Belagavi News In Kannada | News Belgaum

ನೆಲಮಂಗಲದಲ್ಲಿ ಸಿಲಿಂಡರ್ ಸ್ಫೋಟ; ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಜಿಲ್ಲೆಯ ನೆಲಮಂಗಲ ದ ವಾಜರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟವಾಗಿ ಇಬ್ಬರಿಗೆ ಗಂಭೀರ ಗಾಯವಾಗಿದೆ.  ವಿಜಯಮ್ಮ ಅವರಿಗೆ ಸೇರಿದ ಮನೆ ಇದಾಗಿದ್ದು, ಎರಡನೇ ಮಹಡಿಯನ್ನು ಚಿಕ್ಕಬಾಣಾವರದಲ್ಲಿ ಲೈನ್​ಮನ್​ ಆಗಿ ಕೆಲಸ ಮಾಡುತ್ತಿದ್ದ ಸಂಜಯ್ ಎಂಬಾತನಿಗೆ ಕಳೆದ ಎಂಟು ವರ್ಷದಿಂದ ಬಾಡಿಗೆ ಕೊಡಲಾಗಿತ್ತು.

ಇಂದು ಏಕಾಎಕಿ ಈ ಅನಾಹುತ ನಡೆದಿದ್ದು, ಸಂಜಯ್(40) ಹಾಗೂ ಲೇಖನಾ (05) ಅವರನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಗ್ನಿನಂದಿಸಿದ್ದಾರೆ. ಈ ಕುರಿತು ನೆಲಮಂಗಲ ಟೌನ್​ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ./////