ ಆದೇಶ ಮಾಡಿರುತ್ತದೆ.)

ಸದ್ಯ ಇದೆಲ್ಲದರ ಪ್ರತಿಫಲವಾಗಿ ಈಗಾಗಲೇ ಎರಡು ಹಂತದ ಕೆರೆ ಒತ್ತುವರಿಯ ಪ್ರಾಥಮೀಕ ತನಿಖೆ ಮುಗಿದಿದ್ದು ಹಂದಿಗುಂದ ಗ್ರಾಮದ ಕೆರೆ ಒತ್ತುವರಿಯಾಗಿರುವುದು ಖಾತರಿಯಾಗಿದ್ದು , ಹಂದಿಗುಂದ ಗ್ರಾಮದ ಪಂಚಾಯತ ಅಭಿವೃದ್ದಿ ಅಧಿಕಾರಿ ಶ್ರೀ ಮಹಾದೇವ ಕುಂಬಾರರವರ ನೇತೃತ್ವದಲ್ಲಿ ಸರ್ವೇ ಮಾಡಲಾಗಿದೆ. ಆದರೆ ಇದುವರೆಗೂ ಹಂದಿಗುಂದ ಕೆರೆ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಡಳಿತ ವಿಫಲವಾಗಿದ್ದರಿಂದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಅಕ್ರಮ ಕೆರೆ ಒತ್ತುವರಿದಾರದ ವಿರುದ್ದ ನ್ಯಾಯವಾದಿ ಮತ್ತು ಛಲಗಾರ ವಾಹಿನಿಯ ಮುಖ್ಯಸ್ಥ ಶ್ರೀ ಪ್ರಭಾಕರ ಹೆಚ್ ಗಗ್ಗರಿಯವರು ದಿನಾಂಕ : 10/07/2023 ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ನಲ್ಲಿ ಸಾರ್ವಜನಿಕ ಇತಾಸಕ್ತಿ ಅರ್ಜಿ ಸಲ್ಲಿಸಿದ್ದರು . ಅದರಂತೆ ಈ ಪ್ರಕರಣವು ಅತ್ಯಂತ ಗಂಭಿರ ಪ್ರಕರಣವೆಂದು ಅಭೀಪ್ರಾಯ ಪಟ್ಟು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಮುಖ್ಯ ನ್ಯಾಯಮೂರ್ತಿ ಕೃಷ್ಣ ಎಸ್ ದಿಕ್ಷೀತ್ ರವರು, ದಿನಾಂಕ 19/12/2023 ರಂದು ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಅಕ್ರಮ ಕೆರೆ ಒತ್ತುವರಿದಾರನ್ನು ಸೇರಿ ಒಟ್ಟು 17 ಜನಕ್ಕೆ ನೋಟಿಸ್ ಜಾರಿ ಮಾಡಿದೆ. ಹಾಗಾದರೆ ಕಾದು ನೋಡಬೇಕಾಗಿದೆ ಹಂದಿಗುಂದ ಕೇರೆ ಉಳಿಯುತ್ತಾ ? ಒತ್ತುವರಿದಾರರ ಪಾಲಾಗುತ್ತದೆಯಾ ?