Belagavi News In Kannada | News Belgaum

ಕರ್ನಾಟಕ ರಥ ಯಾತ್ರೆಗೆ ಸಂಭ್ರಮದ ಸ್ವಾಗತ

ಕರ್ನಾಟಕ ಹೆಸರಿನ ಕಲ್ಪನೆ ಧಾರವಾಡದಿಂದ: ಲಿಂಗನಗೌಡ

ಕೆಂಭಾವಿ: ಮೈಸೂರು ರಾಜ್ಯವೆಂದು ಕರೆಸಿಕೊಳ್ಳುವ ನಮ್ಮ ನಾಡಿಗೆ ಕರ್ನಾಟಕ ಎಂಬ ಹೆಸರಿನ ಕಲ್ಪನೆ ಮೂಡಿದ್ದೇ ಧಾರವಾಡದಿಂದ ಎಂದು ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಹೇಳಿದರು.
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯ ವಾಕ್ಯದೊಂದಿಗೆ ಕರ್ನಾಟಕ ಸಂಭ್ರಮ 50 ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು
1973 ನವೆಂಬರ 1 ರಂದು ದೇವರಾಜ್ ಅರಸರು ಕರುನಾಡಿಗೆ ಕರ್ನಾಟಕ ರಾಜ್ಯ ಎಂದು ಘೋಷಣೆ ಮಾಡಿದರು. ಈ ಕಾರ್ಯಕ್ಕೆ ಕಲ್ಯಾಣ ಕರ್ನಾಟಕ ಭಾಗದ ವೀರೇಂದ್ರ ಪಾಟೀಲರ ಪರಿಶ್ರಮ ಹಾಗೂ ನಿಜಲಿಂಗಪ್ಪನವರ ಪ್ರಯತ್ನವು ಕೂಡ ಇಲ್ಲಿ ಸ್ಮರಣೀಯ ಎಂದ ಅವರು ಈ ಐತಿಹಾಸಿಕ ದಿನವನ್ನು ವರ್ಷವಿಡಿ ಕನ್ನಡ ನಾಡಿನ ಮೂಲೆ ಮೂಲೆಗು ಕನ್ನಡ ರಥಯಾತ್ರೆಯನ್ನು ಕೊಂಡೊಯ್ಯುವ ಮೂಲಕ 50 ರ ಸಂಭ್ರವನ್ನು ಎಲ್ಲಾ ಕನ್ನಡದ ಮನಸುಗಳು ಸೇರಿ ಆಚರಿಸುತ್ತಿರವುದು ನಾಡು ನುಡಿಗೆ ಕಳಸ ಪ್ರಾಯವಾದಂತಾಗಿದೆ ಎಂದರು.
ಕರ್ನಾಟಕ ಸಂಭ್ರಮ 50 ರ ರಥ ಯಾತ್ರೆ ಪಟ್ಟಣ ಪ್ರವೇಶ ಮಾಡುತ್ತಿದ್ದಂತೆ ತಾಲೂಕು ಆಡಳಿತ, ಸ್ಥಳಿಯ ಆಡಳಿತ, ಕೆಂಭಾವಿ ವಲಯದ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರ ಸಿಬ್ಬಂದಿ  ವಿವಿಧ ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ಕನ್ನಡಾಭಿಮಾನಿಗಳಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಭುವನೇಶ್ವರಿ ಭಾವ ಚಿತ್ರ ಹೊತ್ತು ತಂದ ರಥ ಯಾತ್ರೆಗೆ ಹೀರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಪೂಜೆ ಸಲ್ಲಿಸಿದರು, ತಹಸೀಲ್ದಾರ ಕೆ. ವಿಜಯ ಕುಮಾರ ಮೆರವಣಿಗೆಗೆ  ಚಾಲನೆ ನೀಡಿದರು.  ಪಟ್ಟಣದ ನಾಡ ಕಛೇರಿಯಿಂದ ಆರಂಭವಾದ ಮೆರವಣಿಗೆ ನಿಜ ಶರಣ ಅಂಬಿಗೇರ ಚೌಡಯ್ಯ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಮೂಲಕ ಹಾದು ಸುರಪುರ ಹುನಗುಂದ ರಾಜ್ಯ ಹೆದ್ದಾರಿ ಮುಖೇನ ಜರುಗಿದ ಅದ್ದೂರಿ ಮೆರವಣಿಗೆಗೆ ಬಸವೇಶ್ವರ ವೃತ್ತದಿಂದ ರಥಯಾತ್ರೆಗೆ ಬಿಳ್ಕೊಡಲಾಯಿತು.
ಸಂಭ್ರಮದಲ್ಲಿ ತಾಲೂಕು ಪಂಚಾಯತ್ ಇ.ಓ ಬಸವರಾಜ್ ಸಜ್ಜನ, ಪುರಸಭೆ ಮುಖ್ಯಾಧಿಕಾರಿ ಮಹ್ಮದ್ ಯೂಸೂಪ್, ಬಿ.ಇ.ಓ ಯಲ್ಲಪ್ಪ ಕಾಡ್ಲೂರ್, ಸಂಜೀವರಾವ್ ಕುಲ್ಕರ್ಣಿ, ರವಿ ಸೊನ್ನದ, ಉಪ ತಹಸೀಲ್ದಾರ್ ಮಲ್ಲಿಕಾರ್ಜುನ ಪಾಟೀಲ್, ಕಂದಾಯ ನಿರೀಕ್ಷಕ ರಾಜೆಸಾಬ್, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ್, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಮಡಿವಾಳಪ್ಪ ಹೆಗ್ಗಣದೊಡ್ಡಿ, ವಲಯ ಸಾಹಿತಿ ಬಳಗ, ಪುರಸಭೆ ಸದಸ್ಯರು, ಹಾಗೂ ಸಿಬ್ಬಂದಿ, ವಿವಿಧ ಶಾಲಾ ಶಿಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯ ಕರ್ತೆಯರು, ಕನ್ನಡಪರ ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು,  ಸೇರಿದಂತೆ ಅನೇಕ ವಲಯದ ಕನ್ನಡದ ಮನಸುಗಳು ರಥಯಾತ್ರೆ ಸಂಭ್ರಮದಲ್ಲಿ ಭಾಗವಹಿಸಿದ್ದರು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು.

ರಥಯಾತ್ರೆಗೆ ಮೆರಗು ತಂದ ಸರಕಾರಿ ಶಾಲೆ ಮಕ್ಕಳು:

ಮೆರವಣಿಗೆಯುದ್ದಕ್ಕೂ ಉತ್ತರ ಕರ್ನಾಟಕ ಗಂಡು ಕಲೆ ಡೊಳ್ಳು ಕುಣಿತ, ಕರಡಿ ಮಜಲು ಕಲಾ ಪ್ರದರ್ಶನದಲ್ಲಿ ಕನ್ನಡದ ಮನಸುಗಳು ಹೆಜ್ಜೆಹಾಕಿ ಸಂಭ್ರಮಿಸದರು, ಪಟ್ಟಣದ ವಿವಿಧ ಸರಕಾರಿ ಶಾಲಾ ಮಕ್ಕಳು ಕುಂಬ ಕಳಸದೊಂದಿಗೆ ಮೆರವಣಿಗೆಯುದ್ದಕ್ಕೂ ಲೇಜಿಮ್, ಡಂಬಲ್ಸ ಜತೆ ನೃತ್ಯ ಮಾಡುವುದರ ಮೂಲಕ ಮೆರವಣಿಗೆಗೆ ಹೆಚ್ಚಿನ ಮೆರಗು ತಂದಂದ್ದು‌ ವಿಶೇಷವಾಗಿತ್ತು.