Belagavi News In Kannada | News Belgaum

ಬೆಂಗಳೂರಲ್ಲಿ ಕರವೇ ಕನ್ನಡ ಕಹಳೆ: ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಪೊಲೀಸರು ವಶಕ್ಕೆ

ಬೆಂಗಳೂರು: ನಗರದಲ್ಲಿ ಇಂದು ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅಲ್ಲದೇ ಇಂಗ್ಲೀಷ್ ಬೋರ್ಡ್ ಇರೋ ಅಂಗಡಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಾಡ ನಡೆಸುತ್ತಿದ್ದಾರೆ.

ಹೀಗೆ ಪ್ರತಿಭಟನೆ ಮುಂದಾಳತ್ವ ವಹಿಸಿದ್ದಂತ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಹುಣಸಮಾರನಹಳ್ಳಿ ಬಳಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಗುವಂತೆ ಒತ್ತಾಯಿಸಿ ಕರೇವ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಇಂಗ್ಲೀಷ್ ಬೋರ್ಡ್ ಇರೋ ವಾಣಿಜ್ಯ ಮಳಿಗೆಗಳ ಮೇಲೆ ಕರವೇ ಕಾರ್ಯಕರ್ತರು ದಾಳಿ ಮಾಡಿ, ಧ್ವಂಸಕೂಡ ಮಾಡುತ್ತಿದ್ದಾರೆ.

ಬೆಂಗಳೂರಲ್ಲಿ ಕರವೇ ಪ್ರತಿಭಟನೆ ತೀವ್ರಗೊಂಡಿದ್ದು, ದೇವನಹಳ್ಳಿ ಏರ್ ಪೋರ್ಟ್ ರಸ್ತೆಯ ಹಲವು ಅಂಗಡಿಗಳ ಇಂಗ್ಲೀಷ್ ನಾಮಫಲಕಗಳನ್ನು ಕಿತ್ತುಹಾಕಿ, ಕರವೇ ಕಾರ್ಯಕರ್ತರು ಕನ್ನಡ ನಾಮಫಲಕ ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

ಬೆಂಗಳೂರಿನ ಕರವೇ ಕನ್ನಡ ಕಹಳೆಯ ಸಂದರ್ಭದಲ್ಲಿ ಹೋರಾಟ, ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರನ್ನು ಹಣಸಮಾರನಹಳ್ಳಿ ಬಳಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಕರೆದೊಯ್ಯುತ್ತಿದ್ದರೇ, ಬಸ್ ಅನ್ನು ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರೋದಾಗಿ ತಿಳಿದು ಬಂದಿದೆ.//////