Belagavi News In Kannada | News Belgaum

ಶಿಕ್ಷಕರು ಹೊಸ ಬೋದನಾ ಸಾಧನಗಳ ಸದ್ಬಳಕೆ ಮಾಡಿಕೊಳ್ಳಿ: ಶಿಕ್ಷಣ ಇಲಾಖೆ, ಉಪನಿರ್ದೇಶಕ ಎಂ ಎಲ್ ಹಂಚಾಟೆ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ವಿಮಾಯೋಜನೆ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ವಿಮಾಯೋಜನೆ

 

ಬೆಳಗಾವಿ: ಡಿಸೆಂಬರ್ 22: ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್ಕಾರ್ಟ್, ಬಿಗ್ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತ ಕಾರ್ಮಿಕರನ್ನು ಗಿಗ್‍ಕಾರ್ಮಿಕ ರೆಂದು ನೋಂದಣೆ ಮಾಡಿಕೊಳ್ಳಬೇಕು.
ಯೋಜನೆಯ ವಿಶೇಷತೆಗಳು
ಕರ್ನಾಟಕರಾಜ್ಯದಲ್ಲಿಕಾರ್ಯನಿರ್ವಹಿಸುತ್ತಿರುವಗಿಗ್‍ಕಾರ್ಮಿಕರಿಗೆವಿಮಾಯೋಜನೆದೇಶದಲ್ಲಿಯೇಮೊದಲಬಾರಿಗೆಜಾರಿ, ಎಲ್ಲಾಅರ್ಹಗಿಗ್‍ಕಾರ್ಮಿಕರುಸೇವಾಸಿಂಧುಪೋರ್ಟಲ್ನಲ್ಲಿನೋಂದಾಯಿಸಿಕೊಳ್ಳುವುದು, ವಿಮಾಸೌಲಭ್ಯವುಕರ್ತವ್ಯದಲ್ಲಿರುವಾಗ / ಇಲ್ಲದಿರುವಾಗಸಂಭವಿಸುವ ಅಪಘಾತಗಳಿಗೂಅನ್ವಯ, ಯೋಜನೆಯು ಸಂಪೂರ್ಣ ಉಚಿತ, ಯಾವುದೇರೀತಿಯ ಪ್ರೀಮಿಯಂಪಾವತಿಸುವ ಅಗತ್ಯತೆ ಇಲ್ಲ.
ನೋಂದಣಿಗೆ ಅರ್ಹ ಕಾರ್ಮಿಕರು
ಸ್ವಿಗ್ಗಿ, ಜೊಮಾಟೋಗಳಂತಹ ಸಂಸ್ಥೆಗಳಲ್ಲಿ ಫುಡ್ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಫ್ಕಾರ್ಟ್, ಬಿಗ್ಬಾಸ್ಕೆಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್ ಬಾಸ್ಕೆಟ್, ಡಾಮಿನೋಜ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಕೊಂಡ ಎಲ್ಲಾ ಅಸಂಘಟಿತಗಿಗ್ ಕಾರ್ಮಿಕರು ನೋಂದಣಿಗೆ ನೋಂದಣಿಗೆ ಅರ್ಹರಾಗಿರುತ್ತಾರೆ.
ಸೌಲಭ್ಯಗಳು
ಅಪಘಾದಿಂದಮರಣಹೊಂದಿದಲ್ಲಿವಿಮಾಪರಿಹಾರ ರೂ2. ಲಕ್ಷ ಹಾಗೂ ಜೀವವಿಮೆ ರೂ2.ಲಕ್ಷ ಸೇರಿ ಒಟ್ಟು ರೂ.4. ಲಕ್ಷಗಳು, ಅಪಘಾದಿಂದ ಶಾಶ್ವತ ದುರ್ಬಲಗ್ವಿ ಹೊಂದಿದಲ್ಲಿ ರೂ.2. ಲಕ್ಷಗಳವರೆಗೆ, ಆಸ್ಪತ್ರೆ ವೆಚ್ಚ ಮರುಪಾವತಿ ರೂ.1. ಲಕ್ಷಗಳವರೆಗೆ (ಅಪಘಾತ ಪ್ರಕರಣಗಳಿಗೆ ಮಾತ್ರ),ಜೀವವಿಮಾ ರೂ.2. ಲಕ್ಷಗಳು ಸೌಲಭ್ಯ ಕೊಡಲಾಗುವುದು.
ಅರ್ಹತೆ
18 ರಿಂದ 60 ವಯೋಮಾನದವರು, ಆದಾಯ ತೆರಿಗೆ ಪಾವತಿ ದಾರರಾಗಿರ ಬಾರದು,ಭವಿಷ್ಯ ನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು,ಕರ್ನಾಟಕದಲಿ ಗಿಗ್‍ವೃತ್ತಿ (ಡೆಲಿವರಿಕಾರ್ಯ) ನಿರ್ವಹಿಸುತ್ತಿರುವವರಿಗೆ ಮಾತ್ರ.
ದಾಖಲೆಗಳು
ಆಧಾರ್ ಸಂಖ್ಯೆ, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ, ಇ-ಶ್ರಮ್ ನೋಂದಣಿ ಸಂಖ್ಯೆ, (ಇಲ್ಲವಾದಲಿ ್ಲèwww.eshram.gov.in ಅಲ್ಲಿ ನೋಂದಾಯಿಸಿ ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ ಕಛೇರಿ,ಉಪ ವಿಭಾಗ-01&2, ಬೆಳಗಾವಿ, ಕಾರ್ಮಿಕ ಭವನ, ಐ.ಟಿ.ಐ. ಆವರÀಣ, ಮಜಗಾಂವ ರಸ್ತೆ, ಉದ್ಯಮ ಬಾಗ್, ಬೆಳಗಾವಿ-590008. ಹಿರಿಯ ಕಾರ್ಮಿಕ ನಿರೀಕ್ಷಕರ ಕಛೇರಿ, 1, 2, 3 ಮತ್ತು 4ನೇ ವೃತ್ತ, ಹುಕ್ಕೇರಿ ಕಾರ್ಮಿಕ ನಿರೀಕ್ಷಕರ ಕಛೇರಿ ನಿಪ್ಪಾಣಿ, ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ, ಬೈಲಹೊಂಗಲ, ಸವದತ್ತಿ ಮತ್ತುರಾಮದುರ್ಗ ಇವರನ್ನು ಸಂರ್ಪಕಿಸಬಹುದಾಗಿದೆ ಎಂದು ಬೆಳಗಾವಿ ಉಪವಿಭಾಗ 1 ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಮಾಸಿಕ ವ್ಯಾಸಂಗ ವೇತನ, ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ

 

ಬೆಳಗಾವಿ: ಡಿಸೆಂಬರ್ 22: 2023-24 ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ದ ವಿಶ್ವವಿದ್ಯಾಲಯಗಳಲ್ಲಿ ಅಧಿನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಪ್ರಾರಂಭಿಸಿರುವ ಹಿಂದುಳಿದ ವರ್ಗಗಳ ಅರ್ಹ ಹೊಸ ಅಭ್ಯರ್ಥಿಗಳಿಂದ ಮಾಸಿಕ ವ್ಯಾಸಂಗ ವೇತನ ಫೆಲೋಶಿಪ್‍ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಪ್ರಾರಂಭಿಸಿರುವ ಜ. 3 2023 ಮತ್ತು ಅದರ ನಂತರ ಪ್ರಥಮ ವರ್ಷದ ಪಿಎಚ್.ಡಿ ಪ್ರಾರಂಭಿಸಿರಬೇಕು) ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ- I, II(ಎ), III(ಎ) ಹಾಗೂ III(ಬಿ)ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಮಾಸಿದ ವ್ಯಾಸಂಗ ವೇತನ, ಫೆಲೋಶಿಪ್‍ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೊಸ ಅಭ್ಯರ್ಥಿಗಳು ಮಾತ್ರ ಆಫ್-ಲೈನ್ ಮೂಲಕ ಜ. 1 .2024 ರ ಸಂಜೆ 5.30 ಗಂಟೆ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹತೆ
ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಹಿಂದುಳಿದ ವರ್ಗಗಳ ಪ್ರವರ್ಗ- I, II(ಎ), III(ಎ) ಹಾಗೂ III(ಬಿ) ಸೇರಿರಬೇಕು, ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ, ಪ್ರವರ್ಗ 1 ಆದಾಯ ಮಿತಿ ರೂ.4.50 ಲಕ್ಷ II (ಎ) III(ಎ) ಹಾಗೂ III(ಬಿ) ರೂ.3.50 ಲಕ್ಷ, ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರುಬೇಕು, ಅಭ್ಯರ್ಥಿಗಳು ಪೂರ್ಣಾವಧಿ ಪಿಎಚ್.ಡಿ ಅಧ್ಯಯನಕ್ಕಾಗಿ ಮಾಡಿಸುವ ನೋಂದಣಿ ದಿನಾಂಕವು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುವ ವ್ಯಾಸಂಗ ವೇತನ/ಫೆಲೋಶಿಪ್‍ಗಾಗಿ ಅರ್ಜಿ ಸಲ್ಲಿಸಲು ನಿಗಧಿಪಡಿಸುವ ಕೊನೆಯ ದಿನಾಂಕಕ್ಕೆ ಹಿಂದಿನ 2 ವರ್ಷದೊಳಗಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಾಲಿನಿಂದ ಪ್ರಥಮ ವರ್ಷದ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್  https://bcwd.karnataka.gov.in   ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ತಿಳಿದುಕೊಳಬಹುದು ಹಾಗೂ ದೂರವಾಣಿ ಸಂಖ್ಯೆ: 8050770004 (ಕಛೇರಿ ಕಾರ್ಯನಿರ್ವಹಿಸುವ ಸಮಯ ಬೆಳಗ್ಗೆ 10.00 ರಿಂದ ಸಂಜೆ 05.30 ರವರೆಗೆ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ) ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಶಿಕ್ಷಕರು ಹೊಸ ಬೋದನಾ ಸಾಧನಗಳ ಸದ್ಬಳಕೆ ಮಾಡಿಕೊಳ್ಳಿ: ಶಿಕ್ಷಣ ಇಲಾಖೆ, ಉಪನಿರ್ದೇಶಕ ಎಂ ಎಲ್ ಹಂಚಾಟೆ

 

ಬೆಳಗಾವಿ: ಡಿಸೆಂಬರ್ 22:: ಬೋದನೆ ಮತ್ತು ಕಲಿಕಾ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿಸಲು ವಿಶ್ವದಾದದ್ಯಂತ ಶಿಕ್ಷಕರು ಹೊಸ ಬೋದನಾ ಸಾಧನಗಳನ್ನು ಅವಿಷ್ಕರಿಸುತ್ತಿದ್ದಾರೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಅಂತಹ ನಾವಿನ್ಯಯುತ ಮಾದರಿಗಳನ್ನು ಸ್ವತಃ ತಯಾರಿಸಿ ಬೋದನೆಯಲ್ಲಿ ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ವಿಷಯವನ್ನು ಸುಲಭವಾಗಿ ಅರ್ಥೈಸಲು ಹಾಗೂ ತಮ್ಮ ಜ್ಞಾನವನ್ನು ವೃಧ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಚಿಕ್ಕೋಡಿಯ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರಾದ ಎಂ ಎಲ್ ಹಂಚಾಟೆ ಅವರು ಹೇಳಿದರು.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ವತಿಯಿಂದ ಚಿಕ್ಕೋಡಿಯ ಶಾಸಕರ ಮಾದರಿ ಶಾಲೆಯಲ್ಲಿ ಡಿ.18 2023 ರಿಂದ ಡಿ 20 2023 ರ ವರೆಗೆ 3 ದಿನಗಳವರೆಗೆ ಜಿಲ್ಲೆಯ ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರಿಗೆ “ಕಡಿಮೆ ವೆಚ್ಚದ ಶಿಕ್ಷಣ ಸಾಮಗ್ರಿಗಳ ತಯಾರಿಕೆ ಮೂಲಕ ವಿಜ್ಞಾನ ಸಂವಹನ” ವಿಷಯ ಕುರಿತ ಕಾರ್ಯಾಗಾರದ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಪದ್ದತಿಯಲ್ಲಿ ವಿಜ್ಞಾನ ಬೋದಿಸುವುದರಿಂದ ಶಿಕ್ಷಕರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಎ ಸಿ ಗಂಗಾಧರ , ವಿಜ್ಞಾನ ವಿಷಯ ಪರಿವೀಕ್ಷಕರು ಎಚ್ ಎಸ್ ಖಾಡೆ, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮಿಸಾಳೆ, ವಿಕಸನ ಕೇಂದ್ರದ ಅಧ್ಯಕ್ಷರು ಸಂಜಯ ಮಗದುಮ್ ಹಾಗೂ ವಿಜ್ಞಾನ ವಿಷಯ ವೇದಿಕೆಯ ಅಧ್ಯಕ್ಷ ರವೀಂದ್ರ ದೇಮಶೆಟ್ಟಿ ಉಪಸ್ಥಿತರಿದ್ದರು.

 

ಆಧಾರ ಕಾರ್ಡ ಪಡೆಯಲು ಹೆಸರು ನೊಂದಣಿಬೆಳಗಾವಿ: ಡಿಸೆಂಬರ್ 22: ಕೇಂದ್ರ ಸರ್ಕಾರದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ವತಿಯಿಂದ ಸಿದ್ದಪಡಿಸಿರುವ ವಿನೂತನ ತಂತ್ರಜ್ಞಾನ ಮೂಲಕ ಕುಷ್ಠರೋಗದಿಂದ ಬಾಧಿತರು ಹಾಗೂ ಕೈಯಲ್ಲಿನ ಹತ್ತು ಬೆರಳುಗಳು ಹಾಗೂ ಎರಡು ಕಣ್ಣು ಇಲ್ಲದಿದ್ದರೂ ಕೇವಲ ಮುಖ ಚಹರೆ (ಭಾವಚಿತ್ರ) ಮೂಲಕವೇ ಆಧಾರ ನೊಂದಣಿ ಮಾಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯಲ್ಲಿ ಆಧಾರ ಕಾರ್ಡ ಪಡೆಯದೆ ಇರುವುದರಿಂದ ಮಾಸಿಕ ಪೋಷಣಾ ಭತ್ಯೆ/ಪಿಂಚಣಿ ಪಡೆಯಲು ಸಾಧ್ಯವಾಗದೇ ಇರುವ ಕುಷ್ಠ ರೋಗದಿಂದ ಬಾಧಿತರು ಮತ್ತು ಎರಡು ಕಣ್ಣು ಹಾಗೂ ಎರಡು ಕೈಗಳ ಬೆರಳುಗಳು ಇಲ್ಲದಿರುವ ವಿಕಲಚೇತನರು, ಬುದ್ಧಿಮಾಂದ್ಯರು, ಬಹುವಿಧ ಅಂಗವಿಕಲ ವ್ಯಕ್ತಿಗಳು ಆಧಾರಕಾರ್ಡ ನೊಂದಣಿ ಮಾಡಿಸಲು ತಮ್ಮ ಹೆಸರನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಬೆಳಗಾವಿ ಇವರ ಮೋಬೈಲ್ ಸಂಖ್ಯೆ: 8050609098 ಗೆ ವಾಟ್ಸಾಪ್ ಮೂಲಕ ನೊಂದಾಯಿsssಸಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೊಂದಾಯಿಸಲು ದೂರವಾಣಿ ಸಂಖ್ಯೆ: 0831-2476096/7 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಜಾತ್ರೆ ನಿಮಿತ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ

ಬೆಳಗಾವಿ: ಡಿಸೆಂಬರ್ 22 ಜಿಲ್ಲೆಯ ರಾಮದುರ್ಗ ತಾಲೂಕು ಗೊಡಚಿ ಗ್ರಾಮದಲ್ಲಿ ಡಿಸೆಂಬರ್ 25, 2023 ರಿಂದ ಡಿ.30 ರ ವರೆಗೆ ಶ್ರೀ ವೀರಭದ್ರೇಶ್ವರ ಜಾತ್ರೆ ಜರುಗುವ ಸಂದರ್ಭದಲ್ಲಿ ಗೊಡಚಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜಾತ್ರೆಯನ್ನು ಭಕ್ತಿಪೂರ್ವಕವಾಗಿ ಮತ್ತು ಶಾಂತಿಯುತವಾಗಿ ಆಚರಿಸಲು, ಸಾರ್ವಜನಿಕ ಆರೋಗ್ಯ ಹಿತರಕ್ಷಣೆಯ ದೃಷ್ಟಿಯಿಂದ ಗೊಡಚಿ ಗ್ರಾಮದಲ್ಲಿ ಹಾಗೂ ಸುತ್ತಮತ್ತಲಿನ ಗ್ರಾಮಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗ ರುಜಿನಗಳು ಹರಡದಂತೆ ಮತ್ತು ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ. ಪಾಟೀಲ ಅವರು ಆದೇಶದಲ್ಲಿ ಸೂಚಿಸಿದ್ದಾರೆ.////

ಜಾತ್ರೆ ನಿಮಿತ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ

 

ಬೆಳಗಾವಿ: ಡಿಸೆಂಬರ್ 22: ಜಿಲ್ಲೆಯ ಅಥಣಿ ತಾಲೂಕು ಕೊಕಟನೂರ ಗ್ರಾಮದಲ್ಲಿ ಜನವರಿ 06, 2024 ರಿಂದ ಜ.12 ರ ವರೆಗೆ ಶ್ರೀ ಎಲ್ಲಮ್ಮದೇವಿ ಜಾತ್ರೆ ಜರುಗುವ ಸಂದರ್ಭದಲ್ಲಿ ಕೊಕಟನೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜಾತ್ರೆಯನ್ನು ಭಕ್ತಿಪೂರ್ವಕವಾಗಿ ಮತ್ತು ಶಾಂತಿಯುತವಾಗಿ ಆಚರಿಸಲು, ಸಾರ್ವಜನಿಕ ಆರೋಗ್ಯ ಹಿತರಕ್ಷಣೆಯ ದೃಷ್ಟಿಯಿಂದ ಕೊಕಟನೂರ ಗ್ರಾಮದಲ್ಲಿ ಹಾಗೂ ಸುತ್ತಮತ್ತಲಿನ 10 ಕಿ. ಮೀ ಅಂತರದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ರುಜಿನಗಳು ಹರಡದಂತೆ ಮತ್ತು ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ. ಪಾಟೀಲ ಅವರು ಆದೇಶದಲ್ಲಿ ಸೂಚಿಸಿದ್ದಾರೆ.////